ಜೈಪುರ: ರಾಜಸ್ಥಾನದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮುಜುಗರ ಉಂಟುಮಾಡುವಂತಹ ಘಟನೆಯೊಂದು ನಡೆದಿದೆ. 


COMMERCIAL BREAK
SCROLL TO CONTINUE READING

ರಾಜ್ಯದಲ್ಲಿ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ನಡೆಸುವ ವೇಳೆ ಅಚಾನಕ್ ಆಗಿ ಅಶ್ಲೀಲ ವೀಡಿಯೋ ಪ್ರಸಾರವಾಗಿದೆ. ಈ ಘಟನೆಯಿಂದಾಗಿ ಸಭೆಯಲ್ಲಿದ್ದ ಹಿರಿಯ ಅಧಿಕಾರಿಗಳು ಮುಜುಗರಕ್ಕೊಳಗಾಗಿದ್ದಾರೆ.


ಹಿರಿಯ ಅಧಿಕಾರಿ ಮುಗ್ದಾ ಸಿಂಗ್ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಈ ಘಟನೆ ನಡೆದಿದ್ದು, ಸಭೆ ನಡೆಯುತ್ತಿದ್ದಾಗಲೇ ಅಶ್ಲೀಲ ದೃಶ್ಯಾವಳಿ ಪ್ರಸಾರವಾದ ಬಗ್ಗೆ ಎನ್ ಐಸಿ ನಿರ್ದೇಶಕರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ಸಿಂಗ್ ಸೂಚಿಸಿದ್ದಾರೆ. 


ರಾಜ್ಯದ 33 ಜಿಲ್ಲೆಗಳ ಜಿಲ್ಲಾ ಸರಬರಾಜುದಾರರು ಹಾಗೂ ಇತರೆ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಾರ್ಯದರ್ಶಿ ಮುಗ್ದ ಸಿಂಗ್ ಅವರು ಸರ್ಕಾರದ ವಿವಿಧ ಯೋಜನೆಗ ಅನುಷ್ಠಾನದ ಕುರಿತು ಸಭೆಯಲ್ಲಿ ಚರ್ಚಿಸುತ್ತಿದ್ದರು ಎನ್ನಲಾಗಿದೆ.