ನವದೆಹಲಿ: 11 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಎರಡು ದಿನಗಳ ಬ್ರೆಜಿಲ್ ಪ್ರವಾಸಕ್ಕೆ ತೆರಳಿದ್ದಾರೆ.  


COMMERCIAL BREAK
SCROLL TO CONTINUE READING

ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾಗಳನ್ನು ಒಳಗೊಂಡಿರುವ ಬ್ರಿಕ್ಸ್ ವಿಶ್ವದ ಶೇಕಡಾ 42 ರಷ್ಟು ಜನಸಂಖ್ಯೆಯನ್ನು ಹೊಂದಿದೆ, ಅಷ್ಟೇ ಅಲ್ಲದೆ ಜಾಗತಿಕ ಆರ್ಥಿಕತೆಯಲ್ಲಿ ಹೆಚ್ಚಿನ ಪಾಲನ್ನು ಹೊಂದಿದೆ, ಜಾಗತಿಕ ಒಟ್ಟು ದೇಶೀಯ ಉತ್ಪನ್ನದ ಶೇಕಡಾ 23 ರಷ್ಟು ಮತ್ತು ಶೇ 17 ರಷ್ಟು ಜಾಗತಿಕ ವ್ಯಾಪಾರವನ್ನು ಒಳಗೊಂಡಿದೆ. ಈ ವರ್ಷದ ಶೃಂಗಸಭೆಯ ವಿಷಯವು ಆರ್ಥಿಕ ಬೆಳವಣಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಿದೆ.


ನವೆಂಬರ್ 13 ರ ಬೆಳಿಗ್ಗೆ ಪ್ರಧಾನಿ ಮೋದಿ ಬ್ರೆಸಿಲಿಯಾಕ್ಕೆ ಆಗಮಿಸಲಿದ್ದಾರೆ. ಭೇಟಿಯ ಮೊದಲ ದಿನ ಪ್ರಧಾನ ಮಂತ್ರಿ ಅನೇಕ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ, ಜೊತೆಗೆ ಬ್ರಿಕ್ಸ್ ವ್ಯವಹಾರ ವೇದಿಕೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆ ಎನ್ನಲಾಗಿದೆ. ಈ ಭೇಟಿಯ ಸಮಯದಲ್ಲಿ ವಿಶೇಷವಾಗಿ ಎಲ್ಲಾ ಐದು ದೇಶಗಳ ವ್ಯಾಪಾರ ಸಮುದಾಯವನ್ನು ಪ್ರತಿನಿಧಿಸುವ ಬ್ರಿಕ್ಸ್ ವ್ಯಾಪಾರ ವೇದಿಕೆಯಲ್ಲಿ ಪಾಲ್ಗೊಳ್ಳಲು ಭಾರತದಿಂದ ವ್ಯಾಪಾರ ನಿಯೋಗವೊಂದು ಹಾಜರಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.


ಉನ್ನತ ಮಟ್ಟದ ಮತ್ತು ಕಾರ್ಯನಿರತ ಗುಂಪು ಸಭೆಗಳ ಜಾಲದ ಮೂಲಕ, ಪರಸ್ಪರ ಕಾಳಜಿಯ ಸಮಸ್ಯೆಗಳನ್ನು ಸೇರಿಸಲು ಬ್ರಿಕ್ಸ್ ಕಾರ್ಯಸೂಚಿ ಇತ್ತೀಚಿಗಿನ ವರ್ಷಗಳಲ್ಲಿ ಗಣನೀಯವಾಗಿ ವಿಸ್ತಾರಗೊಂಡಿದೆ. ಭಯೋತ್ಪಾದನೆ ನಿಗ್ರಹದ ವಿಚಾರವಾಗಿ ಬ್ರಿಕ್ಸ್ ನ್ನು ಒಗ್ಗೂಡಿಸಲು ಭಾರತ ಮಹತ್ವದ ಪಾತ್ರವನ್ನು ವಹಿಸಿದೆ.