ಪ್ರಧಾನಿ ಮೋದಿಜಿ ನೀವು ಭಯಪಡದೆ ದೇಶಕ್ಕೆ ಸತ್ಯವನ್ನು ಹೇಳಿ ,ಇಡೀ ದೇಶ ನಿಮ್ಮ ಜೊತೆಗಿದೆ - ರಾಹುಲ್ ಗಾಂಧಿ
ಕಳೆದ ವಾರ ಲಡಾಖ್‌ನಲ್ಲಿ ಚೀನಾದ ಪಡೆಗಳೊಂದಿಗಿನ ಘರ್ಷಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ಮೇಲಿನ ದಾಳಿಯನ್ನು ಮುಂದುವರೆಸಿದ್ದಾರೆ.
ನವದೆಹಲಿ: ಕಳೆದ ವಾರ ಲಡಾಖ್‌ನಲ್ಲಿ ಚೀನಾದ ಪಡೆಗಳೊಂದಿಗಿನ ಘರ್ಷಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ಮೇಲಿನ ದಾಳಿಯನ್ನು ಮುಂದುವರೆಸಿದ್ದಾರೆ.
ಇದರಲ್ಲಿ , 20 ಭಾರತೀಯ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ, ಚೀನಾ ಭಾರತದ ಪ್ರದೇಶವನ್ನು ಆಕ್ರಮಿಸಿಕೊಂಡಿದೆಯೇ ಎನ್ನುವ ವಿಚಾರವಾಗಿ ಭಯಪಡದೆ ಸತ್ಯವನ್ನು ಮಾತನಾಡಬೇಕೆಂದು ಕೇಳಿಕೊಂಡರು.ಇಡೀ ದೇಶವು ಸೇನೆ ಮತ್ತು ಸರ್ಕಾರದೊಂದಿಗೆ ಒಟ್ಟಾಗಿ ನಿಂತಿದೆ. ಆದರೆ ಒಂದು ನಿರ್ಣಾಯಕ ಪ್ರಶ್ನೆ ಉಳಿದಿದೆ. ಕೆಲವು ದಿನಗಳ ಹಿಂದೆ, ಪ್ರಧಾನಿ 'ಯಾರೂ ಒಂದು ಇಂಚು ಭಾರತೀಯ ಭೂಮಿಯನ್ನು ಸಹ ತೆಗೆದುಕೊಂಡಿಲ್ಲ; ಯಾರೂ ಭಾರತೀಯ ಭೂಪ್ರದೇಶದೊಳಗೆ ಇಲ್ಲ' ಆದರೆ ನಾವು ಕೇಳುತ್ತಿದ್ದೇವೆ, ಉಪಗ್ರಹ ಫೋಟೋಗಳನ್ನು ತೋರಿಸಿದೆ, ಲಡಾಖ್‌ನ ಜನರು ಹೇಳುತ್ತಿದ್ದಾರೆ ಮತ್ತು ಚೀನಾ ನಮ್ಮ ಭೂಮಿಯನ್ನು ಕಸಿದುಕೊಂಡಿದೆ ಎಂದು ನಿವೃತ್ತ ಜನರಲ್‌ಗಳು ಹೇಳುತ್ತಿದ್ದಾರೆ. ಒಂದೇ ಸ್ಥಳದಲ್ಲಿ ಅಲ್ಲ, ಮೂರು ಎಂದು ಗಾಂಧಿ ಅವರು ಟ್ವೀಟ್ ಮಾಡಿದ ವೀಡಿಯೊದಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಜಿ, ನೀವು ಸತ್ಯವನ್ನು ಮಾತನಾಡಬೇಕು. ನೀವು ದೇಶಕ್ಕೆ ಸತ್ಯವನ್ನು ಹೇಳಬೇಕು. ಭಯಪಡಬೇಡಿ. ನಿಜವಾಗಿ 'ಯಾವುದೇ ಭೂಮಿಯನ್ನು ತೆಗೆದುಕೊಳ್ಳಲಾಗಿಲ್ಲ' ಎಂದು ನೀವು ಹೇಳಿದರೆ ಅದು ಚೀನಾಕ್ಕೆ ಪ್ರಯೋಜನವನ್ನು ನೀಡುತ್ತದೆ. ನಾವು ಒಗ್ಗಟ್ಟಾಗಿ ಹೋರಾಡುವ ಮೂಲಕ ಅವರನ್ನು ಹೊರಹಾಕಬೇಕು. ಆದ್ದರಿಂದ ನೀವು ಭಯಪಡದೆ ಸತ್ಯವನ್ನು ಮಾತನಾಡಬೇಕು. 'ಹೌದು, ಚೀನಾ ನಮ್ಮ ಭೂಮಿಯನ್ನು ತೆಗೆದುಕೊಂಡಿದೆ ಮತ್ತು ನಾವು ಕ್ರಮ ಕೈಗೊಳ್ಳಲಿದ್ದೇವೆ' ಎಂದು ಹೇಳಿ. ಇಡೀ ದೇಶ ನಿಮ್ಮೊಂದಿಗೆ ನಿಂತಿದೆ ”ಎಂದು ಅವರು ಹಿಂದಿಯಲ್ಲಿ ಹೇಳಿದರು.
ಮತ್ತೊಂದು ಟೀಕಾ ಪ್ರಹಾರದಲ್ಲಿ ರಾಹುಲ್ ಗಾಂಧಿ "ಮತ್ತು ಕೊನೆಯ ಪ್ರಶ್ನೆ. ನಮ್ಮ ಹುತಾತ್ಮರನ್ನು ನಿರಾಯುಧವಾಗಿ ಕಳುಹಿಸಿದವರು ಯಾರು? ಮತ್ತು ಏಕೆ?" ಎಂದು ಪ್ರಶ್ನಿಸಿದ್ದಾರೆ.