ಪಾಟ್ನಾ: ಬಿಹಾರ ರಾಜಧಾನಿ ಪಾಟ್ನಾದಲ್ಲಿ ಆರ್‌ಎಲ್ಎಸ್‌ಪಿ ಪಕ್ಷವು ಶನಿವಾರ ಸರಕಾರದ ವಿರುದ್ಧ ಜನ ಆಕ್ರೋಶ್ ರ‍್ಯಾಲಿ ನಡೆಸಿದರು. ಆದರೆ ಈ ರ‍್ಯಾಲಿ ಸಮಯದಲ್ಲಿ ಆರ್‌ಎಲ್ಎಸ್‌ಪಿ ಕಾರ್ಯಕರ್ತರು ಮತ್ತು ಪೊಲೀಸ್ ನಡುವೆ ಘರ್ಷಣೆ ಸಂಭವಿಸಿದೆ. ಆ ಸಂದರ್ಭದಲ್ಲಿ ಆರ್‌ಎಲ್ಎಸ್‌ಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದು ಆರ್‌ಎಲ್ಎಸ್‌ಪಿ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಅವರಿಗೆ ಗಾಯಗಳಾಗಿವೆ ಎಂದು ಹೇಳಲಾಗಿದೆ.


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಬಿಹಾರದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಂತೆ ಒತ್ತಾಯಿಸಿ ಪಟ್ನಾದಲ್ಲಿ ಆರ್‌ಎಲ್ಎಸ್‌ಪಿ ಪಕ್ಷವು ಶನಿವಾರ ಸರಕಾರದ ವಿರುದ್ಧ ಜನ ಆಕ್ರೋಶ್ ರ‍್ಯಾಲಿ ನಡೆಸಿದರು. ಈ ರ‍್ಯಾಲಿ ಗಾಂಧಿ ಮೈದಾನದಿಂದ ರಾಜ್ ಭವನಕ್ಕೆ ತೆರಳುತ್ತಿತ್ತು. ಆದರೆ ಪಾಟ್ನಾದ ಪೋಸ್ಟ್ ಬಂಗ್ಲಾ ಬಳಿ ಆರ್‌ಎಲ್ಎಸ್‌ಪಿ ಕಾರ್ಯಕರ್ತರು ಮತ್ತು ಪೊಲೀಸ್ ನಡುವೆ ಘರ್ಷಣೆ ಸಂಭವಿಸಿತು. ಬಳಿಕ ಪೊಲೀಸರು ಆರ್‌ಎಲ್ಎಸ್‌ಪಿ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ.



ಸುದ್ದಿಯ ಪ್ರಕಾರ, ಜನ ಆಕ್ರೋಶ್ ರ‍್ಯಾಲಿಯ ನೇತೃತ್ವವನ್ನು ಉಪೇಂದ್ರ ಕುಶ್ವಾಹ ವಹಿಸಿಕೊಂಡಿದ್ದರು. ಪೊಲೀಸರು ಈ ರ‍್ಯಾಲಿಯನ್ನು ತಡೆಹಿಡಿಯಲು ಪ್ರಯತ್ನಿಸಿದ್ದರು. ಆದರೆ ಆರ್‌ಎಲ್ಎಸ್‌ಪಿ ಕಾರ್ಯಕರ್ತರು ರ‍್ಯಾಲಿಯನ್ನು ಮುಂದುವರೆಸಲು ಬದ್ದರಾಗಿದ್ದರು. ಏತನ್ಮಧ್ಯೆ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಘರ್ಷಣೆ ಪ್ರಾರಂಭವಾಯಿತು. ಅದೇ ವೇಳೆ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.


ಲಾಠಿಚಾರ್ಜ್ ನಲ್ಲಿ ಹಲವು ಆರ್‌ಎಲ್ಎಸ್‌ಪಿ ಕಾರ್ಯಕರ್ತರಿಗೆ ಗಾಯಗಳಾಗಿವೆ ಎಂದು ಹೇಳಲಾಗಿದೆ. ಆರ್‌ಎಲ್ಎಸ್‌ಪಿ ಮುಖ್ಯಸ್ಥ ಉಪೇಂದ್ರ ಕುಶ್ವಾಹ ಅವರಿಗೆ ಗಾಯಗಳಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಅವರನ್ನು PMCH ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.