ಪಾಟ್ನಾ: ಬಿಹಾರ ಆರೋಗ್ಯ ಸಚಿವ ಮಂಗಲ್ ಪಾಂಡೆ ರಾಜ್ಯದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸಲು ಲಕ್ಷಾಂತರ ರೂ. ಖರ್ಚು ಮಾಡುತ್ತಿರುವುದಾಗಿ ಹೇಳುತ್ತಿದ್ದರೂ, ವಾಸ್ತವ ಬೇರೆ ಕಥೆಯನ್ನೇ ಹೇಳುತ್ತಿದೆ. ರಾಜ್ಯದ ಅತಿದೊಡ್ಡ ಆಸ್ಪತ್ರೆಯಾದ ಪಾಟ್ನಾ ಮೆಡಿಕಲ್ ಕಾಲೇಜು ಆಸ್ಪತ್ರೆ (ಪಿಎಂಸಿಹೆಚ್) ಅಲ್ಲಿನ ಕನಿಷ್ಠ ಸೌಲಭ್ಯವನ್ನು ಒದಗಿಸದೆ ಇರುವುದಕ್ಕೆ ಸಾಕ್ಷಿಯಾಗಿದೆ. ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ಕರೆತಂದ ಕುಟುಂಬವು ಸ್ಟ್ರೆಚರ್ ಸಿಗದೆ ಗಂಟೆಗಳ ಕಾಲ ಪರದಾಡಿದ ದೃಶ್ಯ ಕಂಡು ಬಂದಿದೆ.


COMMERCIAL BREAK
SCROLL TO CONTINUE READING

ರಾಜ್ಯದ ಅತಿದೊಡ್ಡ ಆಸ್ಪತ್ರೆಯಲ್ಲಿ, ಗರ್ಭಿಣಿ ಮಹಿಳೆಗೆ ಸ್ಟ್ರೆಚರ್ ಸಿಗದ ಕಾರಣ ಗರ್ಭಿಣಿ ಮಹಿಳೆಯನ್ನು ಆಕೆಯ ಪತಿ ಮಗುವಂತೆ ಭುಜದ ಮೇಲೆ ಕರೆದುಕೊಂಡು ಹೋಗಿದ್ದಾರೆ. ಆದರೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿ ಮಹಿಳೆ ಧೈರ್ಯವನ್ನು ಕಳೆದುಕೊಂಡಾಗ, ಅವಳು ನೆಲದ ಮೇಲೆ ಮಲಗಬೇಕಾಯಿತು.


ಮಾಹಿತಿಯ ಪ್ರಕಾರ, ಗರ್ಭಿಣಿ ಮಹಿಳೆಯ ಸಂಬಂಧಿಕರು ಆಸ್ಪತ್ರೆಗೆ ಬಂದ ಕೂಡಲೇ ಸ್ಟ್ರೆಚರ್ ಗಾಗಿ ಒತ್ತಾಯಿಸಿದರು. ಆದರೆ ಅದಕ್ಕಾಗಿ ಆಸ್ಪತ್ರೆ ಸಿಬ್ಬಂದಿ ಕುಟುಂಬದವರಲ್ಲಿ 100 ರೂ. ಬೇಡಿಕೆ ಇಟ್ಟಿದ್ದಾರೆ. ಬಡ ಕುಟುಂಬಸ್ಥರ ಬಳಿ ಕೇವಲ 30 ರೂಪಾಯಿ ಮಾತ್ರ  ಲಭ್ಯವಿತ್ತು. ಇದರಿಂದಾಗಿ ಆಸ್ಪತ್ರೆಯ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಸ್ಟ್ರೆಚರ್ ಮೇಲೆ ಕರೆದೊಯ್ಯಲು ನಿರಾಕರಿಸಿದರು. ಈ ಘಟನೆಯ ಬಗ್ಗೆ ಪಿಎಂಸಿಎಚ್ ನಿರ್ವಹಣೆ ಏನನ್ನೂ ಮಾತನಾಡುತ್ತಿಲ್ಲ. ಇದು ಮಾತ್ರವಲ್ಲ, ರೋಗಿಯ ಸಂಬಂಧಿಕರನ್ನು ಭೇಟಿಯಾಗಲು ಯಾರಿಗೂ ಅವಕಾಶ ನೀಡುತ್ತಿಲ್ಲ.


ಮಾಧ್ಯಮಗಳಲ್ಲಿ ಸುದ್ದಿಯಾದ ನಂತರ, ಎಚ್ಚೆತ್ತ ಪಿಎಂಸಿಎಚ್ ವೈದ್ಯರು ಮಹಿಳೆಗೆ ಚಿಕಿತ್ಸೆಯನ್ನು ಪ್ರಾರಂಭಿಸಿದರು.