ನವದೆಹಲಿ: ಸಂಸತ್ ಕಟ್ಟಡದ ಹೊರಭಾಗದಲ್ಲಿ ಶಾಶ್ವತ ವರ್ಣರಂಜಿತ ದೀಪಗಳನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಂಜೆ ಉದ್ಘಾಟಿಸಿದರು.



COMMERCIAL BREAK
SCROLL TO CONTINUE READING

ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಲೋಕಸಭಾ ಸ್ಪೀಕರ್, ರಾಜ್ಯಸಭಾ ಉಪಾಧ್ಯಕ್ಷರು, ಹಲವಾರು ಕ್ಯಾಬಿನೆಟ್ ಮಂತ್ರಿಗಳು ಮತ್ತು ಸಂಸದರು ಉಪಸ್ಥಿತರಿದ್ದರು.



ಒಟ್ಟಾರೆಯಾಗಿ 875 ಎಲ್ಇಡಿ ದೀಪಗಳು ರಾಷ್ಟ್ರದ ಅತಿದೊಡ್ಡ ಪ್ರಜಾಪ್ರಭುತ್ವದ ದೇವಾಲಯವಾದ ಸಂಸತ್ತಿಗೆ ಹೊಸ ಪರಿಸರ ಮತ್ತು ಸೌಂದರ್ಯವನ್ನು ನೀಡುತ್ತದೆ. ಈ ದೀಪಗಳು ವಿದ್ಯುಚ್ಶಕ್ತಿಯನ್ನು ಉಳಿಸುತ್ತವೆ ಮತ್ತು ಪರಿಸರ ಸ್ನೇಹಿಯಾಗಿರುತ್ತವೆ. ಅಲ್ಲದೆ ಆಗಾಗ್ಗೆ ಬಣ್ಣಗಳನ್ನು ಬದಲಾಯಿಸುತ್ತವೆ. ಇದರಿಂದಾಗಿ ಪಾರ್ಲಿಮೆಂಟ್ ಹೌಸ್ ಹೆಚ್ಚು ಭವ್ಯವಾಗಿ ಕಾಣುತ್ತದೆ.



ಈ ದೀಪಗಳನ್ನು ಸಂಸತ್ತು ಗ್ರಂಥಾಲಯ ಮತ್ತು ಸಂಸತ್ತಿನ ಅನುಬಂಧ ಕಟ್ಟಡದಲ್ಲಿಯೂ ಸ್ಥಾಪಿಸಲಾಗಿದೆ. ಸಂಸತ್ತನ್ನು ಈ ಹಿಂದೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮತ್ತು ಮಹಾತ್ಮ ಗಾಂಧಿ ಜಯಂತಿ ಮುಂತಾದ ವಿಶೇಷ ಸಂದರ್ಭಗಳಿಗಾಗಿ ಅಲಂಕರಿಸಲಾಗುತ್ತಿತ್ತು. ಆದರೆ ಈಗ ಈ ದೀಪಗಳನ್ನು ಶಾಶ್ವತ ಸುಂದರಗೊಳಿಸುವ ಲಕ್ಷಣವಾಗಿ ಹೊಂದಿರುತ್ತದೆ. ಸೌತ್ ಬ್ಲಾಕ್ ಮತ್ತು ನಾರ್ತ್ ಬ್ಲಾಕ್ ಅನ್ನು ಈಗಾಗಲೇ ಈ ದೀಪಗಳೊಂದಿಗೆ ಅಳವಡಿಸಲಾಗಿತ್ತು.