ನವದೆಹಲಿ: ನೌಕರರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ದೊಡ್ಡ ನಿರ್ಣಯವೊಂದನು ಕೈಗೊಂಡಿದೆ.  ಲಾಕ್‌ಡೌನ್ ನಂತರ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಎಲ್ಲಾ ಕಂಪನಿಗಳಿಗೆ ತನ್ನ ಉದ್ಯೋಗಿಗಳಿಗೆ ವೈದ್ಯಕೀಯ ವಿಮೆ ನೀಡುವುದನ್ನು ಕಡ್ಡಾಯಗೊಳಿಸಿದೆ. ಇದರರ್ಥ ಈಗ ಪ್ರತಿ ಕಂಪನಿಯು ತನ್ನ ಉದ್ಯೋಗಿಗಳಿಗೆ ವೈದ್ಯಕೀಯ ವಿಮೆಯನ್ನು ಒದಗಿಸುವುದು ಅನಿವಾರ್ಯವಾಗಲಿದೆ.


COMMERCIAL BREAK
SCROLL TO CONTINUE READING

ಈ ಮೊದಲು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಆರೋಗ್ಯ ವಿಮೆ ನೀಡುವುದು ಕಡ್ಡಾಯವಾಗಿರಲಿಲ್ಲ ಎಂದು ಲಿಬರ್ಟಿ ಜನರಲ್ ಇನ್ಶುರೆನ್ಸ್ ಸಿಇಒ ಮತ್ತು ನಿರ್ದೇಶಕ ರೂಪಮ್ ಅಸ್ತಾನಾ ಹೇಳಿದ್ದಾರೆ. ಆದರೂ ಕೂಡ ಹಲವು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಗುಂಪು ವಿಮಾ ಪಾಲಿಸಿ ಸೌಲಭ್ಯ ಒದಗಿಸುತ್ತವೆ.


ಕಾರ್ಪೋರೆಟ್ ಗ್ರೂಪ್ ಇನ್ಸೂರೆನ್ಸ್ ಪಾಲಸಿ ಪ್ರಮುಖವಾಗಿ ನೌಕರರು ಆಸ್ಪತ್ರೆಗೆ ದಾಖಲಾಗುವ ವೆಚ್ಚವನ್ನು ಕವರ್ ಮಾಡುತ್ತದೆ. ಸಂಗಾತಿ ಅಥವಾ ಪೋಷಕರನ್ನೂ ಕೂಡ ಇದರಲ್ಲಿ ಸ್ವಲ್ಪ ಮಂತ್ತಿಗೆ ಕವರ್ ಮಾಡಲಾಗುತ್ತದೆ.


ವಿಮಾ ನಿಯಂತ್ರಕ ಪ್ರಾಧಿಕಾರ IRDA ಈ ನಿಟ್ಟಿನಲ್ಲಿ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಎಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳು, ಕಚೇರಿಗಳು ಮತ್ತು ಕಾರ್ಖಾನೆಗಳು ಪುನಃ ಕಾರ್ಯನಿರ್ವಹಿಸಲು ಪ್ರಾರಂಭಿಸುವ ಮೊದಲು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಯನ್ನು ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದೆ. ಸಾಮಾಜಿಕ ದೂರವಿಡುವ ನಿಯಮಗಳನ್ನು ಅನುಸರಿಸಿ, ಎಲ್ಲಾ ಉದ್ಯೋಗಿಗಳಿಗೆ ವೈದ್ಯಕೀಯ ವಿಮಾ ಪಾಲಿಸಿ ನೀಡುವುದನ್ನು ಕಡ್ಡಾಯಗೊಳಿಸಿದೆ.


ಸುತ್ತೋಲೆಯಲ್ಲಿ, ವಿಮಾ ಕಂಪನಿಗಳಿಗೆ ಸಮಗ್ರ ಆರೋಗ್ಯ ನೀತಿ ಒದಗಿಸಲು IRDA ಸೂಚಿಸಿದೆ. ಈ ಕುರಿತು ಮಾಹಿತಿ ನೀಡಿರುವ ಸ್ಟಾರ್ ಹೆಲ್ತ್ ಅಂಡ್ ಅಳಿದ ಇನ್ಸೂರೆನ್ಸ್ MD ಡಾ.ಎಸ್. ಪ್ರಕಾಶ್, ಆರೋಗ್ಯ ವಿಮೆಯ ಸೌಲಭ್ಯ ಒದಗಿಸುವುದು ನೌಕರರ ಪಾಲಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದ್ದಾರೆ. ಈ ಕುರಿತು ಆಎಶ ಹೊರಡಿಸಿರುವ ಗೃಹ ಸಚಿವಾಲಯ ಎಲ್ಲ ಕಂಪನಿಗಳು ತಮ್ಮ ನೌಕರರಿಗೆ ಆರೋಗ್ಯ ವಿಮೆ ಲಭ್ಯವಾಗುವಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಪ್ರಕಾಶ್ ಹೇಳಿದ್ದಾರೆ.


ESI ಸೌಲಭ್ಯವಿದ್ದರೆ ಹೇಗೆ?
ಕಾರ್ಮಿಕ ಕಾನೂನಿನ ಪ್ರಕಾರ, 1948 ರ ನೌಕರರ ರಾಜ್ಯ ವಿಮಾ ನಿಗಮ (ಇಎಸ್‌ಐ) ಕಾಯ್ದೆಯಡಿ ಸಂಘಟಿತ ವಲಯದ ಉದ್ಯೋಗಿಗಳಿಗೆ ವೈದ್ಯಕೀಯ ವಿಮೆಯನ್ನು ಒದಗಿಸಲಾಗಿದ್ದು, ಅವರ ಮಾಸಿಕ ವೇತನ 21,000 ರೂ ಅಥವಾ ಅದಕ್ಕಿಂತ ಕಡಿಮೆಯಾಗಿರಬೇಕು.


ESI ಅಡಿ ಬರುವ ನೌಕರರು ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ. ಇವುಗಳಲ್ಲಿ ಅನಾರೋಗ್ಯ, ಮ್ಯಾಟರ್ನಿಟಿ, ಅಂಗವೈಕಲ್ಯ, ವೈದ್ಯಕೀಯ ಪ್ರಾಯೋಜನೆ ಇತ್ಯಾದಿಗಳು ಶಾಮೀಲಾಗಿವೆ.ಇದರಲ್ಲಿ ವೈದ್ಯಕೀಯ ಲಾಭ OPD ಚಿಕಿತ್ಸೆಯನ್ನೂ ಕೂಡ ಕವರ್ ಮಾಡಲಾಗುತ್ತದೆ. ಸಾಮಾನ್ಯವಾಗಿ ವಿವಿಧ ಸಂಸ್ಥೆಗಳಲ್ಲಿ ESI ವ್ಯಾಪ್ತಿಗೆ ಬರುವ ನೌಕರರನ್ನು ಗುಂಪು ವಿಮಾ ಪಾಲಸಿ ವ್ಯಾಪ್ತಿಗೆ ಪರಿಗಣಿಸಲಾಗುವುದಿಲ್ಲ. ಹೀಗಾಗಿ ಇವರಿಗೆ ಮುಂದೆಯೂ ಕೂಡ ಗ್ರೂಪ್ ಇನ್ಸೂರೆನ್ಸ್ ಲಾಭ ಸಿಗುವುದಿಲ್ಲ ಎಂದೇ ಇದರ ಅರ್ಥ.


ಮಹಾಮಾರಿ ಇರುವವರೆಗೆ ಮಾತ್ರ ಸಿಗಲಿದೆಯೇ ಈ ಲಾಭ?
ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ IRDA ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಸಂಸ್ಥೆಗಳು ವೈದ್ಯಕೀಯ ವಿಮಾ ಪಾಲಿಸಿ ನೀಡಬಾರದು, ಆದರೆ ಈ ವ್ಯವಸ್ಥೆಯನ್ನು ಶಾಶ್ವತವಾಗಿ ನೀಡಬೇಕು ಎಂದು ಸೂಚಿಸಿದೆ. ಸಣ್ಣ ಉದ್ಯಮಗಳ ಬಜೆಟ್‌ನಲ್ಲಿ ಅವುಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವ ರೀತಿಯಲ್ಲಿ ಆರೋಗ್ಯ ವಿಮಾ ಪಾಲಿಸಿಯನ್ನು ಮಾಡಲು IRDA ವಿಮಾ ಕಂಪನಿಗಳನ್ನು ಕೇಳಿಕೊಂಡಿದೆ.