Primary ಯಿಂದ ಹಿಡಿದು PGವರೆಗಿನ ಎಲ್ಲ ಪುಸ್ತಕಗಳು ಇಲ್ಲಿ ಆನ್ಲೈನ್ ನಲ್ಲಿ ಸಿಗಲಿವೆ
ಕೊರೊನಾ ವೈರಸ್ ಮಹಾಮಾರಿಯ ಹಿನ್ನೆಲೆ ಇಡೀ ವಿಶ್ವಾದ್ಯಂತ ಸ್ಕೂಲ್-ಕಾಲೇಜುಗಳು ಬಂದ್ ಆಗಿವೆ. ಇನ್ನೊಂದೆಡೆ ಕೊವಿಡ್-19 ಸೋಂಕಿತರ ಸಂಖ್ಯೆಯಲ್ಲಿಯೂ ಕೂಡ ನಿರಂತರ ಏರಿಕೆಯಾಗುತ್ತಿರುವ ಕಾರಣ ಶಾಲಾ-ಕಾಲೇಜುಗಳು ತೆರೆದುಕೊಳ್ಳುವ ಲಕ್ಷಣಗಳೂ ಕೂಡ ಇನ್ನೂ ಕಂಡುಬರುತ್ತಿಲ್ಲ.
ನವದೆಹಲಿ: ಸ್ಕೂಲ್-ಕಾಲೇಜುಗಳು ಬಂದ್ ಆಗಿವೆ. ಇನ್ನೊಂದೆಡೆ ಕೊವಿಡ್-19 ಸೋಂಕಿತರ ಸಂಖ್ಯೆಯಲ್ಲಿಯೂ ಕೂಡ ನಿರಂತರ ಏರಿಕೆಯಾಗುತ್ತಿರುವ ಕಾರಣ ಶಾಲಾ-ಕಾಲೇಜುಗಳು ತೆರೆದುಕೊಳ್ಳುವ ಲಕ್ಷಣಗಳೂ ಕೂಡ ಇನ್ನೂ ಕಂಡುಬರುತ್ತಿಲ್ಲ. ಏತನ್ಮಧ್ಯೆ ಮಕ್ಕಳಿಗಾಗಿ ಆನ್ಲೈನ್ ನಲ್ಲಿಯೇ ತರಗತಿಗಳು ಹಾಗೂ ಪರೀಕ್ಷೆಗಳು ನಡೆಯುತ್ತಿವೆ. ಈ ನಡುವೆ ಸರ್ಕಾರ ವಿದ್ಯಾರ್ಥಿಗಳಿಗೆ ನೆರವು ಒದಗಿಸುವ ಉದ್ದೇಶದಿಂದ ಒಂದು ಒಂಲಿಂದ್ ಲೈಬ್ರರಿ ಸಿದ್ಧಪಡಿಸಿದೆ. ಈ ಲೈಬ್ರರಿ ವಿಶೇಷತೆ ಎಂದರೆ ಇದರಲ್ಲಿ ನಿಮಗೆ ಪ್ರೈಮರಿ ತರಗತಿಗಳಿಂದ ಹಿಡಿದು ಸ್ನಾತಕೋತ್ತರ ತರಗತಿಗಳವರೆಗೆ ಹಾಗೂ ಕಾನೂನು, ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಗಳಂತಹ ವೃತ್ತಿಪರ ಕೋರ್ಸ್ ಗಳ ಪುಸ್ತಕಗಳು ಒಂದೇ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯ ಇರಲಿವೆ.
ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಿದ್ಧಪಡಿಸಿರುವ ಈ ರಾಷ್ಟ್ರೀಯ ಡಿಜಿಟಲ್ ಲೈಬ್ರರಿಯಲ್ಲಿ 4.5 ಲಕ್ಷಕ್ಕೂ ಅಧಿಕ ಪುಸ್ತಕಗಳ ಸಂಗ್ರಹ ಇದೆ. https://ndl.iitkgp.ac.in ಲಿಂಕ್ ಗೆ ಭೇಟಿ ನೀಡುವ ಮೂಲಕ ನೀವು ಈ ಲೈಬ್ರರಿಯನ್ನು ಆಕ್ಸಸ್ ಮಾಡಬಹುದು.
ಈ ಲೈಬ್ರರಿ ದೇಶಾದ್ಯಂತ ಇರುವ ಎಲ್ಲ ವಿದ್ಯಾರ್ಥಿಗಳಿಗಾಗಿ ಈ ಲೈಬ್ರರಿ ಇರಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ರಮೇಶ್ ಪೋಖರಿಯಾಲ್ ನಿಶಾಂಕ್ ತಿಳಿಸಿದ್ದಾರೆ. ಈ ಪೋರ್ಟಲ್ ಪ್ರೈಮರಿ ತರಗತಿಯಿಂದ ಹಿಡಿದು, ಸ್ನಾತಕೋತ್ತರ ತರಗತಿಯವರೆಗಿನ ಎಲ್ಲ ವಿಷಯಗಳನ್ನು ಒಳಗೊಂಡಿದೆ.ಉದಾಹರಣೆಗೆ ಇದರಲ್ಲಿ ಸಾಮಾನ್ಯ ವಿಜ್ಞಾನ. ಲಿಟರೇಚರ್, ಕಾನೂನು, ಮೆಡಿಕಲ್ ಇತ್ಯಾದಿ ವಿಷಯಗಳನ್ನು ಒಳಗೊಂಡಿದೆ.
ನ್ಯಾಷನಲ್ ಡಿಜಿಟಲ್ ಲೈಬ್ರರಿಯಲ್ಲಿ ಪ್ರಾದೇಶಿಕ ಭಾಷೆಗಳ ಪುಸ್ತಕಗಳು ಕೂಡ ಇವೆ ಎಂದು ಕೇಂದ್ರ ಸಚಿವ ನಿಶಾಂಕ್ ಹೇಳಿದ್ದಾರೆ.ಇದುವರೆಗೆ ಈ ಲೈಬ್ರರಿಯಲ್ಲಿ ಸುಮಾರು 4.60 ಲಕ್ಷ ಪುಸ್ತಕಗಳ ಡಿಜಿಟೈಜೆಷನ್ ಕಾರ್ಯ ಪೂರ್ಣಗೊಳಿಸಲಾಗಿದೆ. ಪ್ರತಿಯೊಂದು ರಾಜ್ಯದ ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯಲ್ಲಿ ಇಲ್ಲಿ ಪುಸ್ತಕಗಳನ್ನು ಓದಬಹುದಾಗಿದೆ.
ದೇಶಾದ್ಯಂತ ಘೋಷಿಸಲಾಗಿರುವ ಲಾಕ್ ಡೌನ್ ನಿಂದ P.hD ಹಾಗೂ MPhil ಮತ್ತು ಇತರೆ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರಭಾವಿತರಾಗಿದ್ದು, ಇಂತಹ ವಿದ್ಯಾರ್ಥಿಗಳಿಗಾಗಿ ಸಾವಿರಾರು ಜರ್ನಲ್ ಹಾಗೂ ಪುಸ್ತಕಗಳನ್ನು ಇದೀಗ ಆನ್ಲೈನ್ ನಲ್ಲಿ ಒದಗಿಸುವ ಕಾರ್ಯ ಈ ಲೈಬ್ರರಿ ಮಾಡಲಿದೆ.