ಪ್ರಯಾಗರಾಜ್: ಪೊಲೀಸ್ ಕಾನ್‌ಸ್ಟೆಬಲ್ ಓರ್ವ ತನ್ನ ಹೆಂಡತಿ ಮತ್ತು ಹಿರಿಯ ಮಗನನ್ನು ಕೊಂದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಘಟನೆ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಎಸ್‌ಎಸ್‌ಪಿ ಸತ್ಯಾರ್ಥ್ ಅನಿರುದ್ಧ್ ಪಂಕಜ್,   ಕಾನ್‌ಸ್ಟೆಬಲ್ ನ ಮಗ ಭಾನು, 8.30ರ ಸುಮಾರಿಗೆ ಮನೆಗೆ ಹೋಗಿದ್ದಾನೆ. ಆದರೆ ಆ ಸಮಯದಲ್ಲಿ ಮೇನ್ ಗೇಟ್ ಒಳಗಿನಿಂದ ಲಾಕ್ ಆಗಿತ್ತು. ಬಳಿಕ ನೆರೆಹೊರೆಯವರ ಸಹಾಯದಿಂದ ಬಾಗಿಲು ಮುರಿದು ಒಳಹೋದಾಗ ಆತನ ತಂದೆ ಗೋವಿಂದ್ ನಾರಾಯಣ್, ತಾಯಿ ಚಂದ್ರ ಮತ್ತು ಸಹೋದರ ಸೋನು ಅವರ ಮೃತದೇಹ ಒಂದೇ ಕೋಣೆಯಲ್ಲಿರುವುದನ್ನು ಕಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾನೆ ಎಂದು ತಿಳಿಸಿದ್ದಾರೆ.


"ಕಾನ್‌ಸ್ಟೆಬಲ್ ಗೋವಿಂದ್ ಅವರ ಮೃತದೇಹ ಫ್ಯಾನ್ ನಲ್ಲಿ ನೇತಾಡುತ್ತಿತ್ತು. ಆದರೆ, ಕಿರಿಯ ಮಗ ಭಾನುವೇ ತನ್ನ ತಂದೆ, ತಾಯಿ ಮತ್ತು ಸಹೋದರನನ್ನು ಕೊಂದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ" ಎಂದು ಅವರು ಹೇಳಿದರು.


ಮೃತ ಗೋವಿಂದ್ ನಾರಾಯಣ್ ಅವರು ಕಳೆದ 20 ವರ್ಷಗಳಿಂದ ಡಿಐಜಿ ಕಚೇರಿಯಲ್ಲಿ ಕಾನ್‌ಸ್ಟೆಬಲ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಸದ್ಯ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.