ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರು ಇಂದು ಬೆಳಿಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಿ ಕಚೇರಿ ಮಾಹೀತಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ವೇಳೆ ಕರೋನಾ ವಿರುದ್ಧದ ಹೋರಾಟದಲ್ಲಿ ದೇಶವು 100 ಕೋಟಿ ಕರೋನಾ ಲಸಿಕೆ ಪ್ರಮಾಣವನ್ನು ನೀಡಿ ಇತಿಹಾಸ ನಿರ್ಮಿಸಿರುವ ಬಗ್ಗೆ ಮಾತನಾಡಬಹುದು ಎಂದು ನಿರೀಕ್ಷಿಸಲಾಗಿದೆ. 


COMMERCIAL BREAK
SCROLL TO CONTINUE READING

ಭಾರತವು ಗುರುವಾರ 100 ಕೋಟಿ ಲಸಿಕೆ ಪ್ರಮಾಣಗಳ ಐತಿಹಾಸಿಕ ಅಂಕಿಅಂಶವನ್ನು ದಾಟಿದೆ:
ಇಡೀ ಜಗತ್ತನ್ನೇ ತನ್ನ ಕಪಿಮುಷ್ಠಿಯಲ್ಲಿ ಬಂದಿಸಿದ್ದ ಕರೋನಾವೈರಸ್ (Coronavirus) ಎಂಬ ಸಾಂಕ್ರಾಮಿಕದ ವಿರುದ್ಧದ ವ್ಯಾಕ್ಸಿನೇಷನ್ ಅಭಿಯಾನದ ಅಡಿಯಲ್ಲಿ ಭಾರತವು 100 ಕೋಟಿ ಡೋಸ್ ಗಡಿ ದಾಟಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ದೇಶವನ್ನು ಅಭಿನಂದಿಸಿದ್ದಾರೆ. ಕಳೆದ 100 ವರ್ಷಗಳ ಅತಿದೊಡ್ಡ ಜಾಗತಿಕ ಸಾಂಕ್ರಾಮಿಕ ರೋಗವನ್ನು ಎದುರಿಸಲು ದೇಶವು ಈಗ ಬಲವಾದ 'ರಕ್ಷಣಾ ಕವಚ' ಹೊಂದಿದೆ ಎಂದು ಅವರು ಹೇಳಿದರು.


Corona Returns In China: ಚೀನಾದಲ್ಲಿ ಮತ್ತೆ ಕರೋನಾ ಹಾವಳಿ; ಹಲವು ನಗರಗಳಲ್ಲಿ ಲಾಕ್‌ಡೌನ್‌


ಲಸಿಕೆಯ ಈ ಸಾಧನೆಯನ್ನು ಭಾರತೀಯ ವಿಜ್ಞಾನ, ಉದ್ಯಮ ಮತ್ತು 130 ಕೋಟಿ ಭಾರತೀಯರ ಸಾಮೂಹಿಕ ಸ್ಫೂರ್ತಿಯ ವಿಜಯ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಬಣ್ಣಿಸಿದ್ದರು. ಈ ಸಂದರ್ಭದಲ್ಲಿ ಗುರುವಾರ ರಾಮ್ ಮನೋಹರ್ ಲೋಹಿಯಾ  (ಆರ್‌ಎಂಎಲ್) ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ, ಅಲ್ಲಿ ಆರೋಗ್ಯ ಕಾರ್ಯಕರ್ತರು, ಫ್ರಂಟ್ ಲೈನ್ ವಾರಿಯರ್ಸ್ ಮತ್ತು ಲಸಿಕೆ ಪಡೆಯಲು ಬಂದಿದ್ದ ಫಲಾನುಭವಿಗಳೊಂದಿಗೆ ಮಾತನಾಡಿದ್ದರು.


ಇದು ಭಾರತದ ಸಾಧನೆ, ಭಾರತದ ಪ್ರತಿಯೊಬ್ಬ ಪ್ರಜೆಯ ಸಾಧನೆ:
ಕಳೆದ 100 ವರ್ಷಗಳ ಅತಿದೊಡ್ಡ ಜಾಗತಿಕ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ದೇಶವು ಈಗ 100 ಕೋಟಿ ಡೋಸ್ ಲಸಿಕೆಗಳ (Corona Vaccine) ಪ್ರಬಲವಾದ 'ರಕ್ಷಣಾ ಕವಚ' ಹೊಂದಿದೆ. ಇದು ಭಾರತದ ಸಾಧನೆ, ಭಾರತದ ಪ್ರತಿಯೊಬ್ಬ ಪ್ರಜೆಯ ಸಾಧನೆ ಎಂದು ಅವರು ಬಣ್ಣಿಸಿದ್ದರು.


ಇದನ್ನೂ ಓದಿ-  ಅಮರೀಂದರ್ ಸಿಂಗ್ ಕೇಂದ್ರದ ಮೂರು ಕೃಷಿ ಕಾನೂನುಗಳ ಶಿಲ್ಪಿ-ನವಜೋತ್ ಸಿಂಗ್ ಸಿಧು


'ಭಾರತ ಇತಿಹಾಸ ಸೃಷ್ಟಿಸಿದೆ. ನಾವು ಭಾರತೀಯ ವಿಜ್ಞಾನ, ಉದ್ಯಮ ಮತ್ತು 130 ಕೋಟಿ ಭಾರತೀಯರ ಸಾಮೂಹಿಕ ಮನೋಭಾವದ ವಿಜಯವನ್ನು ನೋಡುತ್ತಿದ್ದೇವೆ. ವ್ಯಾಕ್ಸಿನೇಷನ್ ನಲ್ಲಿ 100 ಕೋಟಿ ಗಡಿ ದಾಟಿದ ಭಾರತಕ್ಕೆ ಅಭಿನಂದನೆಗಳು. ನಮ್ಮ ವೈದ್ಯರು, ದಾದಿಯರು ಮತ್ತು ಈ ಸಾಧನೆ ಮಾಡಲು ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಧನ್ಯವಾದ ಸಲ್ಲಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.