BBC Documentary on PM Narendra Modi: ಪಿಎಂ ನರೇಂದ್ರ ಮೋದಿ ಕುರಿತು ಬಿಬಿಸಿಯ ವಿವಾದಾತ್ಮಕ ಸಾಕ್ಷ್ಯಚಿತ್ರ ಸಂಬಂಧ ನಡೆಯುತ್ತಿರುವ ಗಲಾಟೆಗಳು ನಿಲ್ಲುವಂತೆ ಕಾಣುತ್ತಿಲ್ಲ. ಎಡಪಂಥೀಯ ಸಂಘಟನೆಗಳಿಗೆ ಸಂಬಂಧಿಸಿದ ಸಂಸ್ಥೆಗಳು ಈ ನಿಷೇಧಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಬೇಕೆಂದು ನಿರಂತರವಾಗಿ ಹಠ ಹಿಡಿದಿವೆ.


COMMERCIAL BREAK
SCROLL TO CONTINUE READING

ದೆಹಲಿಯ ಜೆಎನ್‌ಯು ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಎಡ ಸಂಘಟನೆಗಳು ಈ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಬೇಕೆಂದು ಉದ್ದೇಶಿಸಿತ್ತು. ಆದರೆ ಯೂನಿಯನ್ ಕಚೇರಿಯಲ್ಲಿ ವಿದ್ಯುತ್ ಹಾಗೂ ಇಂಟರ್ ನೆಂಟ್ ಸಂಪರ್ಕವನ್ನು ವಿವಿ ಆಡಳಿತ ಕಡಿತಗೊಳಿಸಿದ್ದು ಡಾಕ್ಯುಮೆಂಟರಿ ಪ್ರದರ್ಶಿಸಲು ಸಾಧ್ಯವಾಗಲಿಲ್ಲ ಎಂದು JNUSU ಅನ್ನು ಆಕ್ರಮಿಸಿಕೊಂಡಿರುವ ಕಮ್ಯುನಿಸ್ಟ್ ಸಂಘಟನೆಗಳು ಆರೋಪಿಸಿವೆ.


ಇದನ್ನೂ ಓದಿ: Viral Video: ಹೆಣ್ಣು ಹುಟ್ಟಿತೆಂದು ಮೂಗು ಮುರಿಯುವ ಜನರ ಮಧ್ಯೆ ಈ ತಂದೆ ಮಾಡಿದ ಮಹಾಕಾರ್ಯ ನೋಡಿ: ಶಹಬ್ಬಾಶ್ ಎನ್ನುವುದು ಖಂಡಿತ


ಮತ್ತೊಂದೆಡೆ ಇಂದು ಅಂದರೆ ಜನವರಿ 27 ರಂದು, ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳ ಬಂಧನವನ್ನು ವಿರೋಧಿಸಿ ಕ್ಯಾಂಪಸ್‌ನಲ್ಲಿ ಮೆರವಣಿಗೆ ನಡೆಸಲಾಗಿದೆ.


ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕ್ಷಮತೆಯನ್ನು ಗಮನದಲ್ಲಿಟ್ಟುಕೊಂಡು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಆಡಳಿತವು ಜನವರಿ 27 ರಂದು ತರಗತಿಗಳನ್ನು ನಡೆಸದಿರಲು ಚಿಂತಿಸಿದೆ. ಆದರೆ  ವಿಶ್ವವಿದ್ಯಾಲಯದ ಕಚೇರಿಗಳು ತೆರೆದಿರುತ್ತವೆ ಮತ್ತು ಅವುಗಳಲ್ಲಿ ಸಾಮಾನ್ಯ ಕೆಲಸಗಳನ್ನು ಮಾಡಲಾಗುತ್ತದೆ. ವಿಶ್ವವಿದ್ಯಾನಿಲಯದ ವಕ್ತಾರರು ಹೊರಡಿಸಿದ ಹೇಳಿಕೆ ಪ್ರಕಾರ, ವಿವಿಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಳೆದ 3 ದಿನಗಳಿಂದ ಗಣರಾಜ್ಯೋತ್ಸವದ ಸಿದ್ಧತೆಯಲ್ಲಿ ತೊಡಗಿದ್ದರು. ಇದರಿಂದಾಗಿ ಅವರು ಜನವರಿ 27 ರಂದು ತರಗತಿಗಳನ್ನು ಮುಚ್ಚುವಂತೆ ಮನವಿ ಮಾಡಿದ್ದಾರೆ. ಅವರ ಮನವಿಯನ್ನು ಸ್ವೀಕರಿಸಿ ಶುಕ್ರವಾರ ತರಗತಿಗಳನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಲಾಗಿದೆ. ಇದಕ್ಕೂ ಮುನ್ನ ಜನವರಿ 25 ರಂದು, ಗಲಾಟೆಯ ಆತಂಕದಿಂದಾಗಿ ಹೆಚ್ಚಿನ ತರಗತಿಗಳನ್ನು ರದ್ದುಗೊಳಿಸಲಾಗಿದೆ.


ಶುಕ್ರವಾರ, ಪ್ರಧಾನಿ ನರೇಂದ್ರ ಮೋದಿ ಅವರು ಬೋರ್ಡ್ ಪರೀಕ್ಷೆಗೆ ಹಾಜರಾಗುವ ದೇಶಾದ್ಯಂತದ ಎಲ್ಲಾ ವಿದ್ಯಾರ್ಥಿಗಳೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಪರೀಕ್ಷೆಯ ಕುರಿತು ಚರ್ಚಿಸಲಿದ್ದಾರೆ ಎಂದು ವಿಶ್ವವಿದ್ಯಾಲಯದ ವಕ್ತಾರರು ತಿಳಿಸಿದ್ದಾರೆ. ಇದಕ್ಕಾಗಿ ಜಾಮಿಯಾದಲ್ಲೂ ವ್ಯವಸ್ಥೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಬಂಧಿಸಿದ ಈ ಕಾರ್ಯಕ್ರಮವನ್ನು ಕ್ಯಾಂಪಸ್‌ನ 3 ಸ್ಥಳಗಳಲ್ಲಿ ನೇರಪ್ರಸಾರ ಮಾಡಲು ವ್ಯವಸ್ಥೆ ಮಾಡಲಾಗಿದೆ. ವಕ್ತಾರರ ಪ್ರಕಾರ, ವಿಶ್ವವಿದ್ಯಾನಿಲಯದಲ್ಲಿ ಯಾವುದೇ ರೀತಿಯ ಉದ್ವಿಗ್ನತೆ ಇಲ್ಲ ಮತ್ತು ಎಲ್ಲವೂ ಸುಗಮವಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳ ಸಣ್ಣ ಗುಂಪು ಅವಾಂತರ ಸೃಷ್ಟಿಸುತ್ತಿದೆ. ಅವರಿಗೆ ಅರ್ಥವಾಗುವಂತೆ ತಿಳಿ ಹೇಳಲಾಗುವುದು ಎಂದು ಹೇಳಿದ್ದಾರೆ


ಇದನ್ನೂ ಓದಿ: ಮುಂದಿನ ವರ್ಷದಿಂದ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ಸಿಗಲಿದೆ ನಿರುದ್ಯೋಗಿ ಭತ್ಯೆ


2002 ರಲ್ಲಿ ಗುಜರಾತ್‌ನಲ್ಲಿ ನಡೆದ ಗಲಭೆಯ ಕುರಿತು ಬ್ರಿಟನ್‌ನ ಪ್ರಸಾರ ಸಂಸ್ಥೆ ಬಿಬಿಸಿ ವಿವಾದಾತ್ಮಕ ಸಾಕ್ಷ್ಯಚಿತ್ರವನ್ನು ನಿರ್ಮಿಸಿದೆ. ಈ ಸಾಕ್ಷ್ಯಚಿತ್ರದಲ್ಲಿ ಸತ್ಯಗಳನ್ನು ತಪ್ಪಾಗಿ ಮತ್ತು ತಿರುಚಲಾಗಿದೆ ಎಂದು ಭಾರತ ಸರ್ಕಾರ ಹೇಳುತ್ತಿದೆ. ಇದು ಬಿಬಿಸಿಯ ವಸಾಹತುಶಾಹಿ ಮನಸ್ಥಿತಿಯನ್ನು ತೋರಿಸುತ್ತದೆ. ಭಾರತ ಸರ್ಕಾರವು ಈ ಸಾಕ್ಷ್ಯಚಿತ್ರವನ್ನು ದೇಶಾದ್ಯಂತ ನಿಷೇಧಿಸಿದೆ. ಇದರ ಹೊರತಾಗಿಯೂ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಈ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಹಠ ಹಿಡಿದಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಲಿಂಕ್ ಮಾಡುತ್ತಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.