ನವದೆಹಲಿ:  ಪ್ರಧಾನಮಂತ್ರಿ ನರೇಂದ್ರ ಮೋದಿ ನೆನ್ನೆಯಷ್ಟೇ ತಮ್ಮ 70ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ದೇಶಾದ್ಯಂತ ಕೋಟ್ಯಂತರ ಜನರ ಪ್ರೀತಿಯ ಶುಭಾಶಯಗಳ ಜೊತೆಗೆ ವಿಶ್ವದ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ.


COMMERCIAL BREAK
SCROLL TO CONTINUE READING

ಇದೀಗ ತಮ್ಮ ಜನ್ಮದಿನಕ್ಕಾಗಿ ಏನು ಉಡುಗೊರೆ ಬೇಕು ಎಂದು ಹಲವು ಮಂದಿ ಕೇಳಿದ್ದಾರೆ ಎನ್ನುವ ಮೂಲಕ ತಮ್ಮ ಜನ್ಮದಿನಕ್ಕೆ ಯಾವ ಗಿಫ್ಟ್ ಗಳು ಬೇಕು ಎಂಬ ಪಟ್ಟಿಯನ್ನು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಟ್ವೀಟ್‌ನಲ್ಲಿ ತಿಳಿಸಿದ್ದಾರೆ.


ಪ್ರಧಾನಿ ಮೋದಿಯವರಿಗೆ ಜನ್ಮದಿನಕ್ಕೆ ಉಡುಗೊರೆಯಾಗಿ ಬೇಕಿರುವ ಗಿಫ್ಟ್ ಗಳ ಪಟ್ಟಿ ಇಲ್ಲಿದೆ...


* ಮಾಸ್ಕ್ (Mask) ಧರಿಸಿ ಮತ್ತು ಸರಿಯಾದ ರೀತಿಯಲ್ಲಿ ಧರಿಸಿ


* ಸಾಮಾಜಿಕ ಅಂತರವನ್ನು (Social Distance) ಕಾಯ್ದುಕೊಳ್ಳಿ. ಎರಡು ಗಜಗಳ ಅಂತರದಲ್ಲಿರಬೇಕು ಎಂಬುದನ್ನು ನೆನಪಿಡಿ 


* ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ


* ಎಲ್ಲರೂ ಒಗ್ಗೂಡಿ ನಮ್ಮ ಜಗತ್ತನ್ನು ಆರೋಗ್ಯಕರವಾಗಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ @ 70: ಹೋರಾಟದ ಭೂಮಿಯಿಂದ ರಾಜ್‌ಪಾತ್‌ವರೆಗೆ
ಪ್ರಧಾನಿ ಮೋದಿಯವರ 70ನೇ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿಯಿಂದ 'ಸೇವಾ ಸಪ್ತಾಹ' ಆಚರಣೆ

ಬಿಜೆಪಿ ವತಿಯಿಂದ 'ಸೇವಾ ಸಪ್ತಾಹ':
ಪ್ರಧಾನಿ ನರೇಂದ್ರ ಮೋದಿಯವರ 70 ನೇ ಹುಟ್ಟುಹಬ್ಬವನ್ನು ಸೇವಾ ವಾರ ಎಂದು ಬಿಜೆಪಿ ಆಚರಿಸುತ್ತಿದೆ. ಸೆಪ್ಟೆಂಬರ್ 14 ರಿಂದ 20 ರವರೆಗೆ ನಡೆಯುವ ಈ ಸೇವಾ ಸಪ್ತಾಹದಲ್ಲಿ ಬೂತ್ ಹಂತದವರೆಗಿನ ಪ್ರತಿಯೊಬ್ಬ ಕಾರ್ಮಿಕರು ತಮ್ಮ ಪ್ರದೇಶಗಳಲ್ಲಿ ವಿಭಿನ್ನ ಸೇವೆಯನ್ನು ಮಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಹಣ್ಣುಗಳನ್ನು ವಿತರಿಸುವುದು, ಮಕ್ಕಳಿಗೆ ಪುಸ್ತಕಗಳನ್ನು ನೀಡುವುದು, ರಕ್ತದಾನ ಹೀಗೆ ಹಲವು ರೀತಿಯಲ್ಲಿ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಾಷ್ಟ್ರವ್ಯಾಪಿ ನಡೆಯಲಿರುವ ಸೇವಾ ಸಪ್ತಾಹ ಅಭಿಯಾನಕ್ಕಾಗಿ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಎಲ್ಲಾ ಸಾಂಸ್ಥಿಕ ಘಟಕಗಳು ಮತ್ತು ಕಾರ್ಮಿಕರಿಗೆ ಪ್ರತ್ಯೇಕ ಸೇವಾ ಚಟುವಟಿಕೆಗಳನ್ನು ನಡೆಸುವಂತೆ ಸೂಚನೆ ನೀಡಿದ್ದಾರೆ.