ನವದೆಹಲಿ: ರಫೇಲ್ ಯುದ್ಧವಿಮಾನಗಳು ಹರಿಯಾಣದ ಅಂಬಾಲಾ ವಾಯುನೆಲೆಯಲ್ಲಿ ಸುರಕ್ಷಿತ ಲ್ಯಾಂಡಿಂಗ್ ಮಾಡಿವೆ. ಲ್ಯಾಂಡಿಂಗ್ ಹಿನ್ನಲೆ ಅಂಬಾಲಾ ವಾಯುನೆಲೆಯಲ್ಲಿ ಪೊಲೀಸರು ಮಿಲಿಟರಿ ನೆಲೆಯ ಸುತ್ತ ಬಿಗಿ ಭದ್ರತೆಯನ್ನು ಕೈಗೊಂಡಿದ್ದರು. ಭಾರತೀಯ ವಾಯುನೆಲೆಯಲ್ಲಿ ಐದು ರಾಫೆಲ್ ವಿಮಾನಗಳು ಆಗಮಿಸಿದಾಗ, ಯುದ್ಧನೌಕೆ ಐಎನ್ಎಸ್ ಕೋಲ್ಕತಾ ಸ್ವಾಗತ ಕೋರಿ - ಇದೊಂದು ಹೆಮ್ಮೆಯ ಹಾರಾಟ, ಹ್ಯಾಪಿ ಲ್ಯಾಂಡಿಂಗ್ ಎಂದು ಶುಭ ಕೊರಿತ್ತು.


COMMERCIAL BREAK
SCROLL TO CONTINUE READING

ಇದೇ ವೇಳೆ ಪಿಎಂ ನರೇಂದ್ರ ಮೋದಿ(PM Narendra Modi), ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 5 ರಫೇಲ್ ವಿಮಾನಗಳ ಐತಿಹಾಸಿಕ ಲ್ಯಾಂಡಿಂಗ್ ಬಗ್ಗೆ ಟ್ವೀಟ್ ಮಾಡಿದ್ದಾರೆ.


ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ. ರಾಷ್ಟ್ರ ರಕ್ಷಣೆಯಂತಹ ಪುಣ್ಯವಿಲ್ಲ, ರಾಷ್ಟ್ರ ರಕ್ಷಣೆಯಂತಹ ವೃತವಿಲ್ಲ, ರಾಷ್ಟ್ರ ರಕ್ಷಣೆಗಿಂತ ದೊಡ್ಡ ಯಜ್ಞ ಮತ್ತೊಂದಿಲ್ಲ ಎಂದಿದ್ದಾರೆ.



ಇನ್ನೊಂದೆಡೆ ರಾಫೆಲ್ ಯುದ್ಧ ವಿಮಾನಗಳ ಐತಿಹಾಸಿಕ ಲ್ಯಾಂಡಿಂಗ್ ಕುರಿತು ಟ್ವೀಟ್ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, "ಈ ಲೋಹದ ಹಕ್ಕಿಗಳು ಸುರಕ್ಷಿತವಾಗಿ ಅಂಬಾಲಾ ಏರ್ಬೇಸ್ ನಲ್ಲಿ ಲ್ಯಾಂಡಿಂಗ್ ಮಾಡಿವೆ" ಎಂದಿದ್ದಾರೆ.



ಇನ್ನೊಂದೆಡೆ ಈ ಕುರಿತು ಟ್ವೀಟ್ ಮಾಡಿರುವ ಗೃಹ ಸಚಿವ ಅಮಿತ್ ಷಾ, "ವೇಗದ ಬಗ್ಗೆ ಅಥವಾ ಶಸ್ತ್ರಾಸ್ತ್ರಗಳ ಸಾಮರ್ಥ್ಯದ ಬಗ್ಗೆ ಆಗಲಿ ರಫೇಲೆ ಎಲ್ಲದರಲ್ಲೂ ಮುಂದಿದೆ. ಈ ವಿಶ್ವ ದರ್ಜೆಯ ಫೈಟರ್ ಜೆಟ್‌ಗಳು ಗೇಮ್ ಚೇಂಜರ್ ಆಗಲಿವೆ ಎಂದು ನಾನು ನಂಬುತ್ತೇನೆ. ಈ ಮಹತ್ವದ ದಿನದಂದು ಪಿಎಂ ಮೋದಿ ಜಿ, ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಜಿ, ಭಾರತೀಯ ವಾಯುಪಡೆ ಮತ್ತು ಇಡೀ ದೇಶಕ್ಕೆ ಅಭಿನಂದನೆಗಳು" ಎಂದಿದ್ದಾರೆ.



ಫ್ರೆಂಚ್ ಬಂದರು ಬೋರ್ಡೂದಲ್ಲಿನ ಮರಿಗ್ನಾಕ್ ವಾಯುನೆಲದಿಂದ ಸೋಮವಾರ ಈ ಯುದ್ಧವಿಮಾನಗಳು ತನ್ನ ಹಾರಾಟ ಆರಂಭಿಸಿದ್ದವು. ಸುಮಾರು 7,000 ಕಿ.ಮೀ ದೂರವನ್ನು ಕ್ರಮಿಸಿದ ನಂತರ ಈ ವಿಮಾನಗಳು ಬುಧವಾರ ಮಧ್ಯಾಹ್ನ ಅಂಬಾಲಾ ತಲುಪಿವೆ. ಈ ವಿಮಾನಗಳಲ್ಲಿ ಒಂದು ಆಸನ ಇರುವ ಮೂರು ಹಾಗೂ ಎರಡು ಆಸನಗಳನ್ನು ಹೊಂದಿರುವ ಎರಡು ಯುದ್ಧವಿಮಾನಗಳು ಇವೆ.