ಛತ್ತೀಸ್​ಗಢ: ದೇಶಾದ್ಯಂತ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಬೆಳಿಗ್ಗೆಯಿಂದ ಆರಂಭವಾಗಿದ್ದು, ಈ ವೇಳೆ ಛತ್ತೀಸ್​ಗಢದ ಮತಗಟ್ಟೆಯೊಂದರಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ನಿಯೋಜನೆಗೊಂಡಿದ್ದ ಮತಗಟ್ಟೆ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 


COMMERCIAL BREAK
SCROLL TO CONTINUE READING

ಛತ್ತೀಸ್​ಗಢದ ಕಂಕರ್ ಮತಗಟ್ಟೆ ಸಂಖ್ಯೆ 186 ರಲ್ಲಿ ಮತಗಟ್ಟೆ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.



11 ರಾಜ್ಯಗಳ ಮತ್ತು 1 ಕೇಂದ್ರಾಡಳಿತ ಪ್ರದೇಶ ಸೇರಿದಂತೆ 95 ಸಂಸತ್ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಛತ್ತೀಸ್​ಗಢದ ಮೂರು ಲೋಕಸಭಾ ಕ್ಷೇತ್ರಗಳಲ್ಲೂ(ರಾಜ್ ನಾಂದ್ಗಾಂವ್, ಮಹಾಸಮುಂದ್, ಕಾಂಕರ್) ಇಂದು ಮತದಾನ ನಡೆಯುತ್ತಿದೆ.