ನವದೆಹಲಿ: ಏಳು ವರ್ಷ ವಯಸ್ಸಿನ ಪ್ರದ್ಯುಮನ್ ಪ್ರಕರಣದಲ್ಲಿ ಸಿಬಿಐ ಆರೋಪಿಯನ್ನು ಬಹಿರಂಗ ಪಡಿಸಿದ ನಂತರ, ಪ್ರದ್ಯುಮನ್ ನ ತಾಯಿ ಆರೋಪಿಯು ತನ್ನ ಮಗನನ್ನು ಏಕೆ ಕೊಂದ ಎಂದು ನಾನು ಕೇಳಿ ತಿಳಿದು ಕೊಳ್ಳಬೇಕು ಎಂದು ಹೇಳಿದ್ದಾರೆ. ಪ್ರದ್ಯುಮನ್ ಸಾವಿಗೆ ಬಸ್ ಕಂಡಕ್ಟರ್ ಅಶೋಕ್ ಕುಮಾರ್ ಕಾರಣ ಅಲ್ಲ, ಅದೇ ಶಾಲೆಯ 11ನೇ ತರಗತಿಯ ಬಾಲಕ ಕಾರಣ ಎಂಬ ಆಘಾತಕಾರಿ ವಿಷಯವನ್ನು ಸಿಬಿಐ ಬುಧವಾರ ಬಹಿರಂಗ ಪಡಿಸಿದೆ.


COMMERCIAL BREAK
SCROLL TO CONTINUE READING

ಈ ಪ್ರಕರಣದಲ್ಲಿ ಬಸ್ ಕಂಡಕ್ಟರ್ ಬಂಧನಕ್ಕೆ ಸಂಬಂಧಿಸಿದಂತೆ ತಾನು ಅನುಮಾನ ಹೊಂದಿದ್ದೆ, ಹಾಗಾಗಿಯೇ ತಾವು ಸಿಬಿಐ ತನಿಖೆಗೆ ಆಗ್ರಹಪಡಿಸಿದ್ದೆ ಎಂದು ಪ್ರದ್ಯುಮನ್ ತಂದೆ ಹೇಳಿದರು.ಈಗ ಸಿಬಿಐ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದೆ. ಇದರಿಂದ ತಮಗೆ ತೃಪ್ತಿ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ. ಜೊತೆಗೆ ಆರೋಪಿಯನ್ನು 16 ವರ್ಷ ಪ್ರಾಯದ ಬಾಲಕ ಎಂದು ಪರಿಗಣಿಸದೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಅವರು ಮನವಿಮಾಡಿದ್ದಾರೆ. 


ಸಿಬಿಐ ಹೇಳಿಕೆಯನ್ನು ಬೆಂಬಲಿಸಿರುವ ಅವರು ಸಿಬಿಐ ಏನಾದರೂ ಹೇಳಿದೆ ಎಂದರೆ ಖಂಡಿತವಾಗಿಯೂ ಅದಕ್ಕೆ ಸೂಕ್ತ ಪುರಾವೆ ಇದ್ದೆ ಇರುತ್ತದೆ. ಈಮಧ್ಯೆ ಪ್ರದ್ಯುಮನ್ ತಾಯಿ ಸುಷ್ಮಾ ಠಾಕೂರ್ ತನಿಖೆಯು ಪ್ರಗತಿಯಲ್ಲಿದ್ದು ಮುಂದೆ ಏನಾಗುತ್ತದೆ ಎಂಬುದನ್ನು ಕಾಡು ನೋಡೋಣ ಎಂದು ತಿಳಿಸಿದ್ದಾರೆ. ಸಿಬಿಐ ಬಗ್ಗೆ ಜನರಿಗೆ ನಿರೀಕ್ಷೆಯಿದೆ ಎಂದು ತಿಳಿಸಿರುವ ಸುಷ್ಮಾ ಠಾಕೂರ್ ತಿಳಿಸಿದ್ದಾರೆ.