ನವದೆಹಲಿ : ಗಣರಾಜ್ಯ ದಿನಾಚರಣೆಗೂ ಸ್ವಲ್ಪ ಮುಂಚಿತವಾಗಿ ರಾಷ್ಟ್ರ ರಾಜಧಾನಿ ದೆಹಲಿಯ ಖಾನ್ ಮಾರ್ಕೆಟ್ ಬಳಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೇಳಿಬಂದ ಬಗ್ಗೆ ದೆಹಲಿ ಪೊಲೀಸರಿಗೆ ಎಚ್ಚರಿಕೆ ನೀಡಲಾಗಿದೆ. ಮಾಹಿತಿಯ ಪ್ರಕಾರ, ಪಿಎಸ್ ತುಘಲಕ್ ರಸ್ತೆಯಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಖಾನ್ ಮಾರ್ಕೆಟ್ ಮೆಟ್ರೋ ನಿಲ್ದಾಣದ ಬಳಿ ಕೆಲವರು ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. 


COMMERCIAL BREAK
SCROLL TO CONTINUE READING

ಮಾಹಿತಿ ಪಡೆಯುತ್ತಿದ್ದಂತೆ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಘಟನೆಯ ಸಂಪೂರ್ಣ ಮಾಹಿತಿ ಪಡೆದರು. ಭಾನುವಾರ ಬೆಳಿಗ್ಗೆ ಖಾನ್ ಮಾರ್ಕೆಟ್ (Khan Market) ಮೆಟ್ರೋ ನಿಲ್ದಾಣದ ಬಳಿ ನಡೆದ ಇ-ಬೈಕ್ ಓಟದ ಸಂದರ್ಭದಲ್ಲಿ 'ಪಾಕಿಸ್ತಾನ ಜಿಂದಾಬಾದ್' (Pakistan Zindabad) ಘೋಷಣೆಗಳನ್ನು ಎತ್ತಲಾಯಿತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ - Weather Update: ಮುಂದಿನ ಮೂರು ದಿನ ಈ ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ


ಪೊಲೀಸರ ಪ್ರಕಾರ, ತುಘಲಕ್ ರಸ್ತೆ ಪೊಲೀಸ್ ಠಾಣೆಗೆ ಪಿಸಿಆರ್ ಕರೆ ಬಂದಿದ್ದು, ಖಾನ್ ಮಾರ್ಕೆಟ್ ಮೆಟ್ರೋ ನಿಲ್ದಾಣದ ಬಳಿ 'ಪಾಕಿಸ್ತಾನ ಜಿಂದಾಬಾದ್' (Pakistan Zindabad) ಎಂಬ ಘೋಷಣೆಯನ್ನು ಕೂಗುತ್ತಿರುವುದಾಗಿ ಮಾಹಿತಿ ತಿಳಿಸಿದರು. ಕೂಡಲೇ ನಾವು ಸ್ಥಳಕ್ಕೆ ತಲುಪಿದೆವು. ಅಲ್ಲಿ ಇಬ್ಬರು ಪುರುಷರು, ಮೂವರು ಮಹಿಳೆಯರು ಮತ್ತು ಓರ್ವ ಯುವಕ ಇದ್ದದ್ದು ಕಂಡು ಬಂದಿತು ಎಂದು ಮಾಹಿತಿ ನೀಡಿದ್ದಾರೆ.


ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಎರಡು ಕುಟುಂಬಗಳು ತಮ್ಮ ಮಕ್ಕಳೊಂದಿಗೆ ಇಂಡಿಯಾ ಗೇಟ್ (India Gate) ನೋಡಲು ಬಂದಿದ್ದಾರೆ ಎಂದು ತಿಳಿದುಬಂದಿದ್ದು ಅವರು ಇ-ಬೈಕು ಬಾಡಿಗೆಗೆ ಪಡೆದಿದ್ದರು. ಅವರು ಇ-ಬೈಕ್‌ಗಳಲ್ಲಿ ಓಡಲು ಪ್ರಾರಂಭಿಸಿದರು ಮತ್ತು ಪರಸ್ಪರರು ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳ ಹೆಸರನ್ನು ಕೂಗುತ್ತ ಈ ಸಮಯದಲ್ಲಿ ಅವರು ಸಂತೋಷದಿಂದ 'ಪಾಕಿಸ್ತಾನ ಜಿಂದಾಬಾದ್' ಎಂಬ ಘೋಷಣೆಗಳನ್ನು ಕೂಡ ಎತ್ತಿದರು ಎಂದು ತಿಳಿದುಬಂದಿದೆ.


ಇದನ್ನೂ ಓದಿ - ಪಾರ್ಲಿಮೆಂಟ್ ಬಳಿಯ Akashvani ಭವನದಲ್ಲಿ ಅಗ್ನಿ ಅವಘಡ


ಈ ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ, ಜನರಿಂದ ಮಾಹಿತಿ ತೆಗೆದುಕೊಳ್ಳಲಾಗುತ್ತಿದೆ. ಇದರೊಂದಿಗೆ ನಾವು ಪಾಕಿಸ್ತಾನ (Pakistan) ಜಿಂದಾಬಾದ್ ಎಂಬ ಘೋಷಣೆಯನ್ನು ಕೂಗಿದ್ದೇವೆ ಎಂದು ಹೇಳಿರುವ ಆ ಎರಡೂ ಕುಟುಂಬಗಳನ್ನು ನಿರಂತರವಾಗಿ ಪ್ರಶ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.