ನವದೆಹಲಿ: ಒಂದು ವೇಳೆ ನೀವೂ ಕೂಡ ಅಂಚೆ ಕಚೇರಿಯಲ್ಲಿ ಖಾತೆ ತೆರೆದಿದ್ದಾರೆ ಮತ್ತು ಅಂಚೆ ಕಚೇರಿಯ ATM ಸೌಲಭ್ಯ ಪಡೆಯುವ ಯೋಚನೆಯಲ್ಲಿದ್ದರೆ, ಇದನ್ನು ನೀವು ಸುಲಭವಾಗಿ ಮಾಡಬಹುದು. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಆರಂಭವಾದಾಗಿನಿಂದ ಪೋಸ್ಟ್ ಆಫೀಸ್ ATM ಕೂಡ ಅಪ್ಡೇಟ್ ಆಗಿದೆ. ಇಂಡಿಯಾ ಪೋಸ್ಟ್ ಹಲವು ಸೇವಿಂಗ್ಸ್ ಸ್ಕೀಮ್ ಹಾಗೂ ಆಫರ್ ಗಳನ್ನು ನೀಡುತ್ತದೆ. ಪೋಸ್ಟ್ ಆಫೀಸ್ ನ ಕೆಲವು ಹೂಡಿಕೆಗಳಲ್ಲಿ ಬ್ಯಾಂಕ್ ಗಳಿಗಿಂತ ಹೆಚ್ಚಿನ ಬಡ್ಡಿ ಸಿಗುತ್ತದೆ.


COMMERCIAL BREAK
SCROLL TO CONTINUE READING

ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್ ಮೇಲೆ ಸಿಗುತ್ತದೆ ಆಕರ್ಷಕ ಬಡ್ಡಿ ದರ ಮತ್ತು ಸೌಲಭ್ಯ
ಅಂಚೆ ಕಚೇರಿಗಳಲ್ಲಿ ಉಳಿತಾಯ ಖಾತೆ, ಮರುಕಳಿಸುವ ಠೇವಣಿ ಖಾತೆ (ಆರ್‌ಡಿ), ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಕಿಸಾನ್ ವಿಕಾಸ್ ಪತ್ರ, ಮಾಸಿಕ ಆದಾಯ ಯೋಜನೆ ಖಾತೆ (ಎಂಐಎಸ್), ಸುಕನ್ಯಾ ಸಮೃದ್ಧಿ ಯೋಜನೆ, ಸ್ಥಿರ ಠೇವಣಿ ಖಾತೆ ಮತ್ತು ಹಿರಿಯ ನಾಗರಿಕ ಉಳಿತಾಯ ಯೋಜನೆ (ಎಸ್‌ಸಿಎಸ್ಎಸ್)ಗಳು ಶಾಮಿಲಾಗಿವೆ. ಈ ಎಲ್ಲಾ ಯೋಜನೆಗಳಲ್ಲಿ ಬಡ್ಡಿದರ ವಿಭಿನ್ನವಾಗಿದೆ.


ಸದ್ಯ ಉಳಿತಾಯ ಖಾತೆಯ ಮೇಲೆ ವಾರ್ಷಿಕವಾಗಿ ಶೇ.4% ರಷ್ಟು ಬಡ್ಡಿ ಸಿಗುತ್ತದೆ. ಇದಲ್ಲದೆ, ಅಂಚೆ ಕಚೇರಿ ಬ್ಯಾಂಕ್ ಉಳಿತಾಯ ಖಾತೆಯಂತೆ ಎಟಿಎಂ ಕಾರ್ಡ್ ಅನ್ನು ಸಹ ನೀಡುತ್ತದೆ, ಇದರ ಸಹಾಯದಿಂದ ನೀವು ಸುಲಭವಾಗಿ ಹಣವನ್ನು ವಿಥ್ ಡ್ರಾ ಮಾಡಬಹುದು.


ಟ್ರಾನ್ಸಾಕ್ಷನ್ ಶುಲ್ಕ ವಿಧಿಸಲಾಗುತ್ತದೆ 
ಪೋಸ್ಟ್ ಆಫೀಸ್ ಉಳಿತಾಯ ಖಾತೆಯನ್ನು ಹೊಂದಿರುವ ಖಾತ್ಯೆದಾರರು ಎಟಿಎಂ ಕಾರ್ಡ್‌ನಿಂದ ಹಣವನ್ನು ಹಿಂಪಡೆಯಬಹುದು. ಆದರೆ, ಇದರಲ್ಲಿಯೂ ಕೂಡ ನಗದು ಹಿಂಪಡೆಯುವಿಕೆಯ ಮಿತಿ ಇದೆ, ವಹಿವಾಟು ಶುಲ್ಕವನ್ನು ನಿಗದಿಪಡಿಸಲಾಗಿದೆ. ಇದರ ಜೊತೆಗೆ ನೀವು ಅಂಚೆ ಕಚೇರಿಯಲ್ಲಿ ಅನೇಕ ಸೌಲಭ್ಯಗಳನ್ನು ಸಹ ಪಡೆಯುತ್ತೀರಿ.


ರೂ. 25 ಸಾವಿರವರೆಗೆ ವಿಥ್ ಡ್ರಾ ಮಾಡಬಹುದು
ಇಂಡಿಯಾ ಪೋಸ್ಟ್ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ ನೀವು ಪೋಸ್ಟ್ ಆಫೀಸ್ ಉಳಿತಾಯ ಖಾತೆಯಿಂದ ರೂ.25 ಸಾವಿರ ಹಣ ವಿಥ್ ಡ್ರಾ ಮಾಡಬಹುದು. ಆದರೆ, ಏಕಕಾಲಕ್ಕೆ ರೂ.10 ಸಾವಿರ ಮಾತ್ರ ಪಡೆಯಬಹುದು. ಇದಲ್ಲದೆ ಮೆಟ್ರೋ ನಗರಗಳಲ್ಲಿ ಒಟ್ಟು ಮೂರು ವ್ಯವಹಾರ ಗಳನ್ನು ಉಚಿತವಾಗಿ ಮಾಡಬಹುದು. ಮೆಟ್ರೋಗಳಲ್ಲದ ನಗರಗಳಲ್ಲಿ ಒಟ್ಟು ಐದು ವ್ಯವಹಾರಗಳನ್ನು ಉಚಿತವಾಗಿ ಮಾಡಬಹುದು.


ಉಚಿತ ವ್ಯವಹಾರಕ್ಕೆ ಅವಕಾಶವಿದೆ
ಇಂಡಿಯಾ ಪೋಸ್ಟ್ ಗ್ರಾಹಕರಿಗೆ ಎಲ್ಲಾ ಪೋಸ್ಟ್ ಆಫೀಸ್ ಎಟಿಎಂಗಳಿಂದ ಉಚಿತ ವಹಿವಾಟಿನ ಅನುಕೂಲವನ್ನು ನೀಡುತ್ತದೆ. ಆದರೆ, ಒಂದು ದಿನದಲ್ಲಿ ಕೇವಲ 5 ಹಣಕಾಸು ವ್ಯವಹಾರಗಳನ್ನು ಮಾತ್ರ ಮಾಡಬಹುದು. ಇದಲ್ಲದೆ, ಅಂಚೆ ಕಚೇರಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಟಿಎಂಗಳಿಂದ ಎಲ್ಲಾ ಗ್ರಾಹಕರಿಗೆ ಉಚಿತ ವಹಿವಾಟು ಸೌಲಭ್ಯವನ್ನು ಸಹ ಒದಗಿಸಿದೆ.