ನವದೆಹಲಿ: ಮಾಜಿ ಕೇಂದ್ರ ಗೃಹ ಸಚಿವ ಮತ್ತು ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ ಅವರ ಮಗಳು ಪ್ರಣಿತಿ ಶಿಂಧೆ ಈಗ ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಡೆಂಗ್ಯೂ ಸೊಳ್ಳೆ' ಎಂದು ಕರೆದಿದ್ದಾರೆ. 


COMMERCIAL BREAK
SCROLL TO CONTINUE READING

ಮಹಾರಾಷ್ಟ್ರದ ಸೋಲಾಪುರದಿಂದ ಕಾಂಗ್ರೆಸ್ ಶಾಸಕರಾಗಿರುವ ಪ್ರಣತಿ ಶಿಂಧೆ, ಸಾರ್ವಜನಿಕ ರ್ಯಾಲಿಯೊಂದರಲ್ಲಿ ಭಾಗವಹಿಸಿ ಮಾತನಾಡುತ್ತಾ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ಪಕ್ಷವನ್ನು ಅಧಿಕಾರದಿಂದ ಕಿತ್ತುಹಾಕುವಂತೆ ಜನರಲ್ಲಿ ಒತ್ತಾಯಿಸಿದ್ದಾರೆ.


ಮೋದಿ ಬಾಬಾ ಎಂಬ ಹೆಸರಿನ ಹೊಸ ಡೆಂಗ್ಯೂ ಸೊಳ್ಳೆ ಎಲ್ಲರಿಗೂ ಅನಾರೋಗ್ಯವನ್ನುಂಟು ಮಾಡುತ್ತಿದೆ ಆದ್ದರಿಂದ ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಕಿತ್ತೊಗೆಯಬೇಕೆಂದು ಶಾಸಕಿ ಪ್ರಣಿತಿ ಶಿಂಧೆ ತಿಳಿಸಿದರು. ಇದೇ ವೇಳೆ ಬಿಜೆಪಿ ಸಂಸದ ಶರದ್ ಬನ್ಸೋಡ್ ಅವರನ್ನು ತರಾಟೆಗೆ ತಗೆದುಕೊಂಡ  ಅವರು ಸಂಸದ ಬನ್ಸೋಡ ಅವರನ್ನು ಕುಡುಕ ಎಂದು ಕರೆದಿದ್ದಾರೆ.


ಇತ್ತೀಚಿಗೆ ಜಿಗ್ನೇಶ್ ಮೆವಾಣಿ ಪಾಟ್ನಾದಲ್ಲಿ ನಡೆಯುತ್ತಿರುವ ರ್ಯಾಲಿಯಲ್ಲಿ ಮಾತನಾಡುತ್ತಾ ತಮ್ಮ ಗುಜರಾತ್ ನಲ್ಲಿ ವಲಸಿಗ ಕಾರ್ಮಿಕರ ವಿರುದ್ಧ ನಡೆದ ಘಟನೆಗಳ ಬಗ್ಗೆ ಪ್ರಧಾನಿ ಮೋದಿ ಮೌನವನ್ನು ವಹಿಸಿರುವುದನ್ನು ಪ್ರಶ್ನಿಸಿ ನಮಕ್ ಹರಮ್ ಎಂದು ಕರೆದಿದ್ದರು.


ಇನ್ನೊಂದೆಡೆಗೆ ಪ್ರಧಾನಿ ಮೋದಿ ವಿರುದ್ದದ ಅವಹೇಳನಕಾರಿ ಪದಗಳ ಬಳಕೆಗೆ ಎನ್ಸಿಪಿ ಸಂಸದ ಮಜೀದ್ ಮೆಮನ್ ವಿರೋಧ ವ್ಯಕ್ತಪಡಿಸಿದ್ದಾರೆ.