ನವದೆಹಲಿ: ನೀವು ಸಹ ಮೊದಲ ಬಾರಿಗೆ ನಿಮ್ಮ ಮನೆಯನ್ನು ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ನೀವು ಪ್ರಧಾನ್ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ)ಯ ಲಾಭ ಪಡೆಯಬಹುದು. ಕೇಂದ್ರ ಸರ್ಕಾರವು ಪಿಎಂ ಆವಾಸ್ ಯೋಜನೆಯಡಿ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ (ಸಿಎಲ್‌ಎಸ್ಎಸ್) ಅನ್ನು 2021 ಮಾರ್ಚ್ 31 ರವರೆಗೆ ವಿಸ್ತರಿಸಿದೆ. ಈ ಯೋಜನೆಯ ಲಾಭವನ್ನು ವಾರ್ಷಿಕ ಆದಾಯ 6 ಲಕ್ಷದಿಂದ 18 ಲಕ್ಷದವರೆಗಿನವರಿಗೆ ಮಾತ್ರ ಸಿಗುತ್ತದೆ ಮಾತು ಅವರು ಮೊದಲ ಬಾರಿಗೆ ಮನೆ ಖರೀದಿಸುತ್ತಿರಬೇಕು ಎಂಬುದು ಇಲ್ಲಿ ಗಮನಾರ್ಹ. ಈ ಯೋಜನೆಯಡಿ, ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಗೃಹ ಸಾಲದ ಮೇಲಿನ ಬಡ್ಡಿ ಬಡ್ಡಿ ಮೇಲೆ ಸಬ್ಸಿಡಿ ನೀಡಲಾಗುತ್ತದೆ. ಈ ಸಬ್ಸಿಡಿ ಗರಿಷ್ಠ 2.67 ಲಕ್ಷ ರೂ. ಇರುವ ಸಾಧ್ಯತೆ ಇದೆ. ನೀವೂ ಈ ಯೋಜನೆಗೆ ಅರ್ಹರಾಗಿದ್ದರೆ ನೀವು ಅದರ ಲಾಭವನ್ನು ಪಡೆಯಬಹುದು. ಆದರೆ ಅದಕ್ಕೂ ಮೊದಲು ನೀವು ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.


COMMERCIAL BREAK
SCROLL TO CONTINUE READING

ಆದಾಯಕ್ಕೆ ಅನುಗುಣವಾಗಿ ನಾಲ್ಕು ವಿವಿಧ ಕೆಟಗರಿಗಳಿವೆ
ವಾರ್ಷಿಕವಾಗಿ 3 ರಿಂದ 6 ಲಕ್ಷ ರೂ.ಆದಾಯ ಹೊಂದಿದವರು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಮತ್ತು ಲೋ ಇನ್ಕಮ್ ಗ್ರುಪ್ (LIG), 6 ರಿಂದ 12 ಲಕ್ಷ ವಾರ್ಷಿಕ ಆದಾಯ ಹೊಂದಿದವರು ಮಿಡಲ್ ಇನ್ಕಮ್ ಗ್ರೂಪ್ (MIG) ಹಾಗೂ 12 ರಿಂದ 18 ಲಕ್ಷ ರೂ ವಾರ್ಷಿಕ ಆದಾಯ ಹೊಂದಿದವರು ಮಿಡಲ್ ಇನ್ಕಮ್ ಗ್ರೂಪ್ 2 (MIG2),ಅದಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿದವರು ಹೈ ಇನ್ಕಮ್ ಗ್ರೂಪ್ (HIG) ಎಂಬ ನಾಲ್ಕು ವಿವಿಧ ಕೆಟಗರಿಗಳನ್ನು ನಿರ್ಮಿಸಲಾಗಿದೆ.


ಯಾರಿಗೆ ಎಷ್ಟು ಸಬ್ಸಿಡಿ ಸಿಗುತ್ತದೆ?
- ನಿಮ್ಮ ಆದಾಯವು ವಾರ್ಷಿಕ 6 ಲಕ್ಷ ರೂ.ಗಳಾಗಿದ್ದರೆ, ನಿಮಗೆ 6 ಲಕ್ಷ ರೂ.ಗಳ ಸಾಲದ ಮೇಲೆ 6.5 ಪ್ರತಿಶತದಷ್ಟು ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸಿಗುತ್ತದೆ. ಸಾಲವು ಗರಿಷ್ಠ 20 ವರ್ಷಗಳವರೆಗೆ ಇರಬೇಕು.
- 12 ಲಕ್ಷ ರೂ.ವರೆಗೆ ಗಳಿಸುವವರಿಗೆ 9 ಲಕ್ಷ ರೂ.ವರೆಗಿನ ಸಾಲದ ಮೇಲೆ ಶೇ 4 ರಷ್ಟು ಬಡ್ಡಿ ಸಬ್ಸಿಡಿ ರೂಪದಲ್ಲಿ ಸಿಗುತ್ತದೆ. ಸಾಲವು ಗರಿಷ್ಠ 20 ವರ್ಷಗಳವರೆಗೆ ಇರಬೇಕು.
- 18 ಲಕ್ಷ ರೂ.ವರೆಗೆ ಗಳಿಸುವವರಿಗೆ 12 ಲಕ್ಷ ರೂ.ವರೆಗಿನ ಸಾಲದ ಮೇಲೆ ಶೇ 3 ರಷ್ಟು ಬಡ್ಡಿ ಸಬ್ಸಿಡಿ ರೂಪದಲ್ಲಿ ದೊರೆಯುತ್ತದೆ. ಸಾಲವು ಗರಿಷ್ಠ 20 ವರ್ಷಗಳವರೆಗೆ ಇರಬೇಕು.
ಗಮನಿಸಿ: ಪಿಎಂಎವೈನಲ್ಲಿನ ಸಬ್ಸಿಡಿಯ ಪ್ರಮಾಣವು ನಿಮ್ಮ ಸಾಲದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಇದರಿಂದಾಗಿ ನಿಮ್ಮ ಮೇಲಿನ ಬಡ್ಡಿ ಹೊರೆ ಕಡಿಮೆಯಾಗುತ್ತದೆ.


PMAY ಯೋಜನೆಯಲ್ಲಿ ಸಿಗುವ ಸಬ್ಸಿಡಿ ರೂಪದ ಬಡ್ಡಿಯ ಲೆಕ್ಕಾಚಾರ
ವಾರ್ಷಿಕ ಆದಾಯ: 6 ಲಕ್ಷ ರೂ
ಗರಿಷ್ಠ ಸಾಲದ ಮೊತ್ತ: 6 ಲಕ್ಷ ರೂ
ಸಬ್ಸಿಡಿ: ಶೇ 6.5
ಸಾಲದ ಮೊತ್ತ: 6 ಲಕ್ಷ ರೂಪಾಯಿ
ಬಡ್ಡಿದರ: ಶೇ.9 
ಮಾಸಿಕ ಇಎಂಐ: 5398 ರೂ
20 ವರ್ಷಗಳಲ್ಲಿ ಒಟ್ಟು ಬಡ್ಡಿ: 6.95 ಲಕ್ಷ ರೂಪಾಯಿ
ಶೇ.6.5ರಷ್ಟು ಸಬ್ಸಿಡಿ ಲೆಕ್ಕಾಚಾರದಲ್ಲಿ ನಿಮ್ಮ ಬಡ್ಡಿಯನ್ನು ಸಬ್ಸಿಡಿ ಬಳಿಕ ನಂತರ ಎನ್‌ಪಿವಿ 2,67,000 ರೂ.ಆಗಲಿದೆ. ಇದರ ಪ್ರಕಾರ, ನಿಮ್ಮ ಪಿಎಂಎವೈ ಸಾಲ ಮೊತ್ತ ವಾಸ್ತವಿಕವಾಗಿ 6 ​​ಲಕ್ಷ ರೂ.ಗೆ ಬದಲಾಗಿ 3.33 ಲಕ್ಷ ರೂ. ಮಾತ್ರ ಇರಲಿದೆ.


ಎಷ್ಟು ಲಾಭ ಸಿಗಲಿದೆ?
ಪರಿಷ್ಕೃತ ಸಾಲದ ಮೊತ್ತ: 3.33 ಲಕ್ಷ ರೂ
ಬಡ್ಡಿದರ: 9 ಪ್ರತಿಶತ
ಮಾಸಿಕ ಇಎಂಐ: 2,996 ರೂ
20 ವರ್ಷಗಳಲ್ಲಿ ಒಟ್ಟು ಬಡ್ಡಿ: 3.86 ಲಕ್ಷ ರೂ
ಮಾಸಿಕ ಇಎಂಐನಲ್ಲಿ ಉಳಿತಾಯ: 2,402 ರೂ
ಬಡ್ಡಿಯಲ್ಲಿ ಉಳಿತಾಯ: 3,08,939 ರೂ
ಗಮನಿಸಿ: ಅಂತೆಯೇ, 12 ಲಕ್ಷ, 18 ಲಕ್ಷದವರೆಗಿನ ವಾರ್ಷಿಕ ಆದಾಯದ ಮೇಲೂ ಲೆಕ್ಕಾಚಾರಗಳನ್ನು ಮಾಡಬಹುದು, ಅದರ ಮೇಲೆ 2.35 ಲಕ್ಷ, 2.30 ಲಕ್ಷ ವರೆಗಿನ ಸಬ್ಸಿಡಿ ಪಡೆಯಬಹುದು.


ಹೇಗೆ ಅರ್ಜಿ ಸಲ್ಲಿಸಬೇಕು?


  • ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ವೆಬ್‌ಸೈಟ್‌ https://pmaymis.gov.in/ ಲಾಗ್ ಇನ್ ಮಾಡಿ.

  • ನೀವು LIG, MIG ಅಥವಾ EWS ವರ್ಗಕ್ಕೆ ಒಳಪಟ್ಟರೆ, ಇತರ 3 ಘಟಕಗಳ ಮೇಲೆ ಕ್ಲಿಕ್ ಮಾಡಿ.

  • ಮೊದಲ ಅಂಕಣದಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಿ. ಎರಡನೇ ಅಂಕಣದಲ್ಲಿ ಆಧಾರ್‌ನಲ್ಲಿ ಬರೆದ ನಿಮ್ಮ ಹೆಸರನ್ನು ನಮೂದಿಸಿ.

  • ಇದರ ನಂತರ, ತೆರೆಯುವ ಪುಟದಲ್ಲಿ ಹೆಸರು, ವಿಳಾಸ, ಕುಟುಂಬ ಸದಸ್ಯರ ಮಾಹಿತಿಯಂತಹ ಸಂಪೂರ್ಣ ವೈಯಕ್ತಿಕ ವಿವರಗಳನ್ನು ನೀಡಿ.

  • ಇದರ ಜೊತೆಗೆ ನೀಡಲಾಗಿದ್ದ ಪೆಟ್ಟಿಗೆಯ ಮೇಲೆ ಕ್ಲಿಕ್ ಮಾಡಿ, ಅದರ ಮೇಲೆ ನೀವು ಈ ಮಾಹಿತಿಯ ನಿಖರತೆಯನ್ನು ಪ್ರಮಾಣೀಕರಿಸುತ್ತೀರಿ ಎಂದು ಬರೆಯಲಾಗಿರುತ್ತದೆ.

  • ಒಮ್ಮೆ ನೀವು ಎಲ್ಲಾ ಅರ್ಜಿಯ ಮಾಹಿತಿಯನ್ನು ಭರ್ತಿ ಮಾಡಿ ಸಲ್ಲಿಸಿದ ನಂತರ, ನೀವು ಇಲ್ಲಿ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕಾಗುತ್ತದೆ.

  • ಇದರ ನಂತರ ನೀವು ಈ ಫಾರ್ಮ್ ಅನ್ನು ಸಲ್ಲಿಸಿ.