ಸಂಸತ್ತಿನಲ್ಲಿ ಸುದೀರ್ಘ ಭಾಷಣ ಮಾಡಿದವರಲ್ಲಿ ಪ್ರಧಾನಿ ಮೋದಿ ಮೊದಲಿಗರೇನಲ್ಲ !
ಭಾರತದ ಸಂಸತ್ತಿನ ಇತಿಹಾಸದಲ್ಲಿ ಸುದೀರ್ಘ ಭಾಷಣ ಮಾಡಿದವರಲ್ಲಿ ಮೋದಿ ಮೊದಲಿಗರೇನಲ್ಲ. ಈ ಹಿಂದೆ ಸಂಸತ್ತಿನಲ್ಲಿ ತಮ್ಮ ಅಭಿಪ್ರಾಯ ಮಂಡಿಸಲು ಸುದೀರ್ಘ ಸಮಯ ತೆಗೆದುಕೊಂಡ ಬಹಳಷ್ಟು ನಾಯಕರನ್ನು ನಾವು ಕಾಣಬಹುದು.
ನವದೆಹಲಿ : ಲೋಕಸಭೆಯಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರು ಸುಧೀರ್ಘ ಭಾಷಣ ಮಾಡಿದರಲ್ಲದೆ, ಇದಕ್ಕಾಗಿ ಅವರು ಸುಮಾರು 1 ಗಂಟೆ ಮತ್ತು 31 ನಿಮಿಷಗಳ ಕಾಲ ತೆಗೆದುಕೊಂಡರು. ಹಾಗೆಂದ ಮಾತ್ರಕ್ಕೆ ಭಾರತದ ಸಂಸತ್ತಿನ ಇತಿಹಾಸದಲ್ಲಿ ಸುದೀರ್ಘ ಭಾಷಣ ಮಾಡಿದವರಲ್ಲಿ ಮೋದಿ ಮೊದಲಿಗರೇನಲ್ಲ. ಈ ಹಿಂದೆ ಸಂಸತ್ತಿನಲ್ಲಿ ತಮ್ಮ ಅಭಿಪ್ರಾಯ ಮಂಡಿಸಲು ಸುದೀರ್ಘ ಸಮಯ ತೆಗೆದುಕೊಂಡ ಬಹಳಷ್ಟು ನಾಯಕರನ್ನು ನಾವು ಕಾಣಬಹುದು.
ಹೀಗೆ ಸಂಸತ್ತಿನ ದೀರ್ಘ ಭಾಷಣಗಳನ್ನು ಮಾಡಿದವರ ಪಟ್ಟಿ ಇಲ್ಲಿದೆ:
ತಮ್ಮ 13 ದಿನಗಳ ಸರ್ಕಾರದ ನಂತರ 1996 ರ ಮೇ 27 ರಂದು ಸಂಸತ್ತಿನಲ್ಲಿ ವಿಶ್ವಾಸಾರ್ಹ ಮತ ನಿರ್ಣಯ ಸಂದರ್ಭದಲ್ಲಿ ಮಾತನಾಡಿದ ಅಟಲ್ ಬಿಹಾರಿ ವಾಜಪೇಯಿ ಅವರು ಸುಮಾರು ಒಂದೂವರೆ ಗಂಟೆಗಳ ಭಾಷಣ ಮಾಡಿದ್ದರು.
ಆಗಸ್ಟ್ 3, 2017 ರಂದು ರಾಜ್ಯಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್ ಅವರು, ಪಾಕಿಸ್ತಾನ, ಚೀನಾ ಮತ್ತು ಯುಎಸ್ಎಗಳೊಂದಿಗೆ ಭಾರತದ ಸಂಬಂಧಗಳ ಕುರಿತು ಸುಮಾರು 50 ನಿಮಿಷಕ್ಕೂ ಹೆಚ್ಚು ಕಾಲ ಭಾಷಣ ಮಾಡಿದ್ದರು.
ಫೆಬ್ರವರಿ 5, 2018 ರಂದು ಬಜೆಟ್ ಅಧಿವೇಶನದ ಆರಂಭದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಮೊದಲ ಸಂಸತ್ತಿನ ಭಾಷಣದಲ್ಲಿ ಒಂದು ಗಂಟೆ ಅವಧಿಯನ್ನು ತೆಗೆದುಕೊಂದಿದ್ದರು.
ಬಿಜೆಪಿಯ ಅಧ್ಯಕ್ಷ ಅಮಿತ್ ಷಾ ಅವರು ಸಂಸದರಾಗಿ ಮಾಡಿದ ಮೊದಲ ಭಾಷಣವು 1 ಗಂಟೆ 20 ನಿಮಿಷಗಳ ಕಾಲ ನಡೆಯಿತು.
ಲೋಕಸಭೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ನವೆಂಬರ್ 26, 2015ರ ಸಂವಿಧಾನದ ದಿನ ದಂದು ಮಾಡಿದ ಲೋಕಸಭೆಯ ಭಾಷಣದ ಅವಧಿ 40 ನಿಮಿಷಗಳು.
ಆಗಸ್ಟ್ 19, 2003 ರಂದು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಬಗ್ಗೆ ಸುಷ್ಮಾ ಸ್ವರಾಜ್ ಅವರ ಭಾಷಣವು ಸುಮಾರು 1 ಗಂಟೆ 45 ನಿಮಿಷಗಳಷ್ಟು ದೀರ್ಘವಾಗಿತ್ತು. ಅವರು ಆ ಸಮಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರದ ಭಾಗವಾಗಿದ್ದರು.
ಫೆಬ್ರುವರಿ 2017 ಮತ್ತು ಫೆಬ್ರುವರಿ 2016 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎರಡೂ ಭಾಷಣಗಳು ಒಂದು ಗಂಟೆಯ ಕಾಲ ನಡೆಯಿತು. ಈ ಎರಡೂ ಭಾಷಣಗಳು ಇಂದಿನ ಬಜೆಟ್ ಭಾಷಣದಂತೆ ಇದ್ದವು.