ಪ್ರಯಾಗ್ ರಾಜ್ : ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹಾಗೂ ಅವರ ಪತ್ನಿ ಪ್ರಯಾಗ್ ರಾಜ ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ  ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.ಇದೇ ಸಂದರ್ಭದಲ್ಲಿ  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಗವರ್ನರ್ ರಾಮ್ ನಾಯ್ಕ್ ಕೂಡ ಉಪಸ್ಥಿತರಿದ್ದರು ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಕುಂಭಮೇಳದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ರಾಷ್ಟ್ರಪತಿ ಕೋವಿಂದ್ ಅರೈಲ್ ಗೆ ಹೋದರು.ಇವರ ಜೊತೆ  ಮುಖ್ಯಮಂತ್ರಿ ಯೋಗಿ ಮತ್ತು ಗವರ್ನರ್ ರಾಮ್ ನಾಯಕ್ ಕೂಡ ಸಾತ್ ನೀಡಿದರು.ಪಿಐಬಿಗೆ ನೀಡಿದ ಪತ್ರಿಕಾ ಹೇಳಿಕೆಯ ಪ್ರಕಾರ ರಾಷ್ಟ್ರಪತಿಗಳು ಅರಳಿ ಹತ್ತಿರದ ಪರ್ಮಾತ್ ನಿಕೇತನ ಆಶ್ರಮದಲ್ಲಿ ಎರಡು ದಿನಗಳ ಗಾಂಧೀಜಿಯ ಪುನಶ್ಚೇತನ ಶೃಂಗಸಭೆಯನ್ನು ಉದ್ಘಾಟಿಸಲಿದ್ದಾರೆ ಎನ್ನಲಾಗಿದೆ.



ಈ ವರ್ಷದ ಕುಂಭಮೇಳ ಎಂದಿನಂತೆ ನಾಗಾ ಸಾಧುಗಳ ಮೂಲಕ ಗಮನ ಸೆಳೆಯಿತು.ವಿಶೇಷವೆಂದರೆ ಈ ಬಾರಿಯ ಕುಂಭಮೇಳ ಅತಿ ದುಬಾರಿ ವೆಚ್ಚದ್ದು ಎಂದು ಹೇಳಲಾಗಿದೆ.ಸರ್ಕಾರಿ ಮೂಲಗಳು ಹೇಳುವಂತೆ 4 ಸಾವಿರ ಕೋಟಿಗೂ ಅಧಿಕ ಹಣವನ್ನು ಈ ಕುಂಭ ಮೇಳಕ್ಕಾಗಿ ಮೀಸಲಿಡಲಾಗಿದೆ.


ಯೋಗಿ ಸರ್ಕಾರ ಆರು ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಅರ್ಧಕುಂಭವೆಂದು 12 ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಮಹಾಕುಂಭವೆಂದು ಹೆಸರಿಸಿದೆ.ಅಲಹಾಬಾದ್ ನಿಂದ ಪ್ರಯಾಗ್ ರಾಜ್ ಎಂದು ನಗರದ ಹೆಸರನ್ನು ಮರುನಾಮಕರಣ ಮಾಡಿದ ನಂತರ ಇದೇ ಮೊದಲ ಭಾರಿಗೆ ಇಲ್ಲಿ ಕುಂಭಮೇಳ ನಡೆಯುತ್ತಿದೆ.