ವಿಜಯ್ ಮಲ್ಯ ಪರಾರಿಯಾಗಲು `ಸಿಬಿಐ`ನಲ್ಲಿನ ಮೋದಿಯ ನೀಲಿಗಣ್ಣಿನ ಹುಡುಗ ಕಾರಣ-ರಾಹುಲ್ ಗಾಂಧಿ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ಸರ್ಕಾರದ ಮೇಲೆ ಟೀಕಾ ಪ್ರಹಾರ ಮುಂದುವರೆಸಿದ್ದು ವಿಜಯ್ ಮಲ್ಯ ವಿದೇಶಕ್ಕೆ ಪರಾರಿಯಾಗಲು ಸಿಬಿಐನಲ್ಲಿರುವ ಮೋದಿಯ ನೀಲಿಗಣ್ಣಿನ ಹುಡುಗ ಕಾರಣ ಎಂದು ತಿಳಿಸಿದ್ದಾರೆ.
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ಸರ್ಕಾರದ ಮೇಲೆ ಟೀಕಾ ಪ್ರಹಾರ ಮುಂದುವರೆಸಿದ್ದು ವಿಜಯ್ ಮಲ್ಯ ವಿದೇಶಕ್ಕೆ ಪರಾರಿಯಾಗಲು ಸಿಬಿಐನಲ್ಲಿರುವ ಮೋದಿಯ ನೀಲಿಗಣ್ಣಿನ ಹುಡುಗ ಕಾರಣ ಎಂದು ತಿಳಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ " ಸಿಬಿಐ ಜಂಟಿ ನಿರ್ದೇಶಕ ಮಲ್ಯ ಅವರ ನೋಟಿಸ್ ನ್ನು ದುರ್ಬಲಗೊಳಿಸಿ ಅವರನ್ನು ಪರಾರಿಯಾಗಲು ಅವಕಾಶ ನೀಡಿದ್ದಾರೆ.
ಗುಜರಾತ್ ಕೇಡರ್ ನ ಅಧಿಕಾರಿ ಶರ್ಮಾ ಸಿಬಿಐ ನಲ್ಲಿರುವ ಪ್ರಧಾನಿಯ ನೀಲಿಗಣ್ಣಿನ ಹುಡುಗ,ಅದೇ ಅಧಿಕಾರಿ ನೀರವ್ ಮೋದಿ ಮತ್ತು ಮೆಹುಲ್ ಚೋಸ್ಕಿ ಅವರ ಪರಾರಿ ಯೋಜನೆಯ ಉಸ್ತುವಾರಿಯನ್ನು ವಹಿಸಿದ್ದರು" ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಕುಟುಕಿದ್ದಾರೆ.
ಇತ್ತೀಚಿಗೆ ವಿಜಯ್ ಮಲ್ಯ ಭಾರತವನ್ನು ಬಿಡುವ ಮೊದಲು ಅರುಣ್ ಜೈಟ್ಲಿಯನ್ನು ತಮ್ಮ ಕೇಸ್ ಗಳಿಗೆ ಮುಕ್ತಿ ಹಾಡುವ ನಿಟ್ಟಿನಲ್ಲಿ ಆಫರ್ ಕುರಿತಾಗಿ ಭೇಟಿಯಾಗಿದ್ದೆ ಎಂದು ಹೇಳಿ ರಾಜಕೀಯ ವಲಯದಲ್ಲಿ ತಲ್ಲನವನ್ನೇ ಸೃಷ್ಟಿಸಿದ್ದರು.