PNB ಹಗರಣ: ಭಾರತಕ್ಕೆ ಹಸ್ತಾಂತರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದ ನೀರವ್ ಮೋದಿ
ದೇಶದಿಂದ ಪರಾರಿಯಾಗಿರುವ ನೀರವ್ ಮೋದಿ ಅವರು ಭಾರತದಲ್ಲಿ ನ್ಯಾಯಯುತ ವಿಚಾರಣೆ ನಡೆಯುವ ನಿರೀಕ್ಷೆಯಿಲ್ಲ ಎಂದು ಹೇಳಿದರು.
ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)ನಿಂದ 13,500 ಕೋಟಿ ರೂ.ಗಳ ವಂಚನೆ ಪ್ರಕರಣದಲ್ಲಿ ಪರಾರಿಯಾದ ವಜ್ರ ವ್ಯಾಪಾರಿ ನೀರವ್ ಮೋದಿ(Nirav modi)ಯವರ ಜಾಮೀನು ಅರ್ಜಿಯನ್ನು ಮತ್ತೊಮ್ಮೆ ಯುಕೆ (ಯುನೈಟೆಡ್ ಕಿಂಗ್‌ಡಮ್) ನ್ಯಾಯಾಲಯ ತಿರಸ್ಕರಿಸಿದೆ. ಜಾಮೀನು ಅರ್ಜಿ ವಜಾಗೊಳಿಸಿದ ಬಳಿಕ ನ್ಯಾಯಾಲಯದಲ್ಲಿ ತಾಳ್ಮೆ ಕಳೆದುಕೊಂಡ ನೀರವ್ ಮೋದಿ, ನನ್ನನ್ನು ಭಾರತಕ್ಕೆ ಹಸ್ತಾಂತರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು. ಎರಡು ಬಾರಿ ತಮಗೆ ಜೈಲಿನಲ್ಲಿ ಹೊಡೆಯಲಾಗಿದೆ ಎಂದು ನೀರವ್ ಮೋದಿ ಹೇಳಿಕೊಂಡಿದ್ದಾರೆ.
48 ವರ್ಷದ ಉದ್ಯಮಿ ನೀರವ್ ಅವರನ್ನು ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮುಖ್ಯ ಮ್ಯಾಜಿಸ್ಟ್ರೇಟ್ ಎಮ್ಮಾ ಅರ್ಬುತ್ನೋಟ್ ಅವರ ಮುಂದೆ ಹಾಜರುಪಡಿಸಲಾಯಿತು. ವಾಂಡ್ಸ್‌ವರ್ತ್ ಜೈಲಿನಲ್ಲಿ ನೀರವ್‌ಗೆ ಎರಡು ಬಾರಿ ಥಳಿಸಲಾಗಿದೆ ಎಂದು ಅವರ ಪರ ವಕೀಲ ಹ್ಯೂಗೋ ಕೀತ್ ಹೇಳಿದ್ದಾರೆ. ನೀರವ್ ಅವರನ್ನು ಏಪ್ರಿಲ್‌ನಲ್ಲಿ ಒಮ್ಮೆ ಮತ್ತು ಎರಡನೇ ಬಾರಿಗೆ ಮಂಗಳವಾರ ಥಳಿಸಲಾಗಿದೆ ಎಂದು ಅವರು ಹೇಳಿದರು. ಜೈಲಿನ ಜವಾಬ್ದಾರಿಯುತ ಅಧಿಕಾರಿಗಳು ಈ ವಿಷಯದಲ್ಲಿ ಯಾವುದೇ ಏನೂ ಹೇಳಲಿಲ್ಲ ಎನ್ನಲಾಗಿದೆ.
ಕೊನೆಗೂ ಸಿಗದ ಜಾಮೀನು:
ನೀರವ್ ಮೋದಿ ಐದನೇ ಬಾರಿಗೆ ಜಾಮೀನು ಅರ್ಜಿ ಸಲ್ಲಿಸಿದ್ದರು ಮತ್ತು ವಿಚಾರಣೆಯ ವೇಳೆ ಅವರು ನ್ಯಾಯಾಲಯವನ್ನು ದಾರಿ ತಪ್ಪಿಸಲು ಪ್ರಯತ್ನಿಸಿದರು. ಆದರೆ, ಈ ಎಲ್ಲದರ ಹೊರತಾಗಿಯೂ, ನ್ಯಾಯಾಲಯ ಅವರಿಗೆ ಜಾಮೀನು ನೀಡಲು ನಿರಾಕರಿಸಿತು.
ನೀರವ್ ಅವರು ಚಡಪಡಿಕೆ ಮತ್ತು ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ನೀರವ್ ಮೋದಿ ಅವರನ್ನು ಬಂಧನದ ವಿರುದ್ಧ ಲಂಡನ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದರು ಮತ್ತು ಮನೆಯಲ್ಲಿ ಕಸ್ಟಡಿಗೆ ಮನವಿ ಮಾಡಿದರು. ಮಾರ್ಚ್ 19 ರಂದು ನೀರವ್ ಅವರನ್ನು ಹಾಲ್ಬೋರ್ನ್ ನಿಂದ ಬಂಧಿಸಲಾಯಿತು ಎಂಬುದು ಗಮನಾರ್ಹ.
13,500 ಕೋಟಿ ರೂ. ವಂಚನೆ:
ನೀರವ್ ಮೋದಿ ಮತ್ತು ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ ಕೆಲವು ಬ್ಯಾಂಕ್ ಉದ್ಯೋಗಿಗಳ ಪಾಲ್ಗೊಳ್ಳುವಿಕೆಯೊಂದಿಗೆ 13,500 ಕೋಟಿ ರೂ.ಗಳನ್ನು ವಂಚಿಸಿದ್ದಾರೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಆರೋಪಿಸಿತ್ತು. ಇದರ ನಂತರ, ಈ ವಿಷಯವನ್ನು ಜಾರಿ ನಿರ್ದೇಶನಾಲಯ(ED) ಮತ್ತು ಕೇಂದ್ರೀಯ ತನಿಖಾ ದಳ (CBI) ತನಿಖೆ ನಡೆಸುತ್ತಿದೆ.
ನೀರವ್\ ಮೋದಿ ವಿರುದ್ಧ ಪ್ಯುಗಿಟಿವ್ ಎಕನಾಮಿಕ್ ಅಪರಾಧಿಗಳ ಕಾಯ್ದೆ (FEO) ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಮುಂಬೈನ ಮನಿ ಲಾಂಡರಿಂಗ್ ತಡೆ ಕಾಯ್ದೆ ನ್ಯಾಯಾಲಯದಲ್ಲಿ ಇಡಿ ಚೋಕ್ಸಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ.