ಹೊಸದಿಲ್ಲಿ: ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರನ್ನು ಅಮರೀಂದರ್ ಸಿಂಗ್ ದೇಶದ್ರೋಹಿ ಎಂದು ಕರೆದಿರುವ ಹಿನ್ನಲೆಯಲ್ಲಿ ಈಗ ಗಾಂಧಿ ಕುಟುಂಬದ ಮೌನವನ್ನು ಪ್ರಕಾಶ್ ಜಾವಡೆಕರ್ ಪ್ರಶ್ನಿಸಿದ್ದಾರೆ.


COMMERCIAL BREAK
SCROLL TO CONTINUE READING

ಕಾಂಗ್ರೆಸ್ ಪಕ್ಷವು ಈ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡುತ್ತದೆಯೇ ಮತ್ತು ಕ್ರಮ ಕೈಗೊಳ್ಳುತ್ತದೆಯೇ ಎಂದು ಜಾವಡೇಕರ್ ಪ್ರಶ್ನಿಸಿದ್ದಾರೆ.


'ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ (Captain Amarindar Singh) ತಮ್ಮ ಪಕ್ಷದ ರಾಜ್ಯ ಮುಖ್ಯಸ್ಥ ನವಜೋತ್ ಸಿಂಗ್ ಸಿಂಧು ಅವರನ್ನು ದೇಶವಿರೋಧಿ ಎಂದು ಕರೆದಿದ್ದಾರೆ.ಇದು ಅತ್ಯಂತ ಗಂಭೀರ ಆರೋಪ. ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಏಕೆ ಮೌನವಾಗಿದ್ದಾರೆ ಎಂದು ಬಿಜೆಪಿ ಕಾಂಗ್ರೆಸ್‌ಗೆ ಒಂದೇ ಒಂದು ಪ್ರಶ್ನೆಯನ್ನು ಕೇಳುತ್ತಿದೆ.ಕಾಂಗ್ರೆಸ್ ಈ ವಿಷಯದ ಬಗ್ಗೆ ಮಾತನಾಡಲು ಮತ್ತು ಅವರ ಅಭಿಪ್ರಾಯನ್ನು ಹೇಳಲು ನಾವು ಒತ್ತಾಯಿಸುತ್ತೇವೆ.ಕಾಂಗ್ರೆಸ್ ಈ ಆರೋಪಗಳನ್ನು ಅರಿತುಕೊಂಡು ಕ್ರಮ ಕೈಗೊಳ್ಳುತ್ತದೆಯೇ ಎಂದು ಜಾವಡೇಕರ್ ಹೇಳಿದರು.


ಇದನ್ನೂ ಓದಿ-ಯಾರಾಗ್ತಾರೆ ಪಂಜಾಬ್ ನೂತನ ಮುಖ್ಯಮಂತ್ರಿ? ರೇಸ್​ನಲ್ಲಿ ಇರುವ ಹೆಸರುಗಳಿವು


ಅಮರೀಂದರ್ ಸಿಂಗ್ ಅವರು ಪಂಜಾಬ್ ಸಿಎಂ ಸ್ಥಾನದಿಂದ ಕೆಳಗಿಳಿದ ಒಂದು ದಿನದ ನಂತರ ಪಕ್ಷದ ನಾಯಕತ್ವವು ತಮ್ಮನ್ನು ಅವಮಾನಿಸಿದೆ ಮತ್ತು ಸಿಧು ಅವರನ್ನು "ದೇಶ ವಿರೋಧಿ", "ಅಸಮರ್ಥ" ಮತ್ತು ರಾಜ್ಯ ಮತ್ತು ದೇಶದ ಭದ್ರತೆಗೆ ಮಾರಕ ಎಂದು ಹೇಳಿದ್ದರು.


ಸಿದ್ದು ಇಮ್ರಾನ್ ಖಾನ್ ಮತ್ತು ಜನರಲ್ ಬಾಜ್ವಾ ಅವರನ್ನು ಅಪ್ಪಿಕೊಳ್ಳುವುದನ್ನು ನಾವು ನೋಡಿದ್ದೇವೆ ಮತ್ತು ಕರ್ತಾರ್‌ಪುರ್ ಕಾರಿಡಾರ್ ತೆರೆಯುವಾಗ ಪಾಕಿಸ್ತಾನದ ಪ್ರಧಾನಿಯನ್ನು ಹಾಡಿ ಹೊಗಳಿರುವುವುದನ್ನು ನಾವು ನೋಡಿದ್ದೇವೆ ಎಂದು ಅಮರಿಂದರ್ ಸಿಂಗ್ ಕಿಡಿ ಕಾರಿದ್ದರು.


'ನವಜೋತ್ ಸಿಂಗ್ ಸಿಧು ಒಬ್ಬ ಅಸಮರ್ಥ ವ್ಯಕ್ತಿ, ಆತ ದುರಂತಕ್ಕೆ ಒಳಗಾಗುತ್ತಾನೆ. ಮುಂದಿನ ಸಿಎಂ ಮುಖಕ್ಕಾಗಿ ನಾನು ಅವರ ಹೆಸರನ್ನು ವಿರೋಧಿಸುತ್ತೇನೆ. ಆತನಿಗೆ ಪಾಕಿಸ್ತಾನದೊಂದಿಗೆ ಸಂಪರ್ಕವಿದೆ.ಇದು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗಿದೆ ಎಂದು ಹೇಳಿದರು.ಇನ್ನೂ ಮುಂದುವರೆದು ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕೆ ತಮ್ಮದು ಸಂಪೂರ್ಣ ವಿರೋಧವಿದೆ ಎಂದು ಹೇಳಿದರು.


ಇದನ್ನೂ ಓದಿ-PAN Aadhaar Link:ಮತ್ತೆ ವಿಸ್ತರಣೆಯಾದ ಆಧಾರ್-ಪ್ಯಾನ್ ಜೋಡಣೆಯ Deadline


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.