ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಪಿಎನ್ಬಿ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಉಷಾ ಅನಂತಸುಬ್ರಹ್ಮಣ್ಯನ್ ಅವರನ್ನು ಕೇಂದ್ರ ಸರ್ಕಾರ ಸೇವೆಯಿಂದ ವಜಾಗೊಳಿಸಿದೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿದ್ದು, ಉಷಾ ಸುಬ್ರಹ್ಮಣ್ಯನ್ ಅವರನ್ನು ಬ್ಯಾಂಕ್ ಉದ್ಯೋಗಿ ಹುದ್ದೆಯಿಂದ ವಜಾ ಗೊಳಿಸಿರುವುದಾಗಿ ತಿಳಿಸಿದೆ. 


ಪಿಎನ್ ಬಿ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ಮೇ ತಿಂಗಳಲ್ಲಿ ಸಿಬಿಐ ಸಲ್ಲಿಸಿದ್ದ ಚಾರ್ಜ್​ ಶೀಟ್​ನಲ್ಲಿ, ವಜ್ರ ವ್ಯಾಪಾರಿ ನೀರವ್ ಮೋದಿ, ಮೆಹುಲ್​ ಚೋಕ್ಸಿ ಹಾಗೂ ಉಷಾ ಸುಬ್ರಹ್ಮಣ್ಯನ್ ಸೇರಿದಂತೆ ಮೂವರು ಅಧಿಕಾರಿಗಳ ಹೆಸರನ್ನು ನಮೂದಿಸಲಾಗತ್ತು. ಈ ಸಂದರ್ಭದಲ್ಲಿ ಮೂರು ತಿಂಗಳ ಹಿಂದಷ್ಟೇ ಉಷಾ ಅವರನ್ನು ಅಲಹಬಾದ್ ಬ್ಯಾಂಕ್ ಮತ್ತು ಪಿಎನ್ ಬಿಯ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಆದರೆ ಬ್ಯಾಂಕ್ ಉದ್ಯೋಗಿಯಾಗಿ ಮುಂದುವರೆದಿದ್ದರು. ಆದರೀಗ ಅವರನ್ನು ಸಂಪೂರ್ಣವಾಗಿ ಹುದ್ದೆಯಿಂದ ಕೇಂದ್ರ ಸರ್ಕಾರ ವಜಾ ಮಾಡಿದೆ.