ನವದೆಹಲಿ: ಒಂದು ವಾರದ ಯುಎಸ್ ಭೇಟಿಯನ್ನು ಮುಕ್ತಾಯಗೊಳಿಸಿದ ನಂತರ ಶನಿವಾರ ಭಾರತಕ್ಕೆ ಹಿಂತಿರುಗಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಲಂ ವಿಮಾನ ನಿಲ್ದಾಣದಲ್ಲಿ ಆದರದ ಸ್ವಾಗತ ದೊರೆಯಿತು.



COMMERCIAL BREAK
SCROLL TO CONTINUE READING

ಶನಿವಾರ ರಾತ್ರಿ 8.15 ರ ಸುಮಾರಿಗೆ ಅವರ ವಿಮಾನ, ಪಾಲಂ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಪ್ರಧಾನಿ ಮೋದಿಯವರನ್ನು ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಪಕ್ಷದ ಮುಖಂಡರು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊ೦ಡರು.ಪ್ರಧಾನಿ ಮೋದಿಯವರನ್ನು ಬರಮಾಡಿಕೊಳ್ಳಲು ಪಾಲಂ ವಿಮಾನ ನಿಲ್ದಾಣದ ಬಳಿ ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದರು. ಪ್ರಧಾನಮಂತ್ರಿಯನ್ನು ಸ್ವಾಗತಿಸಲು ಪಕ್ಷವು ಪಾಲಂ ವಿಮಾನ ನಿಲ್ದಾಣದಲ್ಲಿ ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿಕೊಂಡಿತ್ತು.



ವಿಶ್ವಸಂಸ್ಥೆಯಲ್ಲಿನ ಪ್ರಧಾನಿ ಮೋದಿಯವರ ಅಭೂತಪೂರ್ವ ಭಾಷಣವನ್ನು ಉಲ್ಲೇಖಿಸಿ ಅವರನ್ನು ಸ್ವಾಗತಿಸುವ ಬ್ಯಾನರ್ ಹಾಗೂ ಹೋರ್ಡಿಂಗ್ ಗಳು ಪಾಲಂ ವಿಮಾನ ನಿಲ್ದಾಣದ ಹೊರಗಿನ ಮುಖ್ಯರಸ್ತೆ ಎರಡು ಬದಿಯಲ್ಲಿ ಹಾಕಲಾಗಿತ್ತು. ಬಿಜೆಪಿ ಪ್ರಕಾರ ವಿಮಾನ ನಿಲ್ದಾಣದಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಜನರು ಜಮಾಯಿಸಿದ್ದರು ಎನ್ನಲಾಗಿದೆ.



ಪ್ರಧಾನಿ ಮೋದಿ ವಿಶ್ವಸಂಸ್ಥೆ 74 ನೇ ಸಾಮಾನ್ಯ ಸಭೆ ಅಧಿವೇಶನದಲ್ಲಿ ಹವಾಮಾನ ಬದಲಾವಣೆ, ಭಯೋತ್ಪಾಧನೆ ನಿಯಂತ್ರಣ, ಒಳಗೊಳ್ಳುವಿಕೆ ಅಭಿವೃದ್ದಿ ಕುರಿತಾಗಿ ಭಾಷಣ ಮಾಡಿ ಗಮನ ಸೆಳೆದಿದ್ದರು.