ಗಿಡ ನೆಟ್ಟು ಸೆಲ್ಫಿ ಕ್ಲಿಕ್ಕಿಸಿ ಅಭಿಯಾನಕ್ಕೆ ಪ್ರಕಾಶ್ ಜಾವಡೇಕರ್ ಕರೆ
ಪ್ರತಿಯೊಬ್ಬರೂ ಸಸಿ ನೆಟ್ಟು ಸೆಲ್ಫಿ ತೆಗೆದು ನಿಮ್ಮ ಸಾಮಾಜಿಕ ತಾಣಗಳಲ್ಲಿ #SelfiewithSapling ಹ್ಯಾಶ್ ಟ್ಯಾಗ್ ಜೊತೆ ಪೋಸ್ಟ್ ಮಾಡುವಂತೆ ಪ್ರಕಾಶ್ ಜಾವಡೇಕರ್ ಕರೆ ನೀಡಿದ್ದಾರೆ.
ನವದೆಹಲಿ: ಜೂನ್ 5ರಂದು ವಿಶ್ವಾದ್ಯಂತ ಪರಿಸರ ದಿನದ ಅಂಗವಾಗಿ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ #SelfiewithSapling ಗಿಡ ನೆಟ್ಟು ಸೆಲ್ಫಿ ಕ್ಲಿಕ್ಕಿಸಿ ಅಭಿಯಾನಕ್ಕೆ ಕರೆ ನೀಡಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ವೀಡಿಯೋವೊಂದನ್ನು ಶೇರ್ ಮಾಡಿರುವ ಅವರು, ಭಾರತೀಯರೆಲ್ಲರೂ ಉತ್ಸಾಹದಿಂದ ಪರಿಸರ ದಿನಾಚರಣೆಯನ್ನು ಆಚರಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ. ನಾವು ಸೆಲ್ಫಿ ಅಭಿಯಾನಕ್ಕೆ ಕರೆ ನೀಡಿದ್ದು, ಪ್ರತಿಯೊಬ್ಬರೂ ಸಸಿ ನೆಟ್ಟು ಸೆಲ್ಫಿ ತೆಗೆದು ನಿಮ್ಮ ಸಾಮಾಜಿಕ ತಾಣಗಳಲ್ಲಿ #SelfiewithSapling ಹ್ಯಾಶ್ ಟ್ಯಾಗ್ ಜೊತೆ ಪೋಸ್ಟ್ ಮಾಡುವಂತೆ ಕರೆ ನೀಡಿದ್ದಾರೆ.
ನವದೆಹಲಿಯ ಪರ್ಯಾವರಣ ಭವನದಲ್ಲಿ ಬುಧವಾರ ನಡೆಯಲಿರುವ ಗಿಡ ನೆಟ್ಟು ಸೆಲ್ಫಿ ಕ್ಲಿಕ್ಕಿಸಿ ಅಭಿಯಾನ ಕಾರ್ಯಕ್ರಮದಲ್ಲಿ ಕ್ರಿಕೆಟರ್ ಕಪಿಲ್ ದೇವ್ ಮತ್ತು ನಟ ಜಾಕಿ ಶ್ರಾಫ್ ಭಾಗವಹಿಸಲಿದ್ದಾರೆ ಎಂದು ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.