ನವದೆಹಲಿ: ಹತ್ತನೇ ತರಗತಿ ಮತ್ತು ಹನ್ನೆರಡನೇ ತರಗತಿ ಬೋರ್ಡ್ ಪರೀಕ್ಷೆಗಳು ಹತ್ತಿರವಾಗುತ್ತಿದ್ದಂತೆ ವಿದ್ಯಾರ್ಥಿಗಳ ಮೇಲೆ ಒಂದು ರೀತಿಯ ಒತ್ತಡ ಹೆಚ್ಚಾಗುತ್ತಿರುತ್ತದೆ. ವಿದ್ಯಾರ್ಥಿಗಳು ಇಂತಹ ಒತ್ತಡಗಳಿಗೆ ಒಳಗಾಗದಂತೆ ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರಿಗೆ ಹಾಗೂ ಪೋಷಕರಿಗೆ ಸಲಹೆಗಳನ್ನು ನೀಡಲು ಇದೇ ತಿಂಗಳ 20 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.


COMMERCIAL BREAK
SCROLL TO CONTINUE READING

'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಸಾಕಷ್ಟು ವಿದ್ಯಾರ್ಥಿಗಳು ಉತ್ಸುಕರಾಗಿದ್ದು,  ಈವರೆಗೂ ಎರಡೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಚ್‌ಆರ್‌ಡಿ)ದಿಂದ ಮಾಹಿತಿ ಲಭ್ಯವಾಗಿದೆ. ಈ ಸಂಖ್ಯೆ ಕಳೆದ ವರ್ಷಕ್ಕಿಂತ ಒಂದು ಲಕ್ಷ ಹೆಚ್ಚಾಗಿದೆ ಎಂಬುದು ಗಮನಾರ್ಹವಾಗಿದೆ.


ಪರೀಕ್ಷಾ ಪೇ ಚರ್ಚಾ ಮೂರನೇ ಆವೃತ್ತಿ:
ಪರೀಕ್ಷೆಯ ಒತ್ತಡವನ್ನು ತೆಗೆದುಹಾಕಲು ಜನವರಿ 20 ರಂದು ದೆಹಲಿಯಲ್ಲಿ ಪಿಎಂ ಮೋದಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ವಿಶೇಷವೆಂದರೆ, ಈ ಕಾರ್ಯಕ್ರಮವು 2013 ರಲ್ಲಿ ಪ್ರಾರಂಭವಾಯಿತು. ಇದು ಕಾರ್ಯಕ್ರಮದ ಮೂರನೇ ಆವೃತ್ತಿ ಆಗಿದೆ.


ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರಧಾನಮಂತ್ರಿಗಳ ಸಂವಹನ ಕಾರ್ಯಕ್ರಮದ ಮೊದಲ ಆವೃತ್ತಿ "ಪರೀಕ್ಷಾ ಪೇ ಚರ್ಚಾ 1.0" ಫೆಬ್ರವರಿ 16, 2018 ರಂದು ನವದೆಹಲಿಯ ಟಾಕಟೋರಾ ಕ್ರೀಡಾಂಗಣದಲ್ಲಿ ನಡೆಯಿತು. ಈ ಸಂವಾದ ಕಾರ್ಯಕ್ರಮದ ಎರಡನೇ ಆವೃತ್ತಿಯಾದ "ಪರೀಕ್ಷಾ ಪೇ ಚರ್ಚಾ 2.0" ಸಹ ದೆಹಲಿ 29 ಜನವರಿ 2019 ರಂದು ನ್ಯೂ ಟಾಕಟೋರಾ ಕ್ರೀಡಾಂಗಣದಲ್ಲಿ ನಡೆಯಿತು. 


ಶಾಲಾ ವಿದ್ಯಾರ್ಥಿಗಳೊಂದಿಗೆ "ಪರೀಕ್ಷಾ ಪೇ ಚರ್ಚಾ 2020" ಕಾರ್ಯಕ್ರಮದ ಮೂರನೇ ಆವೃತ್ತಿಯನ್ನು 2020 ರ ಜನವರಿ 16 ರಂದು ನವದೆಹಲಿಯ ಟಾಕಟೋರಾ ಕ್ರೀಡಾಂಗಣದಲ್ಲಿ ನಡೆಸಲು ನಿಗದಿಯಾಗಿತ್ತು. ಆದಾಗ್ಯೂ, ಪೊಂಗಲ್ / ಮಕರ ಸಕ್ರಾಂತಿ ಕಾರಣ ದಕ್ಷಿಣ ರಾಜ್ಯಗಳಲ್ಲಿನ ಶಾಲಾ ರಜಾದಿನಗಳನ್ನು ಗಮನದಲ್ಲಿಟ್ಟುಕೊಂಡು, ಇದನ್ನು ಜನವರಿ 20, 2020 ರಂದು ದೆಹಲಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.