ಚೆನ್ನೈ (ತಮಿಳುನಾಡು) : ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೈದರಾಬಾದ್ ಮತ್ತು ಚೆನ್ನೈ ಪ್ರವಾಸ ಕೈಗೊಂಡಿದ್ದರು. ಒಂದು ದಿನದ ಭೇಟಿಯ ಕೊನೆಯಲ್ಲಿ ಭಾರತೀಯ ಜನತಾ ಪಕ್ಷದ ವಿಶೇಷಚೇತನ ಕಾರ್ಯಕರ್ತನೊಂದಿಗೆ ಸೆಲ್ಫಿ ತೆಗೆದುಕೊಂಡರು. ಶ್ರೀ ಎಸ್ ಮಣಿಕಂದನ್ ಅವರು ಪಕ್ಷದ ಹೆಮ್ಮೆಯ ಸದಸ್ಯ ಎಂದು ಮೋದಿ ಶ್ಲಾಘಿಸಿದರು.  "ಒಂದು ವಿಶೇಷ ಸೆಲ್ಫಿ... ನಾನು ಶ್ರೀ ಎಸ್. ಮಣಿಕಂದನ್ ಅವರನ್ನು ಚೆನ್ನೈನಲ್ಲಿ ಭೇಟಿ ಮಾಡಿದ್ದೇನೆ. ಅವರು ಈರೋಡ್‌ನ ಹೆಮ್ಮೆಯ ತಮಿಳುನಾಡು ಬಿಜೆಪಿ ಕಾರ್ಯಕರ್ತ. ವಿಶೇಷಚೇತನರಾಗಿದ್ದರೂ ಅವರು ಸ್ವಂತ ಅಂಗಡಿ ನಡೆಸುತ್ತಿದ್ದಾರೆ ಮತ್ತು ತಮ್ಮ ದೈನಂದಿನ ಲಾಭದ ಗಣನೀಯ ಭಾಗವನ್ನು ಬಿಜೆಪಿಗೆ ದಾನ ಮಾಡುತ್ತಿದ್ದಾರೆ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Dhanashree Verma : ಚಹಾಲ್ ಪತ್ನಿ ಜೊತೆ ಪಾರ್ಟಿ! ಟೀಂ ಇಂಡಿಯಾ ಕ್ರಿಕೆಟರ್‌ ಫೋಟೋಸ್‌ ವೈರಲ್‌


ಮೊನ್ನೆ ಶನಿವಾರ ಹೈದರಾಬಾದ್‌ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು ಚೆನ್ನೈಗೆ ಆಗಮಿಸಿ ಎರಡೂ ನಗರಗಳಲ್ಲಿ ₹13,700 ಕೋಟಿ ಮೊತ್ತದ ಯೋಜನೆಗಳನ್ನು ಉದ್ಘಾಟಿಸಿದರು. ಚೆನ್ನೈನಲ್ಲಿ, ಅವರು ಚೆನ್ನೈ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಿದರು ಮತ್ತು ಚೆನ್ನೈ-ಕೊಯಂಬತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಗ್ರೀನ್‌ ಸಿಗ್ನಲ್‌ ನೀಡಿದರು.


 


PM Modi Bandipur Visit: ಓಪನ್ ಜೀಪಿನಲ್ಲಿ ʻನಮೋʼ ಸಫಾರಿ.. ಪ್ರಧಾನಿಗೆ ಹುಲಿ ದರ್ಶನ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.