ನವದೆಹಲಿ: CDS General Bipin Rawat ಅವರ ಹೆಲಿಕಾಪ್ಟರ್ ಅಪಘಾತ ಪ್ರಕರಣದ (CDS Bipin Rawat Helicopter Crash Case) ತನಿಖೆಗಾಗಿ ರಚಿಸಲಾದ ತನಿಖಾ ತಂಡದ ಪ್ರಾಥಮಿಕ ವರದಿ (Primary Investigation Report) ಹೊರಬಿದ್ದಿದೆ. ಯಾವುದೇ ಯಾಂತ್ರಿಕ ವೈಫಲ್ಯ, ನಿರ್ಲಕ್ಷ್ಯ ಅಥವಾ ಯಾವುದೇ ರೀತಿಯ ವಿಧ್ವಂಸಕತೆಯ ಸಾಧ್ಯತೆಯನ್ನು ವರದಿ ತಳ್ಳಿಹಾಕಿದೆ.


COMMERCIAL BREAK
SCROLL TO CONTINUE READING

ಹೆಲಿಕಾಪ್ಟರ್ ಇದ್ದಕ್ಕಿದ್ದಂತೆ ದಟ್ಟವಾದ ಮೋಡಗಳಿಂದ ಸುತ್ತುವರೆದಿತ್ತು
ತನಿಖಾ ತಂಡದ ಪ್ರಾಥಮಿಕ ವರದಿಯ ಪ್ರಕಾರ, ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಹೆಲಿಕಾಪ್ಟರ್ ತಮಿಳುನಾಡಿನಲ್ಲಿ (Tamil Nadu) ಸರಿಯಾದ ಮಾರ್ಗದಲ್ಲಿಯೇ ಚಲಿಸುತ್ತಿತ್ತು. ಹಠಾತ್ತನೆ ವಾತಾವರಣದಲ್ಲಿ ವ್ಯತ್ಯಯ ಉಂಟಾಗಿ ಹೆಲಿಕಾಪ್ಟರ್ ಸುತ್ತಲೂ ದಟ್ಟವಾದ ಮೋಡಗಳು ಆವರಿಸಿದ್ದವು. ನಂತರ ಪೈಲಟ್ ನಿಯಂತ್ರಣ ಕಳೆದುಕೊಂಡು ಪರ್ವತ ಪ್ರದೇಶದಲ್ಲಿ ಹೆಲಿಕ್ಯಾಪ್ಟರ್ ಪತನಗೊಂಡಿತು (Helicopter Crash) ಎಂದು ವರದಿ ಹೇಳಿದೆ. ಈ ಅಪಘಾತದಲ್ಲಿ ಜನರಲ್ ರಾವತ್ ಸೇರಿದಂತೆ ಹೆಲಿಕಾಪ್ಟರ್‌ನಲ್ಲಿದ್ದ 14 ಮಂದಿ ಸಾವನ್ನಪ್ಪಿದ್ದರು. 


ರಕ್ಷಣಾ ಸಚಿವರಿಗೆ ತನಿಖೆಯ ಬಗ್ಗೆ ಮಾಹಿತಿ
ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ (VR Chaudhari) ಅವರ ನಿರ್ದೇಶನದ ಮೇರೆಗೆ ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ (Manavendra Singh) ಈ ತನಿಖೆ ನಡೆಸಿದ್ದಾರೆ. ಜನವರಿ 5 ರಂದು ನಡೆಸಲಾದ ತನಿಖೆಯ ಫಲಿತಾಂಶಗಳ ಬಗ್ಗೆ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ದಿನ ನೀಲಗಿರಿ ಬೆಟ್ಟಗಳ ಮೇಲೆ ಹಾರುತ್ತಿದ್ದಾಗ ಹೆಲಿಕಾಪ್ಟರ್ Mi-17V5 ಸಾಮಾನ್ಯ ಹಾರಾಟ ನಡೆಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.


ಪೈಲಟ್‌ಗಳಿಗೆ ಮುಂಬರುವ ಅಪಾಯದ ಮುನ್ಸೂಚನೆ ಇರಲಿಲ್ಲ
ಪೈಲಟ್ ಮತ್ತು ಪ್ರಯಾಣಿಕರೆಲ್ಲರಿಗೂ ಕೂಡ ಸನ್ನಿಹಿತ ಅಪಾಯದ ಬಗ್ಗೆ ತಿಳಿದಿರಲಿಲ್ಲ. ನಂತರ ಇದ್ದಕ್ಕಿದ್ದಂತೆ ಹವಾಮಾನವು ಹೆಚ್ಚಿನ ವೇಗದಲ್ಲಿ ತಿರುಗಿದೆ ಮತ್ತು ಹೆಲಿಕಾಪ್ಟರ್ ಮೋಡಗಳಲ್ಲಿ ಕಳೆದುಹೋಗಿದೆ. ವರದಿಯು ಯಾವುದೇ ಮಾನವ ದೋಷ ಅಥವಾ ನ್ಯಾವಿಗೇಷನ್ ಕೊರತೆಯನ್ನು ತಳ್ಳಿಹಾಕಿದೆ.


ಇದನ್ನೂ ಓದಿ-New Road Saftey Norms Soon: ರಸ್ತೆ ಅಪಘಾತದಲ್ಲಿ ಇನ್ಮುಂದೆ ಜನರ ಪ್ರಾಣ ಹೋಗಲ್ಲ, ಕೇಂದ್ರ ಸರ್ಕಾರದ ಸಿದ್ಧತೆ ಇದು


ಬೆಟ್ಟದ ಮೇಲೆ ಪತನಗೊಂಡ ಹೆಲಿಕ್ಯಾಪ್ಟರ್
CDS ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಸೇನೆಯ-ವಾಯುಪಡೆಗೆ ಸೇರಿದ 12 ಅಧಿಕಾರಿಗಳು ಡಿಸೆಂಬರ್ 8 ರಂದು ವೆಲ್ಲಿಂಗ್‌ಟನ್ ಏರ್‌ಬೇಸ್‌ಗೆ ಹೋಗಲು ಸೂಲೂರ್ ಏರ್‌ಬೇಸ್‌ನಿಂದ ಪ್ರಯಾಣ ಬೆಳೆಸಿದ್ದರು. ವೆಲ್ಲಿಂಗ್ಟನ್ ವಾಯುನೆಲೆಯನ್ನು ತಲುಪುವ ಕೆಲವೇ ನಿಮಿಷಗಳ ಮೊದಲು, ಹೆಲಿಕಾಪ್ಟರ್ ನೀಲಗಿರಿ ಬೆಟ್ಟಗಳ ಮೇಲೆ ನಿಯಂತ್ರಣ ಕೊಠಡಿಯೊಂದಿಗೆ ತನ್ನ ಸಂಪರ್ಕವನ್ನು ಕಳೆದುಕೊಂಡಿತು ಮತ್ತು ಬೆಟ್ಟಗಳಿಗೆ ಅಪ್ಪಳಿಸಿದೆ.


ಇದನ್ನೂ ಓದಿ-ಫೆಬ್ರುವರಿ 1 ಕ್ಕೆ ಕೇಂದ್ರ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್


ಅನೇಕ ಸೇನಾ ಅಧಿಕಾರಿಗಳು ಹುತಾತ್ಮರಾಗಿದ್ದಾರೆ
ಮೂಲಗಳ ಪ್ರಕಾರ, ಬೆಟ್ಟಗಳಲ್ಲಿ ವಾಸಿಸುವ ಜನರು ಘಟನೆಯ ಮೊದಲು ಹೆಲಿಕಾಪ್ಟರ್‌ನ ವೀಡಿಯೊ ರೆಕಾರ್ಡಿಂಗ್ ಮಾಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದರಿಂದ ಹೆಲಿಕಾಪ್ಟರ್ ಕಡಿಮೆ ಎತ್ತರದಲ್ಲಿ ಹಾರಾಡುತ್ತಿದ್ದು, ಆಕಾಶದಲ್ಲಿ ಮೋಡ ಕವಿದ ವಾತಾವರಣವಿತ್ತು. ಘಟನೆಯಲ್ಲಿ ಸಾವನ್ನಪ್ಪಿದವರಲ್ಲಿ ಜನರಲ್ ಬಿಪಿನ್ ರಾವತ್ ಅವರ ರಕ್ಷಣಾ ಸಲಹೆಗಾರ ಬ್ರಿಗೇಡಿಯರ್ ಎಲ್ಎಸ್ ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ಸಿಬ್ಬಂದಿ ಮತ್ತು ಪೈಲಟ್ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಕೂಡ ಶಾಮೀಲಾಗಿದ್ದಾರೆ. 


ಇದನ್ನೂ ಓದಿ-EPF ನಲ್ಲಿ 25 ವರ್ಷದಿಂದ ಹೂಡಿಕೆ ಆರಂಭಿಸಿ ನಿವೃತ್ತಿಗೆ ಮಿಲಿಯನೇರ್ ಆಗಿ : ಹೇಗೆ ಇಲ್ಲಿದೆ ಲೆಕ್ಕಾಚಾರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.