ಚಿತ್ತೂರು:  ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಜುಲೈ 13 ಮತ್ತು 14 ರಂದು ತಿರುಮಲಕ್ಕೆ ಎರಡು ದಿನಗಳ ಭೇಟಿ ನೀಡಲಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.


COMMERCIAL BREAK
SCROLL TO CONTINUE READING

ಚಿತ್ತೂರು ಜಿಲ್ಲಾಧಿಕಾರಿ ಡಾ.ನಾರಾಯಣ್ ಭಾರತ್ ಗುಪ್ತಾ ಮಾತನಾಡಿ, ರಾಷ್ಟ್ರಪತಿಗಳ ಭೇಟಿಗೆ ಮುಂಚಿತವಾಗಿ ದೇವಾಲಯದಲ್ಲಿ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.


ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಅವರು ಎರಡು ದಿನಗಳ ಭೇಟಿಗಾಗಿ ತಿರುಮಲಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳುವ ದೃಷ್ಟಿಯಿಂದ ತಿರುಮಲ ತಿರುಪತಿಯಲ್ಲಿ ಸಮನ್ವಯ ಸಭೆ ನಡೆಸಿ ಭದ್ರತಾ ವ್ಯವಸ್ಥೆಗಳ ಕುರಿತು ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.


ಈ ಸಭೆಯಲ್ಲಿ ಜಂಟಿ ಕಾರ್ಯನಿರ್ವಾಹಕ ಅಧಿಕಾರಿ (ಜೆಇಒ) ಬಸಂತ್ ಕುಮಾರ್, ಮುಖ್ಯ ಭದ್ರತೆ ಮತ್ತು ವಿಜಿಲೆನ್ಸ್ ಅಧಿಕಾರಿ (ಸಿವಿಎಸ್ಒ) ಗೋಪಿನಾಥ್ ಜೆಟ್ಟಿ, ಎಸ್ಪಿ ಅನ್ಬುರಾಜನ್, ಜಂಟಿ ಸಂಗ್ರಾಹಕ ಡಿ ಮಾರ್ಕಂಡೆಲು ಮತ್ತು ಉಪ ಸಂಗ್ರಾಹಕ ಡಾ.ಮಹೇಶ್ ಕುಮಾರ್ ಹಾಜರಿದ್ದರು ಎಂದು ಹೇಳಲಾಗಿದೆ.