ನವದೆಹಲಿ:  2019 ರ ಅರ್ಥಶಾಸ್ತ್ರದಲ್ಲಿನ ನೊಬೆಲ್ ವಿಜೇತ ಅಭಿಜಿತ್ ಬ್ಯಾನರ್ಜಿ ಅವರು ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು.


COMMERCIAL BREAK
SCROLL TO CONTINUE READING

ಇದಾದ ನಂತರ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅಭಿಜಿತ್ ಬ್ಯಾನರ್ಜಿ ಅವರ ಸಾಧನೆ ಬಗ್ಗೆ ಭಾರತ ಹೆಮ್ಮೆ ಪಡುತ್ತದೆ ಎಂದು ಹೇಳಿದ್ದಾರೆ. ವಿಶೇಷವೆಂದರೆ ಬಿಜೆಪಿ ನಾಯಕರು ಬ್ಯಾನರ್ಜಿ ಅವರನ್ನು ಎಡಪಂಥೀಯ ಎಂದು ಟೀಕಿಸಿದ ಬೆನ್ನಲ್ಲೇ ಈಗ ಪ್ರಧಾನಿ ಮೋದಿ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 



'ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಅವರೊಂದಿಗೆ ಅತ್ಯುತ್ತಮ ಸಭೆ. ಮಾನವ ಸಬಲೀಕರಣದ ಬಗೆಗಿನ ಅವರ ಉತ್ಸಾಹ ಸ್ಪಷ್ಟವಾಗಿ ಗೋಚರಿಸುತ್ತದೆ. ನಾವು ವಿವಿಧ ವಿಷಯಗಳ ಬಗ್ಗೆ ಆರೋಗ್ಯಕರ ಮತ್ತು ವ್ಯಾಪಕವಾದ ಸಂವಾದವನ್ನು ನಡೆಸಿದೆವು . ಅವರ ಸಾಧನೆಗಳ ಬಗ್ಗೆ ಭಾರತ ಹೆಮ್ಮೆಪಡುತ್ತದೆ' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.


ಇನ್ನೊಂದೆಡೆ ಪ್ರಧಾನಿ ಮೋದಿ ಜೊತೆಗಿನ ಭೇಟಿ ವಿಚಾರವಾಗಿ ಮಾತನಾಡಿರುವ ಅಭಿಜಿತ್ ಬ್ಯಾನರ್ಜಿ ಅವರು "ಪ್ರಧಾನಿ ಮೋದಿ ಭಾರತದ ಬಗ್ಗೆ ಅವರ ಆಲೋಚನಾ ವಿಧಾನದ ಬಗ್ಗೆ ಸಾಕಷ್ಟು ಮಾತನಾಡಲು ಸಾಕಷ್ಟು ಸಮಯವನ್ನು ನೀಡಿದರು, ಅದು ನಿಜಕ್ಕೂ ವಿಶಿಷ್ಟವಾಗಿದೆ. ಸಾಮಾನ್ಯವಾಗಿ ವ್ಯಕ್ತಿ ನೀತಿಗಳ ಬಗ್ಗೆ ಕೇಳಿರುತ್ತೇವೆ ಆದರೆ ಅದರ ಹಿಂದಿನ ಆಲೋಚನೆ ಬಗ್ಗೆ ನಾವು ವಿರಳವಾಗಿ ಕೇಳಲ್ಪಟ್ಟಿರುತ್ತೇವೆ ಎಂದು ಅವರು ಹೇಳಿದರು.