PM Modi: `ಪ.ಬಂಗಾಳದಲ್ಲಿ ಬದಲಾವಣೆ ತರಲು ಬಿಜೆಪಿಯಿಂದ ಮಾತ್ರ ಸಾಧ್ಯ`
ಯಾರಾದರೂ ಭಾರತ್ ಮಾತಾಕೀ ಜೈ ಎಂದರೇ ಮಮತಾ ಬ್ಯಾನರ್ಜಿ ಸಿಡಿದೇಳುತ್ತಾರೆ. ಆದರೇ ಯಾರಾದರೂ ದೇಶವಿರೋಧಿ ಘೋಷಣೆ ಕೂಗುವಾಗ ಅವರು ತಮ್ಮ ತಾಳ್ಮೆಯನ್ನು ಕಳೆದುಕೊಳ್ಳುವುದಿಲ್ಲ.
ಪಶ್ಚಿಮಬಂಗಾಳ: ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮಬಂಗಾಳ ಸರ್ಕಾರ ಕುತಂತ್ರ ರಾಜಕಾರಣ, ಭ್ರಷ್ಟಚಾರದಲ್ಲಿ ಮಾತ್ರ ತೊಡಗಿದ್ದಲ್ಲದೆ, ಪೊಲೀಸ್ ವ್ಯವಸ್ಥೆಯನ್ನು ಕೂಡ ರಾಜಕೀಯಗೊಳಿಸಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಹಲ್ಡಿಯಾದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ(PM Modi), ಯಾರಾದರೂ ಭಾರತ್ ಮಾತಾಕೀ ಜೈ ಎಂದರೇ ಮಮತಾ ಬ್ಯಾನರ್ಜಿ ಸಿಡಿದೇಳುತ್ತಾರೆ. ಆದರೇ ಯಾರಾದರೂ ದೇಶವಿರೋಧಿ ಘೋಷಣೆ ಕೂಗುವಾಗ ಅವರು ತಮ್ಮ ತಾಳ್ಮೆಯನ್ನು ಕಳೆದುಕೊಳ್ಳುವುದಿಲ್ಲ. ಯೋಗ, ಭಾರತದ ಚಹಾ ಮತ್ತು ಇತರೆ ವಸ್ತುಗಳ ಹೆಸರನ್ನು ಕೆಡಿಸಲು ಜಾಗತಿಕ ಮಟ್ಟದಲ್ಲಿ ಪಿತೂರಿ ನಡೆಸಲಾಗುತ್ತಿದೆ. ಆದರೂ 'ಮಮತಾ ದೀದಿ' ಈ ಕುರಿತು ಮಾತನಾಡುತ್ತಿಲ್ಲ. ಭಾರತದ ವಿರುದ್ಧ ಪಿತೂರಿ ನಡೆಸುತ್ತಿರುವವರಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇನೆ ಪ್ರಧಾನಿ ಮೋದಿ ತಿಳಿಸಿದ್ದಾರೆ.
"ಭಾರತದ ವಿರುದ್ಧ ಪಿತೂರಿ ನಡೆದಾಗ ದೀದಿ ಕೋಪಗೊಳ್ಳುವುದಿಲ್ಲ"
ಮಾ, ಮಾಟಿ, ಮಾನುಷ್ (ತಾಯಿ, ಭೂಮಿ, ಜನರು) ಎಂಬ ಟಿಎಂಸಿ ಪಕ್ಷದ ಘೋಷಣೆ ಕೂಗುವವರು ಭಾರತ್ ಮಾತಾ ಕುರಿತು ಧ್ವನಿಯೆತ್ತುವುದಿಲ್ಲ. ಇದರಿಂದಾಗಿಯೇ ಪಶ್ಚಿಮಬಂಗಾಳ(Paschim Bengal)ದಲ್ಲಿ ಕುತಂತ್ರ ರಾಜಕಾರಣ, ಭ್ರಷ್ಟಚಾರ ಮುಂತಾದವು ತಾಂಡವವಾಡುತ್ತಿದೆ ಎಂದು ಕಿಡಿಕಾರಿದರು.
Accident ಸಂಭವಿಸುತ್ತಲೇ Ambulenceಗೆ ಮಾಹಿತಿ ಸಿಗಲಿದೆ, Hi-Tech ಸಿಸ್ಟಂ ಸಿದ್ಧತೆಯಲ್ಲಿ ಕೇಂದ್ರ ಸರ್ಕಾರ
ಕೇವಲ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದರೆ ಮಾತ್ರ ಪಶ್ಚಿಮ ಬಂಗಾಳದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ. ಆಡಳಿತ ದುರಾವಸ್ಥೆಯನ್ನು ಆ ಮೂಲಕ ಕಿತ್ತೊಗೆಯಬಹುದು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
'ಕೇಂದ್ರವು ಲತಾ ಮಂಗೇಶ್ಕರ್ ಮತ್ತು ಸಚಿನ್ ಅವರ ಪ್ರತಿಷ್ಠೆಯನ್ನು ಕಸಿದುಕೊಳ್ಳಬಾರದು'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.