ನವದೆಹಲಿ: ದೇಶದೆಲ್ಲಡೆ 20ನೇ ವರ್ಷದ ಕಾರ್ಗಿಲ್​ ವಿಜಯೋತ್ಸವ ಸಂಭ್ರಮಾಚರಣೆ ನಡೆಯುತ್ತಿದ್ದು, ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು 1999ರಲ್ಲಿ ತಾವು ಕಾರ್ಗಿಲ್​ ಯುದ್ಧದ ಸಮಯದ ಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಕಾರ್ಗಿಲ್​ ವಿಜಯ ದಿವಸದ ಶುಭವನ್ನು ಕೋರಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನ ಮೋದಿ, "1999 ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಸಮಯದಲ್ಲಿ, ಕಾರ್ಗಿಲ್ಗೆ ಹೋಗಿ ನಮ್ಮ ಕೆಚ್ಚೆದೆಯ ಸೈನಿಕರೊಂದಿಗೆ ಕ್ಷಣಕಾಲ ಕಳೆಯುವ ಅವಕಾಶ ನನಗೆ ಸಿಕ್ಕಿತ್ತು. ಹಿಮಾಚಲ ಪ್ರದೇಶ ಮತ್ತು ಜಮ್ಮು-ಕಾಶ್ಮೀರದಲ್ಲಿ ನನ್ನ ಪಕ್ಷಕ್ಕಾಗಿ ನಾನು ಕೆಲಸ ಮಾಡುತ್ತಿದ್ದ ಸಮಯವದು. ಕಾರ್ಗಿಲ್ ಭೇಟಿ ಮತ್ತು ಸೈನಿಕರೊಂದಿಗೆ ಕಳೆದ ಆ ಕ್ಷಣಗಳನ್ನು ಎಂದೂ ಮರೆಯಲಾಗದು" ಎಂದಿದ್ದಾರೆ.

ಇದರೊಂದಿಗೆ ವೀಡಿಯೋವೊಂದನ್ನು ಶೇರ್ ಮಾಡಿರುವ ಮೋದಿ, "ಕಾರ್ಗಿಲ್ ವಿಜಯ್ ದಿನದಂದು ತಾಯಿ ಭಾರತಿಯ ಎಲ್ಲಾ ವೀರ ಪುತ್ರರಿಗೆ ನನ್ನ ಹೃದ್ಪೂರ್ವಕ ವಂದನೆ. ಈ ದಿನ ನಮ್ಮ ಸೈನಿಕರ ಧೈರ್ಯ, ಶೌರ್ಯ ಮತ್ತು ಸಮರ್ಪಣೆಯನ್ನು ನೆನಪಿಸುತ್ತದೆ. ಈ ಸಂದರ್ಭದಲ್ಲಿ, ಮಾತೃಭೂಮಿಯ ರಕ್ಷಣೆಯಲ್ಲಿ ಒಲವು ತೋರಿದ ಆ ಪ್ರಬಲ ಯೋಧರಿಗೆ ನನ್ನ ವಿನಮ್ರ ಗೌರವ. ಜೈ ಹಿಂದ್!" ಎಂದು ಬರೆದಿದ್ದಾರೆ.

ಕಾರ್ಗಿಲ್ ಯುದ್ದದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೈನಿಕರು ವಿಜಯ ಪತಾಕೆ ಹಾರಿಸಿದ ದಿನದಂದು, ದೇಶಕ್ಕಾಗಿ ವೀರ ಯೋಧರ ತ್ಯಾಗ ಮತ್ತು ಬಲಿದಾನವನ್ನು ನೆನೆದು ಅವರಿಗೆ ಅಭಿನಂದನೆ ಸಲ್ಲಿಸುವ ಉದ್ದೇಶದಿಂದ 2 ದಿನ ದೇಶಾದ್ಯಂತ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ.