ದ್ವೇಷಪೂರಿತ ಭಾಷಣ: ಬಿಹಾರ್ ದಲ್ಲಿ ಶರ್ಜಿಲ್ ಇಮಾಮ್ ಬಂಧನ
ದ್ವೇಷಪೂರಿತ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಪೊಲೀಸರು ಶರ್ಜಿಲ್ ಇಮಾಮ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಹಾರ ರಾಜಧಾನಿ ಪಟ್ನಾ ಸಮೀಪ ಇರುವ ಕಾಕೋ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಜಹಾನಾಬಾದ್: ದೆಹಲಿಯ ಶಾಹೀನ್ ಬಾಗ್ ನಲ್ಲಿ ಪ್ರಚೋದನಾತ್ಮಕ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶರಜೀಲ್ ಇಮಾಮ್ ನನ್ನು ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಹಾರ ರಾಜಧಾನಿ ಪಟ್ನಾ ಸಮೀಪ ಇರುವ ಕಾಕೋ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಈತನ ಬಂಧನಕ್ಕಾಗಿ ಬಿಹಾರದ ವಿವಿಧ ಕಡೆಗಳಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಪ್ರಕರಣದಲ್ಲಿ ಆತನ ಹುಟ್ಟೂರಿಗೂ ತೆರಳಿದ್ದ ಪೊಲೀಸರು ದಾಳಿಗಳನ್ನು ನಡೆಸಿದ್ದರು. ಈ ಪ್ರಕರಣದಲ್ಲಿ ಸೋಮವಾರ ಶರ್ಜೀಲ್ ಇಮಾಮ್ ಅವನ ಸಹೋದರನನ್ನೂ ಕೂಡ ಪೊಲೀಸರು ಬಂಧಿಸಿದ್ದಾರೆ.
ಇದಕ್ಕೂ ಮೊದಲು ಕೂಡ ಪೊಲೀಸರು ಶರ್ಜಿಲ್ ಇಮಾಮ್ ನ ಮೂವರು ಸಂಬಂಧಿಕರನ್ನು ಬಂಧಿಸಿದ್ದರು. ಸದ್ಯ ಆತನ ಮೇಲೆ ಒಟ್ಟು ಐದು ರಾಜ್ಯಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಶರ್ಜಿಲ್ ಇಮಾಮ್ ಮೇಲೆ ದೇಶದ್ರೋಹ ಹಾಗೂ ದಂಗೆಗಳನ್ನು ಹಬ್ಬಿಸಿರುವ ಆರೋಪ ಮಾಡಲಾಗಿದೆ.
ಇದೇ ವೇಳೆ ದೆಹಲಿಯಲ್ಲಿಯೂ ಕೂಡ ಉತ್ತರ ಪ್ರದೇಶ ಪೊಲೀಸರು ಶರ್ಜಿಲ್ ಇಮಾಮ್ ಬಂಧನಕ್ಕೆ ಹಲವೆಡೆ ದಾಳಿ ನಡೆಸಿದ್ದಾರೆ. ಆತನ ಮೇಲೆ ಒಟ್ಟು ಐದು ರಾಜ್ಯಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಸ್ಸಾಂ, ಉತ್ತರ ಪ್ರದೇಶ, ದೆಹಲಿ, ಅರುಣಾಚಲ ಪ್ರದೇಶ ಹಾಗೂ ಮಣಿಪುರ ರಾಜ್ಯಗಳಲ್ಲಿ ಆತನ ವಿರಿದ್ಧ FIR ದಾಖಲಿಸಲಾಗಿದೆ.
ಈ ವೇಳೆ ತಮ್ಮ ಮಗ ನಿರಾಪರಾಧಿಯಾಗಿದ್ದಾನೆ ಎಂದು ಹೇಳಿರುವ ಶರ್ಜಿಲ್ ತಾಯಿ ದೇಶದ ನ್ಯಾಯವ್ಯವಸ್ಥೆ ಮತ್ತು ಅಲ್ಲಾಹ್ ಮೇಲೆ ಭರವಸೆ ಇದೆ ಎಂದಿದ್ದಾರೆ. ಅಷ್ಟೇ ಅಲ್ಲ ತಮ್ಮ ಮಗನ ಹೇಳಿಕೆಗಳನ್ನು ತಿರುಚಲಾಗಿದೆ ಎಂದು ಶರ್ಜಿಲ್ ತಾಯಿ ಆರೋಪಿಸಿದ್ದಾರೆ. ಜೊತೆಗೆ ತಮ್ಮ ಕುಟುಂಬ ಸದಸ್ಯರಿಗೆ ಕಿರುಕುಳ ನೀಡಲಾಗುತ್ತಿದೆ. ತಮ್ಮ ಮಗ ಪರಾರಿಯಾಗಲು ಕಳ್ಳ ಅಥವಾ ದರೋಡೆಕೋರ ಅಲ್ಲ, ಶೀಘ್ರವೇ ಆತ ಪೊಲೀಸರ ಮುಂದೆ ಬರಲಿದ್ದಾನೆ ಎಂದು ಹೇಳಿದ್ದಾರೆ.