ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ, ನವೆಂಬರ್ 5 ರವರೆಗೆ ಶಾಲೆಯನ್ನು ಮುಚ್ಚಲು ದೆಹಲಿ ಸರ್ಕಾರ ಆದೇಶಿಸಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವೀಟ್ ಮಾಡಿರುವ ಅರವಿಂದ ಕೇಜ್ರಿವಾಲ್, 'ದೆಹಲಿ ಅಕ್ಕ-ಪಕ್ಕದ ರಾಜ್ಯಗಳಲ್ಲಿ ಕೂಳೆ ಸುಡುವುದ(stubble burning)ರಿಂದ ರಾಜ್ಯದಲ್ಲಿ ಹೊಗೆ ಹೆಚ್ಚುತ್ತಿರುವ ಕಾರಣ, ಮಾಲಿನ್ಯದ ಮಟ್ಟವು ಸಾಕಷ್ಟು ಹೆಚ್ಚಾಗಿದೆ. ಆದ್ದರಿಂದ ದೆಹಲಿಯ ಎಲ್ಲಾ ಶಾಲೆಗಳನ್ನು ನವೆಂಬರ್ 5 ರವರೆಗೆ ಮುಚ್ಚಲು ಸರ್ಕಾರ ನಿರ್ಧರಿಸಿದೆ ಎಂದಿದ್ದಾರೆ.


ಇದಕ್ಕೂ ಮೊದಲು ದೆಹಲಿ-ಎನ್‌ಸಿಆರ್‌ನಲ್ಲಿ ನಿರಂತರ ವಾಯುಮಾಲಿನ್ಯದಿಂದಾಗಿ, ಸುಪ್ರೀಂ ಕೋರ್ಟ್ ಇಪಿಸಿಎ ಅನ್ನು ನೇಮಕ ಮಾಡಿತು. ಇದು ಪರಿಸರ ಮಾಲಿನ್ಯ (ENVIRONMENT POLLUTION (PREVENTION & CONTROL) AUTHORITY) ಇಡೀ ಪ್ರದೇಶದಲ್ಲಿ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಿದೆ.


ಈ ಆದೇಶದ ನಂತರ ದೆಹಲಿ-ಎನ್‌ಸಿಆರ್‌ನಲ್ಲಿ ನವೆಂಬರ್ 5 ರವರೆಗೆ ನಿರ್ಮಾಣ ಕಾರ್ಯ ಮತ್ತು ಪಟಾಕಿ ಸುಡುವುದನ್ನು ನಿಷೇಧಿಸಲಾಗಿದೆ. ದೆಹಲಿ-ಎನ್‌ಸಿಆರ್‌ನ 19 ಸ್ಥಳಗಳನ್ನು ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ (ಇಪಿಸಿಎ) ವಿಶೇಷವಾಗಿ ಗುರುತಿಸಿದೆ.


ಈ ಸ್ಥಳಗಳಲ್ಲಿನ ಮಾಲಿನ್ಯವನ್ನು ನಿಯಂತ್ರಿಸಲು ಇಪಿಸಿಎ ವಿಶೇಷ ಮೇಲ್ವಿಚಾರಣೆಯಲ್ಲಿರುತ್ತದೆ. ಈ ಹಾಟ್‌ಸ್ಪಾಟ್ ದೆಹಲಿ-ಎನ್‌ಸಿಆರ್‌ನ ಅತ್ಯಂತ ಕಲುಷಿತ ಪ್ರದೇಶಗಳಲ್ಲಿ ಒಂದಾಗಿದೆ. ವಿಶೇಷ ಯೋಜನೆಯಡಿ, ಮಾಲಿನ್ಯದ ಹಾಟ್‌ಸ್ಪಾಟ್‌ನ ಪ್ರತಿದಿನ ವರದಿಯನ್ನು ಇಪಿಸಿಎಗೆ ನೀಡಲಾಗುವುದು.


ಡೆಲ್ಹಿಯಲ್ಲಿ 14 ಹಾಟ್‌ಸ್ಪಾಟ್‌ಗಳು
- ಓಖ್ಲಾ ಹಂತ -2
- ದ್ವಾರಕಾ
- ಬವಾನಾ
- ಅಶೋಕ್ ವಿಹಾರ್
- ನರೇಲಾ
- ಮುಂಡ್ಕಾ
- ಪಂಜಾಬಿ ಬಾಗ್
- ವಾಜೀರ್‌ಪುರ
- ರೋಹಿಣಿ
- ವಿವೇಕ್ ವಿಹಾರ್
- ಆನಂದ್ ವಿಹಾರ್
- ಆರ್.ಕೆ.ಪುರಂ
- ಜಹಾಂಗೀರ್‌ಪುರಿ
- ಮಾಯಾಪುರಿ


ಹರಿಯಾಣದಲ್ಲಿ 3 ಹಾಟ್‌ಸ್ಪಾಟ್‌ಗಳು:
- ಫರಿದಾಬಾದ್ 1 & 2
- ಬಹದ್ದೂರ್‌ಗಢ
- ಗುರಗಾಂವ್ (ಉದ್ಯೋಗ್ ವಿಹಾರ್)


ಉತ್ತರಪ್ರದೇಶ:
ಸಾಹಿಬಾಬಾದ್


ರಾಜಸ್ಥಾನ:
ಭಿವಾಡಿ