ನವದೆಹಲಿ: ಶೌಚಾಲಯಗಳನ್ನು ಬಳಸುವುದರಿಂದ ನಿಮ್ಮ ಉಳಿತಾಯ ಹೆಚ್ಚಾಗುತ್ತದೆ. ಇದೇನು ವಿಚಿತ್ರ ಅಂತ ಯೋಚನೆ ಮಾಡ್ತಾ ಇದೀರಾ? ಹೌದು, ಇದು ವಿಚಿತ್ರವಾದರೂ ಸತ್ಯ. ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ, ಸರ್ಕಾರವು ಮೊದಲ ದಿನದಂದು ಆರ್ಥಿಕ ಸಮೀಕ್ಷೆಯನ್ನು ಮಂಡಿಸಿತು. ಈ ಸಮೀಕ್ಷೆಯಲ್ಲಿ, ಸರ್ಕಾರದ ಶುಚಿತ್ವ ಕಾರ್ಯಕ್ರಮವನ್ನೂ ಸೇರಿಸಲಾಗಿದೆ. ಈ ಮಿಷನ್ ಆರೋಗ್ಯ ಮತ್ತು ಆರ್ಥಿಕ ಪರಿಣಾಮವನ್ನು ಒಳಗೊಂಡಿದೆ ಎಂದು ಹೇಳಲಾಗಿದೆ. 


COMMERCIAL BREAK
SCROLL TO CONTINUE READING

ಬಹಿರ್ದೆಸೆ ಮುಕ್ತ ಗ್ರಾಮವಾಗಿ ಮಾಡುವ ಮೂಲಕ, ಪ್ರತಿ ಕುಟುಂಬವು ವಾರ್ಷಿಕವಾಗಿ ಸುಮಾರು 50 ಸಾವಿರ ರೂಪಾಯಿಗಳನ್ನು ಉಳಿಸುತ್ತದೆ ಎಂದು ಸರ್ಕಾರ ಹೇಳಿದೆ. ಆದರೂ, ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸರ್ಕಾರ ಬಹಿರಂಗ ಪಡಿಸಿಲ್ಲ. ಶೌಚಾಲಯಗಳ ಬಳಕೆಯು ಕುಟುಂಬದಲ್ಲಿ ಆರೋಗ್ಯ ಸಂಬಂಧಿತ ಖರ್ಚುಗಳನ್ನು ಕಡಿಮೆಗೊಳಿಸುತ್ತದೆ ಮತ್ತು ಅದು ಕುಟುಂಬದ ನೇರ ಉಳಿತಾಯವೆಂದು ತಜ್ಞರು ಹೇಳುತ್ತಾರೆ. ಆರ್ಥಿಕ ಸಮೀಕ್ಷೆ ವರದಿ ಪ್ರಕಾರ, ಈವರೆಗೆ, ಇಡೀ ದೇಶದಲ್ಲಿ 296 ಜಿಲ್ಲೆಗಳು ಮತ್ತು 3,07,349 ಗ್ರಾಮಗಳನ್ನು ಬಹಿರ್ದೆಸೆ ಮುಕ್ತ ಗ್ರಾಮಗಳೆಂದು ಘೋಷಿಸಲಾಗಿದೆ.