ನವದೆಹಲಿ: ಮುಂದಿನ ವರ್ಷ ಪಶ್ಚಿಮ ಬಂಗಾಳ ಚುನಾವಣೆಗೆ ಮುನ್ನ ಮಮತಾ ಬ್ಯಾನರ್ಜಿ ಅವರ ಹೊಸ ಅಭಿಯಾನ 'ಬಾಂಗ್ಲರ್ ಗೋರ್ಬೊ ಮಮತಾ' ಹೆಸರಿನಲ್ಲಿ ರೂಪಿಸಲಾಗಿದೆ.ಈ ತಂತ್ರವನ್ನು ಚುನಾವಣಾ ಚಾಣಾಕ್ಯ ಎಂದೇ ಬಿಂಬಿತವಾಗಿರುವ ಪ್ರಶಾಂತ್ ಕಿಶೋರ್ ರೂಪಿಸಿದ್ದಾರೆ.


COMMERCIAL BREAK
SCROLL TO CONTINUE READING

ದೀದಿ ಕೆ ಬೋಲೋ ಅಭಿಯಾನದ ನಂತರ ಮುಂಬರುವ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಟಿಎಂಸಿಗೆ ಈಗ ಪ್ರಶಾಂತ್ ಕಿಶೋರ್ ಅವರ ತಂತ್ರದ ಭಾಗವಾಗಿ 'ಬಾಂಗ್ಲರ್ ಗೋರ್ಬೊ ಮಮತಾ'(ಬಂಗಾಳದ ಹೆಮ್ಮೆ ಮಮತಾ') ಅಭಿಯಾನವನ್ನು ರೂಪಿಸಿದ್ದಾರೆ ಎನ್ನಲಾಗಿದೆ.ಈ ಅಭಿಯಾನವು ಪ್ರಮುಖವಾಗಿ ಸಂವಿಧಾನದಲ್ಲಿ ಪ್ರತಿಪಾದಿಸಲಾಗಿರುವ ಆದರ್ಶಗಳ ಪ್ರಮುಖ ರಕ್ಷಕಿ ಎಂದು ನಿರೂಪಿಸುತ್ತದೆ.ಆ ಮೂಲಕ ಕೇಂದ್ರ ಸರ್ಕಾರದ ವಿವಾದಿತ ಪೌರತ್ವ ಕಾನೂನು ಮತ್ತು ಗೃಹ ಸಚಿವ ಅಮಿತ್ ಷಾ ಅವರ ಆಕ್ರಮಣದ ನೀತಿ ವಿರುದ್ಧ ಈ ಅಭಿಯಾನವನ್ನು ಬಳಸಿಕೊಳ್ಳಲಾಗುತ್ತದೆ ಎನ್ನಲಾಗಿದೆ.


ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಮತ್ತು ಲಕ್ಷಕ್ಕೂ ಹೆಚ್ಚು ತೃಣಮೂಲ ಕಾರ್ಮಿಕರು ರಾಜ್ಯಾದ್ಯಂತ ಪ್ರಯಾಣಿಸಲು ಯೋಜಿಸಿದ್ದಾರೆ ಮತ್ತು ರಾಜ್ಯದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಮತ್ತು ಅದರ ಕೋಮು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಸಮರ್ಥವಾಗಿರುವ ಏಕೈಕ ನಾಯಕಿ ಮಮತಾ ಬ್ಯಾನರ್ಜಿ ಎಂಬುದನ್ನು ಬಿಂಬಿಸಲಿದ್ದಾರೆ. ಒಟ್ಟು 75 ದಿನಗಳ ಅಭಿಯಾನವಾಗಿರುವ ಈ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗಿದೆ. ಕಳೆದ ವರ್ಷ 'ದಿದಿ ಕೆ ಬೋಲೊ'ಅಭಿಯಾನವು ಸಹಾಯವಾಣಿ ಸಂಖ್ಯೆ ಮತ್ತು ವೆಬ್‌ಸೈಟ್ ಅನ್ನು ಜನರು ತಮ್ಮ ಕುಂದು ಕೊರತೆಗಳೊಂದಿಗೆ ಮುಂದೆ ಬರಲು ಒತ್ತಾಯಿಸಿತು.


ಕಳೆದ ವರ್ಷ ನಡೆದ ರಾಷ್ಟ್ರೀಯ ಚುನಾವಣೆಯ ನಂತರ ಮಮತಾ ಬ್ಯಾನರ್ಜಿ ಅವರು ತಮ್ಮ ಅಭಿಯಾನವನ್ನು ಹೆಚ್ಚಿಸಲು ಪ್ರಶಾಂತ್ ಕಿಶೋರ್ ನೆರವಿನೊಂದಿಗೆ ಅವರು ಈ ಯೋಜನೆಯನ್ನು ರೂಪಿಸಿದ್ದಾರೆಂದು ತಿಳಿದು ಬಂದಿದೆ. ಲೋಕಸಭಾ ಚುನಾವಣೆಯಲ್ಲಿ ಟಿಎಂಸಿಗೆ ನೇರ ಎದುರಾಳಿಯಾಗಿ ಹೊರ ಹೊಮ್ಮಿದ ಬಿಜೆಪಿ 18 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.'ಬಾಂಗ್ಲರ್ ಗೋರ್ಬೊ ಮಮತಾ' ಅಭಿಯಾನವು 'ಭಾವೋದ್ರಿಕ್ತ ಪ್ರತಿಪಾದಕ' ಮತ್ತು ಬಂಗಾಳದ ಸಂಸ್ಕೃತಿ, ಘನತೆ ಮತ್ತು ಹೆಮ್ಮೆಯ ನಿಜವಾದ ಉಸ್ತುವಾರಿ ಎಂದು ಬಿಂಬಿಸಲಾಗುತ್ತದೆ. ಅಷ್ಟೇ ಅಲ್ಲದೆ ಬಂಗಾಳದ ಹಿಂದಿನ ವೈಭವವನ್ನು ಪುನಃಸ್ಥಾಪಿಸಲು ದಣಿವರಿಯಿಲ್ಲದೆ ಕೆಲಸ ಮಾಡುವ ಪ್ರಧಾನ ವಾಸ್ತುಶಿಲ್ಪಿ ಎಂದೂ ಮಮತಾ ಅವರನ್ನು ಬಿಂಬಿಸುವುದಕ್ಕೆ ಈ ಅಭಿಯಾನ ಸಹಾಯಕವಾಗಲಿದೆ ಎನ್ನಲಾಗದೆ.


ಭಾನುವಾರ ಸರ್ವ-ಧರ್ಮದ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ನಂತರ, ಅಭಿಯಾನವು ಪ್ರತಿ ಕ್ಷೇತ್ರದ ಘಟನೆಗಳನ್ನು ಕೇಂದ್ರೀಕರಿಸಲಿದೆ. ಇದಾದ ನಂತರ ಮಮತಾ ಬ್ಯಾನರ್ಜಿ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗದವರು, ಸೋಷಿಯಲ್ ಮೀಡಿಯಾ ಪ್ರಭಾವಶಾಲಿಗಳು ಮತ್ತು ಸಾವಿರಾರು ಕಾರ್ಮಿಕರೊಂದಿಗೆ ಸಂವಹನ ನಡೆಸಲು ಯೋಜಿಸಿದ್ದಾರೆ.