ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಅಕ್ಟೋಬರ್ 25, 2021) ಉತ್ತರ ಪ್ರದೇಶಕ್ಕೆ ದೀಪಾವಳಿ ಉಡುಗೊರೆಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ಒಂಬತ್ತು ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಿದರು. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮ್ಮುಖದಲ್ಲಿ ಪ್ರಧಾನಿ ಮೋದಿ ವೈದ್ಯಕೀಯ ಕಾಲೇಜುಗಳನ್ನು ಸಿದ್ಧಾರ್ಥನಗರ ಜಿಲ್ಲೆಯಿಂದ ಉದ್ಘಾಟಿಸಿದರು.


COMMERCIAL BREAK
SCROLL TO CONTINUE READING

ಈ ವೈದ್ಯಕೀಯ ಕಾಲೇಜುಗಳನ್ನು(Medical Colleges) 2,329 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ ಮತ್ತು ಸಿದ್ಧಾರ್ಥನಗರ, ಇಟಾಹ್, ಹರ್ದೋಯಿ, ಪ್ರತಾಪಗಢ, ಫತೇಪುರ್, ಡಿಯೋರಿಯಾ, ಗಾಜಿಪುರ, ಮಿರ್ಜಾಪುರ್ ಮತ್ತು ಜೌನ್ಪುರ್ ಜಿಲ್ಲೆಗಳಲ್ಲಿವೆ.


ಇದನ್ನೂ ಓದಿ : LIC ಯ ಈ ಯೋಜನೆಯಲ್ಲಿ ಕೇವಲ 200 ರೂ. ಹೂಡಿಕೆ ಮಾಡಿ, 28 ಲಕ್ಷ ರೂ. ಗಳಿಸಿ!


ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಂದಿದ ಪಿಎಂ ಮೋದಿ(Narendra Modi), "ಒಂಬತ್ತು ಹೊಸ ವೈದ್ಯಕೀಯ ಕಾಲೇಜುಗಳಲ್ಲಿ ಸುಮಾರು ಎರಡೂವರೆ ಸಾವಿರ ಹೊಸ ಹಾಸಿಗೆಗಳನ್ನು ಸೃಷ್ಟಿಸಲಾಗಿದೆ, ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ. ಪೂರ್ವಾಂಚಲ್ ಈಗ ದೇಶದ ಹೊಸ ವೈದ್ಯಕೀಯ ಕೇಂದ್ರವಾಗಲಿದೆ" ಎಂದರು.


Prime Minister's Office)ದ ಪ್ರಕಾರ, ಜಿಲ್ಲಾ ಅಥವಾ ರೆಫರಲ್ ಆಸ್ಪತ್ರೆಗಳೊಂದಿಗೆ ಜೋಡಿಸಲಾದ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಕೇಂದ್ರೀಯ ಪ್ರಾಯೋಜಿತ ಯೋಜನೆಯಡಿಯಲ್ಲಿ ಎಂಟು ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ ಮತ್ತು ಜೌನ್ಪುರದಲ್ಲಿನ ಕಾಲೇಜುಗಳನ್ನು ರಾಜ್ಯ ಸರ್ಕಾರವು ತನ್ನ ಸ್ವಂತ ಸಂಪನ್ಮೂಲಗಳ ಮೂಲಕ ಕಾರ್ಯಗತಗೊಳಿಸಿದೆ ಎಂದು ತಿಳಿಸಿದೆ.


India Post Recruitment 2021: 10ನೇ ತರಗತಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ, ಇಂದೇ ಅರ್ಜಿ ಸಲ್ಲಿಸಿ


ಇಲ್ಲಿಂದ ಪಿಎಂ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿ(Varanasi)ಗೆ ತೆರಳಲಿದ್ದಾರೆ, ಅಲ್ಲಿ ಅವರು ಪಿಎಂ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ಅನ್ನು ಪ್ರಾರಂಭಿಸಲಿದ್ದಾರೆ. ವಾರಣಾಸಿಗೆ ಸುಮಾರು 5200 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅವರು ಉದ್ಘಾಟಿಸಲಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ