ನವದೆಹಲಿ: ದೀಪಾವಳಿಗೂ ಮುನ್ನ ಪಿಎಂಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ಬಿಗ್ ರಿಲೀಫ್ ನೀಡಿದೆ. ನೂತನ ನಿಯಮಗಳ ಪ್ರಕಾರ ಈಗ ಪಿಎಂಸಿ ಬ್ಯಾಂಕಿನ ಖಾತೆದಾರರು ತಮ್ಮ ಖಾತೆಯಿಂದ 40,000 ಸಾವಿರಕ್ಕೂ ಹೆಚ್ಚು ಹಣವನ್ನು ಹಿಂಪಡೆಯಲು ಸಾಧ್ಯವಾಗಲಿದೆ. ಇದಲ್ಲದೆ, ಖಾತೆದಾರರ ಕುಟುಂಬದಲ್ಲಿ ವೈದ್ಯಕೀಯ ತುರ್ತುಸ್ಥಿತಿ ಇದ್ದಲ್ಲಿ, ಅವರು 60,000 ರೂ. ಮತ್ತು ಅದಕ್ಕೂ ಹೆಚ್ಚಿನ ಮೊತ್ತವನ್ನು ಖಾತೆಯಿಂದ ಡ್ರಾ ಮಾಡಲು ಅವಕಾಶ ನೀಡಲಾಗಿದೆ. 


COMMERCIAL BREAK
SCROLL TO CONTINUE READING

ವರದಿಯ ಆಧಾರದ ಮೇಲೆ ಆರ್‌ಬಿಐ ನಿರ್ಧಾರ
ಇದೀಗ ಪಿಎಂಸಿ ಬ್ಯಾಂಕ್ ಖಾತೆದಾರರು ಮದುವೆ, ಹಿರಿಯ ನಾಗರಿಕರ ವೆಚ್ಚ ಮತ್ತು ಶಿಕ್ಷಣಕ್ಕಾಗಿ 50,000 ರೂ.ಗಳಿಗೂ ಹೆಚ್ಚು ಹಣವನ್ನು ಖಾತೆಯಿಂದ ಹಿಂಪಡೆಯಬಹುದು. ಈ ವಾರದ ಅಂತ್ಯದ ವೇಳೆಗೆ ಆಂತರಿಕ ವಿಚಾರಣಾ ಸಮಿತಿಯ ವರದಿ ಬರಲಿದೆ. ಈ ವರದಿಯನ್ನು ಆಧರಿಸಿ, ಪಿಎಂಸಿ ಬಗ್ಗೆ ಆರ್‌ಬಿಐ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ.


ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
ಇದಕ್ಕೂ ಮುನ್ನ, ಪಿಎಂಸಿ ಬ್ಯಾಂಕಿನಿಂದ ಹಣ ಹಿಂಪಡೆಯುವ ನಿಷೇಧದ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ತ್ರಿಸದಸ್ಯ ಪೀಠವು ಅರ್ಜಿದಾರರಿಗೆ ಸಂಬಂಧಪಟ್ಟ ಹೈಕೋರ್ಟ್‌ಗೆ ಹೋಗುವಂತೆ ಸಲಹೆ ನೀಡಿದೆ. ಕೆಲವು ಜನರ ಕ್ರಮಗಳಿಂದಾಗಿ ಹಣದ ನಷ್ಟದಂತಹ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಬ್ಯಾಂಕುಗಳು ಮತ್ತು ಠೇವಣಿಗಳ ಸುರಕ್ಷತೆಗಾಗಿ ಮಾರ್ಗಸೂಚಿಗಳನ್ನು ಜಾರಿಗೊಳಿಸುವಂತೆ ಅರ್ಜಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿತ್ತು. ಅರ್ಜಿಯಲ್ಲಿ, 1.5 ಮಿಲಿಯನ್ ಖಾತೆದಾರರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಅವರಿಗೆ ಶೇ.100ರಷ್ಟು ವಿಮಾ ರಕ್ಷಣೆಯನ್ನು ಕೋರಲಾಗಿತ್ತು.