Loksabha Election 2024: ಕನ್ಯಾಕುಮಾರಿಯ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಪ್ರಧಾನ ಮಂತ್ರಿ ಮೋದಿ ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಮುನ್ನ ಧ್ಯಾನ ಮಾಡಲಿದ್ದಾರೆ.


COMMERCIAL BREAK
SCROLL TO CONTINUE READING

ಲೋಕಸಭೆ ಚುನಾವಣೆ 2024ರ ಪ್ರಚಾರ ಮುಕ್ತಾಯದ ನಂತರ ಸಂಕ್ಷಿಪ್ತ ಆಧ್ಯಾತ್ಮಿಕ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೇ 30 ರಂದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿರುವ ಪ್ರಸಿದ್ಧ ವಿವೇಕಾನಂದ ರಾಕ್ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಮೇ 30 ರಿಂದ ಜೂನ್ 1 ರವರೆಗೆ ಧ್ಯಾನ ಮಂಟಪದಲ್ಲಿ ಧ್ಯಾನ ಮಾಡಲಿದ್ದಾರೆ.


ಇದನ್ನೂ ಓದಿ: ನಟಿ ಸಾಯಿಪಲ್ಲವಿ ಕೂದಲು ಅಷ್ಟೊಂದು ಉದ್ದವಾಗಿ ಕಡುಕಪ್ಪಾಗಿ ಬೆಳೆಯಲು ಬಳಸೋದು ಈ ಎಲೆಯ ರಸವನ್ನಂತೆ!


ಮೇ 30 ರಂದು ಪ್ರಧಾನಿ ಮೋದಿ ಸಂಜೆ ಕನ್ಯಾಕುಮಾರಿ ಕರಾವಳಿಯ ಸಮುದ್ರದ ಮಧ್ಯದಲ್ಲಿರುವ ತಮಿಳು ಸಂತ ತಿರುವಳ್ಳುವರ್ ಅವರ ಏಕಶಿಲೆಯ ಪ್ರತಿಮೆಯ ಸಮೀಪದಲ್ಲಿರುವ ಸುಂದರವಾದ ವಿಆರ್‌ಎಂಗೆ ಆಗಮಿಸುವ ನಿರೀಕ್ಷೆಯಿದೆ ಮತ್ತು ಜೂನ್ 1 ರಂದು ದೆಹಲಿಗೆ ತೆರಳುವ ನಿರೀಕ್ಷೆಯಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.


ಸ್ವಾಮಿ ವಿವೇಕಾನಂದರು ಭಾರತ ಮಾತೆಯ ದರ್ಶನ ಪಡೆದ ಸ್ಥಳ ಕನ್ಯಾಕುಮಾರಿ ಎಂದು ಹೇಳಲಾಗುತ್ತದೆ. ವಿವೇಕಾನಂದ ರಾಕ್ ಸ್ಮಾರಕವು ಸಮುದ್ರದ ಬಂಡೆಯ ಮೇಲೆ ನೆಲೆಗೊಂಡಿದ್ದು, ಇದು ಮುಖ್ಯ ಭೂಭಾಗದಿಂದ ಸುಮಾರು 500 ಮೀಟರ್ ದೂರದಲ್ಲಿದೆ. ಗೌತಮ ಬುದ್ಧನ ಜೀವನದಲ್ಲಿ ಸಾರನಾಥಕ್ಕೆ ವಿಶೇಷ ಸ್ಥಾನವಿದೆ ಎಂಬುದು ನಂಬಿಕೆ ಅಂತೆಯೇ ಈ ವಿಗ್ರಹವು  ಸ್ವಾಮಿ ವಿವೇಕಾನಂದರ ಜೀವನದಲ್ಲಿಯೂ ಸಹ ಅದೇ ಸ್ಥಾನವನ್ನು ಹೊಂದಿದೆ.


ಕನ್ಯಾಕುಮಾರಿಯು ಭಾರತದ ದಕ್ಷಿಣದ ತುದಿಯನ್ನು ಗುರುತಿಸುತ್ತದೆ ಜೊತೆಗೆ ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಗಳು ಸಂಧಿಸುವ ಸ್ಥಳವಾಗಿದೆ. ಇದು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ಸಂಗಮ ಸ್ಥಳವೂ ಹೌದು.


ಸ್ಮಾರಕವನ್ನು ನಿರ್ಮಿಸಲಾಗಿರುವ ಈ ರಾಕ್ ಅನ್ನು ವಿವೇಕಾನಂದರು ಜ್ಞಾನೋದಯ ಪಡೆದ ಸ್ಥಳವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ, ಈ ಸ್ಥಳದಲ್ಲಿ ಕನ್ಯಾಕುಮಾರಿ ದೇವಿಯು ಶಿವನನ್ನು ಪ್ರಾರ್ಥಿಸಿದಳು ಎಂದು ಪುರಾಣವು ಹೇಳುತ್ತದೆ. ಹೀಗಾಗಿ ಭಾರತದ ಧಾರ್ಮಿಕ ನಕ್ಷೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.


ಇದನ್ನೂ ಓದಿ: ದಕ್ಷಿಣ ಭಾರತದ ಈ ನಟನೆಂದರೆ ವಿರಾಟ್’ಗೆ ಪಂಚಪ್ರಾಣ: ಆತ ಪ್ರಶಸ್ತಿ ಗೆದ್ದಾಗ ಕುಣಿದು ಕುಪ್ಪಳಿಸಿದ್ರಂತೆ ಕಿಂಗ್ ಕೊಹ್ಲಿ


ಲೋಕಸಭೆ ಚುನಾವಣೆಯ ಏಳನೇ ಮತ್ತು ಅಂತಿಮ ಹಂತದ ಪ್ರಚಾರ ಮೇ 30 ರಂದು ಕೊನೆಗೊಳ್ಳಲಿದ್ದು, ಜೂನ್ 1 ರಂದು ಮತದಾನ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.