ನವದೆಹಲಿ: ಸ್ವಂತ ಮನೆ ಹೊಂದಬೇಕೆನ್ನುವುದು ಪ್ರತಿಯೊಬ್ಬರ ಜೀವನದ ಕನಸಾಗಿರುತ್ತದೆ.ಆದರೆ ಆರ್ಥಿಕವಾಗಿ ಸಬಲರಲ್ಲದ ಅನೇಕ ಜನರ  ಸ್ವಂತ ಮನೆ ಕನಸು, ಕನಸಾಗೆ ಉಳಿದುಬಿಡುತ್ತದೆ. ಹಾಗಾಗಿ ನಮ್ಮ ದೇಶದಲ್ಲಿ ಇಲ್ಲಿಯವರೆಗೂ ಸಾವಿರಾರು ಕುಟುಂಬಗಳು ಸ್ವಂತ ಮನೆಯಿಲ್ಲದೆ ಬೀದಿಯಲ್ಲಿವೆ. ಇನ್ನು ಭಾರತದಲ್ಲಿ ಅದೆಷ್ಟೋ ಲಕ್ಷಾಂತರ ಕುಟುಂಬಗಳು ಸ್ವಂತ ಮನೆಯಿಲ್ಲದೆ ಬೀದಿಯಲ್ಲಿದ್ದು ಜೀವನ ಸಾಗಿಸುತ್ತಿದ್ದು, ಪ್ರತಿಯೊಬ್ಬರೂ ಮನೆಗಳನ್ನು ಹೊಂದಿರಬೇಕು ಎನ್ನುವುದು ಸರ್ಕಾರದ ಆಶಯ. ಹಾಗಾಗಿ ಕೇಂದ್ರ ಸರ್ಕಾರ “ಪ್ರಧಾನ ಮಂತ್ರಿ ಅವಾಸ ಯೋಜನೆ” ಎಂಬ ಉತ್ತಮವಾದ ಯೋಜನೆಯನ್ನು ಜಾರಿಗೆಗೆ ತಂದಿರುವ ವಿಷಯ ಹೊಸದೇನಲ್ಲ. ಆದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೊಸ ವರ್ಷದ ಆರಂಭದ ದಿನ ರಾಷ್ಟ್ರದ ಪ್ರಜೆಗಳಿಗೆ ಸಿಹಿಸುದ್ದಿಯನ್ನು ನೀಡಿದೆ. 


COMMERCIAL BREAK
SCROLL TO CONTINUE READING

ಹೌದು, ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ ಯೋಜನೆ (ನಗರ) ಅಡಿಯಲ್ಲಿ ಕ್ರೆಡಿಟ್ ಲಿಂಕ್ ಸಬ್ಸಿಡಿ ಸ್ಕೀಮ್ (CLSS) ಮೂಲಕ ಮಧ್ಯಮ ಆದಾಯ ಗುಂಪು (ಎಂಐಜಿ) ಗಳಿಗೆ ನೀಡುವ ಮನೆ ಸಾಲದ ಅವಧಿ ಮಾರ್ಚ್ 2020 ರ ವರೆಗೆ ವಿಸ್ತರಿಸಿದೆ.


ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಬಡ್ಡಿ ಸಬ್ಸಿಡಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಇದರ ಬಗ್ಗೆ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ. 


ಪ್ರಧಾನಿ ನರೇಂದ್ರ ಮೋದಿ 2022 ರ ಹೊತ್ತಿಗೆ 'ಪ್ರಧಾನಿ ವಸತಿ ಯೋಜನೆ'ಯಡಿಯಲ್ಲಿ ಎಲ್ಲರಿಗೂ ವಸತಿ ನೀಡುವ ಗುರಿ ಹೊಂದಿದ್ದಾರೆ. ಇದು ಅವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ಈ ಗುರಿಯನ್ನು ಪೂರೈಸುವ ಸಲುವಾಗಿ, ಯೂನಿಯನ್ ಮಿನಿಸ್ಟ್ರಿ ಆಫ್ ಹೌಸಿಂಗ್ ಅಂಡ್ ಅರ್ಬನ್ ಡೆವಲಪ್ಮೆಂಟ್ 2018 ರಲ್ಲಿ ಅನೇಕ ಯೋಜನೆಗಳನ್ನು ಪರಿಚಯಿಸಿತು. ಇದರ ಅಡಿಯಲ್ಲಿ, 2020 ಒಂದು ಕೋಟಿ ಮನೆಗಳ ನಿರ್ಮಾಣವನ್ನು ಪ್ರಾರಂಭಿಸುವ ಉದ್ದೇಶವಾಗಿದೆ.


ಈ ಯೋಜನೆಯಡಿಯಲ್ಲಿ ಮನೆಗಳನ್ನು ನಿರ್ಮಿಸುವುದಕ್ಕೆ ಅನುದಾನ ನೀಡುವುದು, ಸಾಲದಲ್ಲಿ ಸಬ್ಸಿಡಿ ನೀಡುವ ಯೋಜನೆ, ನಗರ ಪ್ರದೇಶಗಳಲ್ಲಿ ಮನೆ ನಿರ್ಮಿಸುವುದಕ್ಕೆ ರಾಜ್ಯ ಸರಕಾರಗಳ ಜತೆ ಸೇರಿ ಹಣಕಾಸು ನೆರವು ನೀಡಲಾಗುತ್ತಿದೆ. 


ಜನಸಾಮಾನ್ಯರ ಸ್ವಂತ ಮನೆ ಕನಸು ನನಸು ಮಾಡಲು, ಕೇಂದ್ರ ಸರ್ಕಾರ “ಪ್ರಧಾನ ಮಂತ್ರಿ ಅವಾಸ ಯೋಜನೆ” (Pradhan ,Mantri Awas Yojana) ಪ್ರಾರಂಭಿಸಿದೆ. ಇದರಲ್ಲಿ ಬಡವರು, ಅತಿ ಕೆಳವರ್ಗದವರು, ಮಧ್ಯಮ ವರ್ಗದವರು, ಕಡಿಮೆ ಆದಾಯ ಹೊಂದಿರುವವರು, ನೌಕರರು ಹೀಗೆ ಎಲ್ಲರೂ ಒಳಗೊಂಡಿದ್ದಾರೆ.


ಯಾರೂ ಅರ್ಹರು?   


  • ಮದ್ಯಮ ಆದಾಯ ಗುಂಪಿನ (MIG) ಫಲಾನುಭವಿಗಳು ವಾರ್ಷಿಕವಾಗಿ ರೂ. 6 ಲಕ್ಷದಿಂದ ರೂ. 18 ಲಕ್ಷ ಆದಾಯ ಹೊಂದಿದವರಿಗೆ CLSS ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. 

  • ಮೊದಲ ಬಾರಿಗೆ ಮನೆ ಖರೀದಿಸುತ್ತಿದ್ದಲ್ಲಿ ಬಡ್ಡಿ ಸಬ್ಸಿಡಿಗೆ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. 

  • ವಾರ್ಷಿಕ ಆದಾಯ ರೂ. 12 ಲಕ್ಷದಿಂದ 18 ಲಕ್ಷ ವರೆಗೆ ಇದ್ದಲ್ಲಿ ಬಡ್ಡಿ ಸಬ್ಸಿಡಿ ಶೇ. 3 ರಷ್ಟಾಗುತ್ತದೆ.


ಸಬ್ಸಿಡಿ ಮೊತ್ತ ಎಷ್ಟು?
ಕ್ರೆಡಿಟ್ ಲಿಂಕ್ ಸಬ್ಸಿಡಿ ಸ್ಕೀಮ್ (CLSS) ಮೂಲಕ ಕೇಂದ್ರ ಸರ್ಕಾರ ರೂ. 2.67 ಲಕ್ಷದವರೆಗೆ ಸಬ್ಸಿಡಿಯನ್ನು ಒದಗಿಸುತ್ತದೆ. ಇದಕ್ಕಾಗಿ ಒಂದು ವರ್ಷದವರೆಗೆ (ಮಾರ್ಚ್ 31, 2020) ಅವಧಿಯನ್ನು ವಿಸ್ತರಿಸಲಾಗಿದೆ.


ಆದಾಯ ರೂ. 6 ಲಕ್ಷ ಇರುವವರು ಪ್ರಸ್ತುತ ಈ ಸಬ್ಸಿಡಿಯ ಲಾಭವನ್ನು ಪಡೆಯುತ್ತಿದ್ದಾರೆ. ಆದರೆ ಈಗ ಇದರ ಮಿತಿಯನ್ನು 6 ಲಕ್ಷದಿಂದ 18 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅಂದರೆ ಈ ಸಬ್ಸಿಡಿ ಪರಿಮಿತಿಯಲ್ಲಿ ಇದೀಗ ರೂ. 18 ಲಕ್ಷದವರೆಗೆ ಆದಾಯ ಗಳಿಸುವವರು ಫಲಾನುಭವಿಗಳು ಪಡೆಯಲಿದ್ದಾರೆ. ವಾರ್ಷಿಕವಾಗಿ ರೂ. 12 ಲಕ್ಷ ಆದಾಯ ಗಳಿಸುತ್ತಿರುವವರು ಮೂಲ ಅಸಲು ರೂ. 9 ಲಕ್ಷದ ಮೇಲೆ ಶೇ. 4ರಷ್ಟು ಬಡ್ಡಿ ಸಬ್ಸಿಡಿ ಪಡೆಯಲಿದ್ದಾರೆ. ಒಂದು ವೇಳೆ ನಿಮ್ಮ ಆದಾಯ ವಾರ್ಷಿಕವಾಗಿ ರೂ. 18 ಲಕ್ಷ ಇದ್ದರೆ ಮೂಲ ಅಸಲು ರೂ. 12 ಲಕ್ಷದ ಮೇಲೆ ಶೇ. 3ರಷ್ಟು ಸಬ್ಸಿಡಿ ಪಡೆಯಬಹುದು.


ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಯಾವುದೇ ವಿಚಲನೆ ಅಥವಾ ದೌರ್ಬಲ್ಯತೆ ಇಲ್ಲದೆ ಸರ್ಕಾರದ ಸೇವೆಗಳು ಜನರಿಗೆ ತಲುಪಬೇಕು ಎನ್ನುವುದು ಯೋಜನೆಯ ಉದ್ದೇಶವಾಗಿದೆ. ಅಷ್ಟೇ ಅಲ್ಲದೇ, ಫಲಾನುಭವಿಗಳ ಮನವಿಯನ್ನು ವೇಗವಾಗಿ ಸಕ್ರಿಯಗೊಳಿಸಲು ಜನರು ಸಲ್ಲಿಸುವ ನೇರ ಆನ್ಲೈನ್ ಅಪ್ಲಿಕೇಶನ್ ಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲಿ ಗಮನಹರಿಸಿ ಅನುಷ್ಠಾನಕ್ಕೆ ತರಲಾಗಿದೆ