ನವದೆಹಲಿ: ಹರ್ಯಾಣ ದಲ್ಲಿ ವಿಧಾನಸಭೆ ಚುನಾವಣೆ ಇರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಮತ್ತು ಬಿಎಸ್ಪಿ ಮೈತ್ರಿಗೆ ಮುಂದಾಗಿವೆ. ಅಕ್ಟೋಬರ್ ತಿಂಗಳಲ್ಲಿ ಚುನಾವಣೆ ಇರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಈಗ ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಳ್ಳುವ ವಿಚಾರವಾಗಿ ಈಗ ಊಹಾಪೋಹಗಳು ಕೇಳಿ ಬಂದಿವೆ.


COMMERCIAL BREAK
SCROLL TO CONTINUE READING

ಭಾನುವಾರದಂದು ಹರ್ಯಾಣದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ಪಕ್ಷದ ನಾಯಕ ಭುಪಿಂದರ್ ಸಿಂಗ್ ಹೂಡಾ ಮತ್ತು ಬಿಎಸ್ಪಿ ನಾಯಕಿ ನಡುವೆ ಸಭೆ ನಡೆದ ಹಿನ್ನಲೆಯಲ್ಲಿ ಈಗ ಉಭಯ ಪಕ್ಷಗಳ ನಡುವೆ ಮೈತ್ರಿ ಸಾಧ್ಯತೆ ಕುರಿತಾಗಿ ಮಾತುಗಳು ಕೇಳಿ ಬರುತ್ತಿವೆ ಎನ್ನಲಾಗಿದೆ. ಸುಮಾರು ಅರ್ಧ ಗಂಟೆ ನಡೆದ ಈ ಸಭೆಯಲ್ಲಿ ನೂತನ ಹರ್ಯಾಣ ಕಾಂಗ್ರೆಸ್ ಘಟಕದ ಅಧ್ಯಕ್ಷೆಯಾಗಿ ಆಯ್ಕೆಯಾದ ಕುಮಾರಿ ಸೆಲ್ಜಾ ಕೂಡ ಉಪಸ್ಥಿತರಿದ್ದರು ಎನ್ನಲಾಗಿದೆ.


ಕಳೆದ ವಾರ ಮಾಯಾವತಿ ದುಶ್ಯಂತ್ ಚೌತಾಲಾ ನೇತೃತ್ವದ ಜನ್ನಾಯಕ್ ಜನತಾ ಪಕ್ಷ (ಜೆಜೆಪಿ) ಯೊಂದಿಗೆ ತಮ್ಮ ಪಕ್ಷದ ಚುನಾವಣಾ ಪೂರ್ವ ಮೈತ್ರಿಯನ್ನು ಹಿಂತೆಗೆದುಕೊಂಡಿದ್ದರು. ಜೆಜೆಪಿ ಭಾರತೀಯ ರಾಷ್ಟ್ರೀಯ ಲೋಕ ದಳದ (ಐಎನ್‌ಎಲ್‌ಡಿ) ಒಡೆದ ಬಣ.ಜೆಜೆಪಿ ಬಿಎಸ್ಪಿಗೆ 40 ಸ್ಥಾನಗಳನ್ನು ನೀಡಿದ್ದಕ್ಕೆ ಅದು ನಿರಾಕರಿಸಿತು ಎನ್ನಲಾಗಿದೆ. 


ಪ್ರಧಾನಿ ಮೋದಿ ಭಾನುವಾರದಂದು ರೋಹ್ಟಕ್ ನಲ್ಲಿ ತಮ್ಮ ನೂರು ದಿನಗಳ ಆಡಳಿತದ ಅವಧಿಯಲ್ಲಿನ ವರದಿಯನ್ನು  ಮಂಡಿಸಿದರು. ಇದೇ ವೇಳೆ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಿದ ಹರಿಯಾಣದ ಹಾಲಿ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರನ್ನು ಅವರು ಶ್ಲಾಘಿಸಿದರು.