ಗಂಡ ಚೆನ್ನಾಗಿಲ್ಲ ಅಂತ ಕಿಸ್ ಮಾಡ್ತಾನೇ ನಾಲಿಗೆ ಕಚ್ಚಿದ್ಲು ಗರ್ಭಿಣಿ ಹೆಂಡ್ತಿ!
ಗಂಡನನ್ನು ದೆಹಲಿಯ ಸಫ್ದರ್ಗಂಜ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ನಾಲಿಗೆಗೆ ಸರ್ಜರಿ ಮಾಡಲಾಗಿದೆ.
ನವದೆಹಲಿ: ನೋಡಲು ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಗರ್ಭಿಣಿ ಪತ್ನಿ ತನ್ನ ಗಂಡನ ನಾಲಿಗೆಯನ್ನೇ ಕಚ್ಚಿ ತುಂಡರಿಸಿದ ಆತಂಕಕಾರಿ ಘಟನೆ ಭಾನುವಾರ ಬೆಳಕಿಗೆ ಬಂದಿದೆ.
ದೆಹಲಿಯ ರಣಹೋಲಾ ಪ್ರದೇಶದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಗಂಡ ನೋಡಲು ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಮತ್ತು ಗಂಡ-ಹೆಂಡತಿ ನಡುವೆ ಸದಾ ಮನಸ್ತಾಪ ಏರ್ಪಟ್ಟು, ಜಗಳವಾಡುತ್ತಿದ್ದರು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ.
ಶನಿವಾರ ರಾತ್ರಿ ಗಂಡ-ಹೆಂಡತಿ ನಡುವೆ ಸಣ್ಣ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಪತ್ನಿ ಸಿಟ್ಟಿನಿಂದ ಕುಳಿತಿದ್ದಾಗ, ಸಮಾಧಾನ ಮಾಡಲು ಆತ 22 ವರ್ಷದ ಪತ್ನಿಗೆ ಮುತ್ತಿಡಲು ಮುಂದಾಗಿದ್ದಾನೆ. ಈ ವೇಳೆ ಆಕೆ ಕೋಪದಲ್ಲಿ ಆತನ ಅರ್ಧ ನಾಲಿಗೆಯನ್ನು ಕಚ್ಚಿದ್ದು ನಾಲಿಗೆಗೆ ಗಂಭೀರ ಗಾಯವಾಗಿದೆ.
ಈ ಬಗ್ಗೆ ಪೊಲೀಸರು ಪತಿಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಆತನನ್ನು ದೆಹಲಿಯ ಸಫ್ದರ್ಗಂಜ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ನಾಲಿಗೆಗೆ ಸರ್ಜರಿ ಮಾಡಲಾಗಿದೆ. ಆದರೆ, ಆತ ಮುಂದೆ ಮಾತನಾಡಲು ಸಾಧ್ಯವಾಗಲಿದೆಯೇ, ಇಲ್ಲವೇ ಎಂಬುದನ್ನು ಕಾಡು ನೋಡಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲಿಗೆ ಕಚ್ಚಿದ ಪತ್ನಿಯು 8 ತಿಂಗಳ ಗರ್ಭಿಣಿ ಎಂದು ತಿಳಿದುಬಂದಿದೆ. ಈ ಜೋಡಿ ನವೆಂಬರ್ 20, 2016ರಲ್ಲಿ ವಿವಾಹವಾಗಿದ್ದರು.