ನೂತನ `Education Policy`ಯಲ್ಲಿ ಯಾವುದೇ ಭೇದಭಾವವಿಲ್ಲ, 21ನೇ ಶತಮಾನದ ಭಾರತಕ್ಕೆ ಅಡಿಪಾಯ: ಪ್ರಧಾನಿ
ಸಾಮಾಜಿಕ ಮಾಧ್ಯಮದಲ್ಲಿ ಈ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗಿದೆ.ಭಾರತದ ಶಾಲೆಗಳು ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವೆ ಮಾಡುವ ಉದ್ದೇಶ ನೂತನ ಶಿಕ್ಷಣ ನೀತಿ ಹೊಂದಿದೆ. ಈ ನೀತಿಯಿಂದ ದೇಶ ವಿಶ್ವದಲ್ಲಿಯೇ ಜ್ಞಾನದ ಸೂಪರ್ ಪವರ್ ಎಂದೆನಿಸಕೊಳ್ಳಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನವದೆಹಲಿ: ದೇಶದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ದೇಶದ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಕಾರ್ಯಕ್ರಮದ ಹೆಸರು ಕಾನ್ಕ್ಲೇವ್ ಆನ್ ಟ್ರಾನ್ಸ್ಫಾರ್ಮೇಷನಲ್ ರಿಫಾರ್ಮ್ಸ್ ಇನ್ ಹೈಯರ್ ಎಜ್ಯುಕೆಷನ್ ಅಂಡರ್ ನ್ಯಾಷನಲ್ ಎಜ್ಯುಕೆಷನ್ ಪಾಲಸಿ ಹೆಸರಿನ ಕಾರ್ಯಕ್ರಮದ ಅಡಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಈ ಕ್ರಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಕೂಡ ಉಪಸ್ಥಿತರಿದ್ದರು.
ಕೇಂದ್ರ ಶಿಕ್ಷಣ ಸಚಿವಾಲಯ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ನೂತನ ಶಿಕ್ಷಣ ನೀತಿ, ಭವಿಷ್ಯದ ಶಿಕ್ಷಣ, ಸಂಶೋಧನೆಗಳಂತಹ ವಿಷಯಗಳ ಕುರಿತು ಚರ್ಚೆ ನಡೆದಿದೆ. ಈ ಸಂದರ್ಭದಲ್ಲಿ ರಮೇಶ ಪೋಖರಿಯಾಲ್, ಇತರ ಮಂತ್ರಿಗಳು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿಯ ಸದಸ್ಯರು ಕೂಡ ಶಾಮೀಲಾಗಿದ್ದರು.
ನೂತನ ರಾಷ್ಟ್ರೀಯ ಶಿಕ್ಷಣ ಬಂದ ಬಳಿಕ ದೇಶದ ಯಾವುದೇ ಕ್ಷೇತ್ರ, ಯಾವುದೇ ವರ್ಗ ತಾರತಮ್ಯದ ಕುರಿತು ಹೇಳಿಕೆ ನೀಡದೆ ಇರುವುದು ಒಂದು ಸಂತಸದ ವಿಷಯವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದ ಸುಧಾರಣೆಯನ್ನು ಕರಡು ಪ್ರತಿಯಲ್ಲಿ ಸೂಚಿಸಲಾಗಿದ್ದು, ಅದನ್ನು ಹೇಗೆ ಅನುಷ್ಠಾನಕ್ಕೆ ತರಲಾಗುವುದು ಎಂಬುದು ಹಲವರ ಪ್ರಶ್ನೆಯಾಗಿದೆ. ಹೀಗಾಗಿ ಎಲ್ಲರ ಕಣ್ಣು ಇದೀಗ ಅನುಷ್ಠಾನದ ಮೇಲಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಇಂದು ದೇಶಾದ್ಯಂತ ಈ ನೀತಿಯನ್ನು ವ್ಯಾಪಕವಾಗಿ ಚರ್ಚಿಸಲಾಗುತ್ತಿದೆ. ವಿವಿಧ ಕ್ಷೇತ್ರಗಳ ಜನರು, ವಿವಿಧ ಸಿದ್ಧಾಂತಗಳ ಜನರು ತಮ್ಮ ಅಭಿಪ್ರಾಯಗಳನ್ನು ನೀಡುತ್ತಿದ್ದಾರೆ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಶೀಲಿಸುತ್ತಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆಯಾಗಿದೆ. ಈ ಚರ್ಚೆ ಎಷ್ಟು ಹೆಚ್ಚಾಗಲಿದೆಯೋ ಅದರ ಲಾಭ ದೇಶದ ಶಿಕ್ಷಣ ಕ್ಷೇತ್ರಕ್ಕೆ ಸಿಗಲಿದೆ. ಮಾಹಿತಿ ಎಷ್ಟೊಂದು ಸ್ಪಷ್ಟವಾಗಲಿದೆಯೋ, ಅಷ್ಟೇ ಈ ನೂತನ ರಾಷ್ಟ್ರೀಯ ಶಿಕ್ಷಣ ನೀತಿನ ಅನುಷ್ಠಾನ ಕೂಡ ಸುಲಭವಾಗಲಿದೆ ಎಂದು ಪ್ರಧಾನಿ ಹೇಳಿದ್ದಾರೆ.