ನವದೆಹಲಿ: ಕೇಂದ್ರ ಸಚಿವರ ವಿರುದ್ಧ ದಾಖಲಾಗಿರುವ ಭ್ರಷ್ಟಾಚಾರ ದೂರುಗಳ ವಿವರಗಳನ್ನು ನೀಡಲು ಪ್ರಧಾನಮಂತ್ರಿ ಕಾರ್ಯಾಲಯ ನಿರಾಕರಿಸಿದ್ದು, ಅಂತಹ ಮಾಹಿತಿಗಳನ್ನು ಬಹಿರಂಗಪಡಿಸುವುದು ವ್ಯಕ್ತಿ ನಿಷ್ಠ ಮತ್ತು ತೊಡಕಿಗೆ ಕಾರಣವಾಗಬಹುದು ಎಂದು ಹೇಳಿದೆ.


COMMERCIAL BREAK
SCROLL TO CONTINUE READING

ಕಲ್ಲಿದ್ದಲು ಖಾತೆ ರಾಜ್ಯ ಸಚಿವ ಹರಿಭಾಯಿ ಚೌಧರಿ ಅವರ ವಿರುದ್ಧ ಸಿಬಿಐ ಭ್ರಷ್ಟಾಚಾರ ಆರೋಪ ಎತ್ತಿಹಿಡಿದ ಬೆನ್ನಲ್ಲೇ ಇತರ ಕೇಂದ್ರ ಸಚಿವರ ಭ್ರಷ್ಟಾಚಾರ ದೂರುಗಳ ಬಗ್ಗೆ ಮಾಹಿತಿ ಕೇಳಿ ಸಲ್ಲಿಸಲಾಗಿದ್ದ ಆರ್ ಟಿ ಐಗೆ ಮಾಹಿತಿ ನೀಡಲು ಪ್ರಧಾನ ಮಂತ್ರಿ ಕಾರ್ಯಾಲಯ ನಿರಾಕರಿಸಿದೆ. 


"ಕೇಂದ್ರ ಸಚಿವರ ವಿರುದ್ಧ ಸ್ವೀಕರಿಸಿರುವ ಭ್ರಷ್ಟಾಚಾರದ ದೂರುಗಳು ಖಚಿತವಾಗದ, ಸುಳ್ಳು ಮತ್ತು ಅನಾಮಧೇಯ ದೂರುಗಳನ್ನೂ ಸಹ ಒಳಗೊಂಡಿರುವುದರಿಂದ, ಈಗಲೇ ಯಾವುದೇ ಮಾಹಿತಿ ಬಹಿರಂಗ ಮಾಡಲು ಸಾಧ್ಯವಿಲ್ಲ. ಎಲ್ಲಾ ಆರೋಪಗಳಿಗೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಮತ್ತು ಪೂರಕ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ" ಎಂದು ಮಾಹಿತಿ ಕೋರಿ ಆರ್ಟಿಐ ಅರ್ಜಿ ಸಲ್ಲಿಸಿದ್ದ  ಭಾರತೀಯ ಅರಣ್ಯ ಸೇವೆ ಅಧಿಕಾರಿ ಸಂಜೀವ್ ಚತುರ್ವೇದಿ ಅವರಿಗೆ ಪ್ರಧಾನ ಮಂತ್ರಿ ಕಾರ್ಯಾಲಯ ಪ್ರತಿಕ್ರಿಯಿಸಿದೆ.