ನವದೆಹಲಿ: ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಿದ ನಂತರ, ಭಾರತವು ಈಗ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ(PoK) ಸೇರಿಸಲು ಮುಂದಾಗಿದೆ. ಇಡೀ ಕಾಶ್ಮೀರ ಹಿಂದೂಸ್ತಾನಕ್ಕೆ ಸೇರಿದ್ದು, 2022 ರ ವೇಳೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಕೂಡ ಅಖಂಡ ಭಾರತದ ಭಾಗವಾಗಲಿದೆ ಎಂದು ಶಿವಸೇನೆ ಮುಖಂಡ ಮತ್ತು ರಾಜ್ಯಸಭಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್, ನಮ್ಮ ಮುಂದಿನ ಕಾರ್ಯಸೂಚಿಯು ಪಿಒಕೆ ಅನ್ನು ಪುನಃ ಪಡೆದುಕೊಳ್ಳುವುದು ಮತ್ತು ಅದನ್ನು ಜಮ್ಮು-ಕಾಶ್ಮೀರದ ಅಡಿಯಲ್ಲಿ ತರುವುದು ಎಂದು ಹೇಳಿದ್ದರು. ಅವರ ಈ ಹೇಳಿಕೆಗೆ ಪೂರಕವಾಗಿ ಶಿವಸೇನೆ ಮುಖಂಡ ಸಂಜಯ್ ರಾವತ್ ಪ್ರತಿಕ್ರಿಯೆ ಬಂದಿದೆ.


'ಜಮ್ಮು ಮತ್ತು ಕಾಶ್ಮೀರ ನಮ್ಮ ಆಂತರಿಕ ವಿಷಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಜಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಆರ್ಟಿಕಲ್ 370ನ್ನು ಹಿಂತೆಗೆದುಕೊಂಡ ನಂತರ, ಈಗ ಹಿಂದೂಸ್ತಾನ್ ಕಾಶ್ಮೀರವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದೆ ಎಂಬುದನ್ನು ಪಾಕಿಸ್ತಾನವು ಒಪ್ಪಿಕೊಳ್ಳಲಿದೆ.' ಇಮ್ರಾನ್ ಖಾನ್ ಅವರ ಮುಖದಲ್ಲಿ ಕಳೆಯೇ ಇಲ್ಲದಂತಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಪಿಒಕೆ ಕೂಡಾ ನಮ್ಮದಾಗಲಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.


'ಈಗ ಎಲ್ಲರೂ ಕಾಶ್ಮೀರ ಇಡೀ ಭಾರತಕ್ಕೆ ಸೇರಿದ್ದು ಎಂದು ಮಾತನಾಡಲು ಪ್ರಾರಂಭಿಸಿದ್ದಾರೆ. 2022 ಕ್ಕಿಂತ ಮೊದಲು ಪಿಒಕೆ ಸಹ ಅಖಂಡ ಭಾರತದ ಭಾಗವಾಗುವುದರಲ್ಲಿ ನನಗೆ ವಿಶ್ವಾಸವಿದೆ. ಎಲ್ಲರೂ ನಮ್ಮೊಂದಿಗಿದ್ದಾರೆ, ಅಖಂಡ ಭಾರತದ ಗುರಿ ಅಚಲ' ಎಂದು ರಾವತ್ ವಿಶ್ವಾಸದಿಂದ ನುಡಿದರು.


ಮೋದಿ ಸರ್ಕಾರದ ಮುಂದಿನ ಹೆಜ್ಜೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಜಮ್ಮು- ಕಾಶ್ಮೀರದ ಅಡಿಯಲ್ಲಿ ತರುವುದು:
ಮೋದಿ ಸರ್ಕಾರ 2.0 ರ 100 ದಿನಗಳು ಪೂರ್ಣಗೊಂಡಿರುವ ಸಂದರ್ಭದಲ್ಲಿ ಜಮ್ಮುವಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್, 'ಕಾಶ್ಮೀರದಿಂದ 370 ನೇ ವಿಧಿಯನ್ನು ಹಿಂಪಡೆದ ನಂತರ ಕಾಶ್ಮೀರಿ ಪಂಡಿತರು ಮಾತ್ರವಲ್ಲದೆ ಇತರ ಜನರು ಕೂಡ ಕಾಶ್ಮೀರಕ್ಕೆ ಬರಲು ಬಯಸುತ್ತಿದ್ದಾರೆ. ದೇಶಾದ್ಯಂತದ ಯುವ ಸ್ಟಾರ್ಟ್‌ಅಪ್‌ಗಳು ಕಾಶ್ಮೀರಕ್ಕೆ ತಲುಪಲಿವೆ. ನಮ್ಮ ಮುಂದಿನ ಕಾರ್ಯಸೂಚಿಯೆಂದರೆ ಪಿಒಕೆ ಅನ್ನು ಪುನಃ ಪಡೆದುಕೊಳ್ಳುವುದು ಮತ್ತು ಅದನ್ನು ಜಮ್ಮು ಕಾಶ್ಮೀರದ ಅಡಿಯಲ್ಲಿ ತರುವುದು ಎಂದರು.


ಇದನ್ನು 'ನಾನು ಅಥವಾ ನಮ್ಮ ಪಕ್ಷ ಮಾತ್ರವಲ್ಲ 1994 ರಲ್ಲಿ ನರಸಿಂಹ ರಾವ್ ಅವರ ಸರ್ಕಾರದಲ್ಲಿ ಈ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು'. ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕುವುದು ಸರ್ಕಾರದ ದೊಡ್ಡ ಕೆಲಸ ಎಂದು ಡಾ.ಜಿತೇಂದ್ರ ಸಿಂಗ್ ಬಣ್ಣಿಸಿದರು.