ದಕ್ಷಿಣ ಕೊರಿಯಾದಲ್ಲಿ ಪ್ರಧಾನಿ ಮೋದಿ, `ಭಾರತ್ ಮಾತಾಕಿ ಜೈ` ಘೋಷಣೆ ಮೂಲಕ ಸ್ವಾಗತ
ಎರಡು ದಿನಗಳ ಭೇಟಿಗಾಗಿ ದಕ್ಷಿಣ ಕೊರಿಯಾ ತೆರಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ
ನವದಹೆಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಎರಡು ದಿನಗಳ ಭೇಟಿಗಾಗಿ ದಕ್ಷಿಣ ಕೊರಿಯಾ ತಲುಪಿದ್ದಾರೆ. ಗುರುವಾರ ಬೆಳಗಿನ ಜಾವ ಪ್ರಧಾನಿ ಮೋದಿ ದಕ್ಷಿಣ ಕೊರಿಯಾದ ಸಿಯೋಲ್ ತಲುಪುತ್ತಿದ್ದಂತೆ ಭಾರತೀಯ ಸಮುದಾಯ ಅವರನ್ನು ಭವ್ಯವಾಗಿ ಸ್ವಾಗತಿಸಿತು. ಈ ಸಂದರ್ಭದಲ್ಲಿ, ವಂದೇ ಮಾತರಂ ಮತ್ತು ಭಾರತ್ ಮಾತಾ ಕಿ ಜೈ ಎಂಬ ಘೋಷಣೆಗಳು ಕೇಳಿಬಂದವು. ಜೊತೆಗೆ ಹೋಟೆಲ್ ನಲ್ಲಿ ಹರ ಹರ ಮಹಾದೇವ್ ಜಯ ಘೋಷ ಕೂಡ ಕೇಳಿಬಂದಿತು.
ಪ್ರಧಾನಿ ನರೇಂದ್ರ ಮೋದಿ ಕಳೆದ ರಾತ್ರಿ ದಕ್ಷಿಣ ಕೊರಿಯಾ ಪ್ರವಾಸ ಕೈಗೊಂಡಿದ್ದು, ವ್ಯಾಪಾರ ಹಾಗೂ ಹೂಡಿಕೆಯ ಉದ್ದೇಶದಿಂದ ಈ ಭೇಟಿ ಮಹತ್ವ ಪಡೆದುಕೊಂಡಿದೆ. ದಕ್ಷಿಣ ಕೊರಿಯಾ ಮೇಕ್ ಇನ್ ಇಂಡಿಯಾ, ಕ್ಲೀನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಮುಂತಾದ ಕಾರ್ಯಕ್ರಮಗಳಲ್ಲಿ ಮೌಲ್ಯಯುತ ಪಾಲುದಾರ ಮತ್ತು ವಿಶೇಷ ಕಾರ್ಯತಂತ್ರದ ಪಾಲುದಾರರಾಗಿದ್ದು, ಈ ಎರಡು ದಿನಗಳ ಭೇಟಿಯಲ್ಲಿ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಭೇಟಿ ದಕ್ಷಿಣ ಕೊರಿಯಾ ಮತ್ತು ಭಾರತದ ನಡುವಿನ ರಾಜತಾತ್ನ್ರಿಕ ಸಂಬಂಧ ವೃದ್ಧಿ ಹಾಗೂ ತಾಂತ್ರಿಕ ಕುಶಲತೆಯ ಪಾಲುದಾರಿಕೆಯನ್ನು ಬಲಪಡಿಸುತ್ತದೆ. ಹೊಸ ಆಯಾಮವನ್ನು ಪರಿಚಯಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಉಭಯ ರಾಷ್ಟ್ರಗಳು ಪ್ರಾದೇಶಿಕ ಹಾಗೂ ಜಾಗತಿಕ ಶಾಂತಿಗಾಗಿ ಯೋಜನೆಗಳು, ಮೌಲ್ಯಗಳನ್ನು ಹಂಚಿಕೊಳ್ಳುತ್ತಿವೆ ಎಂದು ಪ್ರಧಾನಿ ಮೋದಿ ತಮ್ಮ ದಕ್ಷಿಣ ಕೊರಿಯಾ ಭೇಟಿಗೂ ಮುನ್ನ ತಿಳಿಸಿದರು.
ಆರ್ಥಿಕ ಮಾರುಕಟ್ಟೆಯ ಪಾಲುದಾರನಾಗಿರುವ ದಕ್ಷಿಣ ಕೊರಿಯಾ ನಮ್ಮ ಅವಶ್ಯಕತೆಗಳು ಮತ್ತು ಸಾಮರ್ಥ್ಯವು ಪರಸ್ಪರ ಪೂರಕವಾಗಿದೆ. ದಕ್ಷಿಣ ಕೊರಿಯಾ ಭಾರತದಲ್ಲಿ ಮೇಕ್, ಕ್ಲೀನ್ ಇಂಡಿಯಾ ಮತ್ತು ಸ್ಟಾರ್ಟ್ ಅಪ್ ಇಂಡಿಯಾ ಪ್ರಮುಖ ಪಾಲುದಾರ. ಈ ಭೇಟಿಯ ಸಮಯದಲ್ಲಿ, ಪ್ರಧಾನಿ ಮೋದಿ ದ್ವಿಪಕ್ಷೀಯ ಸಂಬಂಧಗಳ ವೈವಿಧ್ಯಮಯ ಆಯಾಮಗಳನ್ನು ಚರ್ಚಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.
ಫೆಬ್ರವರಿ 21 ರಂದು ಪ್ರಧಾನಿ ನರೇಂದ್ರ ಮೋದಿ ಸಿಯೋಲ್ ತಲುಪಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಈ ಸಂದರ್ಭದಲ್ಲಿ ಅವರು ದಕ್ಷಿಣ ಕೊರಿಯಾದ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಂಬಂಧಗಳ ವಿವಿಧ ಆಯಾಮಗಳು ಮತ್ತು ಇತ್ತೀಚಿನ ಬೆಳವಣಿಗೆಗಳನ್ನು ಚರ್ಚಿಸುತ್ತಾರೆ. ಮೂಲಗಳ ಪ್ರಕಾರ ಉಭಯ ನಾಯಕರು ಸಭೆಯಲ್ಲಿ ಸಾಮಾನ್ಯ ಆಸಕ್ತಿಗಳಿಗೆ ಸಂಬಂಧಿಸಿದ ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಸಮಸ್ಯೆಗಳ ಮೇಲಿನ ಅಭಿಪ್ರಾಯಗಳ ವಿನಿಮಯ, ಸಾಮಾನ್ಯ ಮೌಲ್ಯಗಳು ಮತ್ತು ಹಿತಾಸಕ್ತಿಗಳ ಆಧಾರದ ಮೇಲೆ ಎರಡು ದೇಶಗಳ ನಡುವಿನ ವಿಶೇಷ ಆಯಕಟ್ಟಿನ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದ್ದಾರೆ.
ಈ ಭೇಟಿಯ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 2018 ರ ಸಿಯೋಲ್ ಶಾಂತಿ ಗೌರವ ನೀಡಲಾಗುವುದು. ಸಿಯೋಲ್ ಪೀಸ್ ಆನರ್ ಕಲ್ಚರಲ್ ಫೌಂಡೇಶನ್ ಫೆಬ್ರವರಿ 22 ರಂದು ಸಮಾರಂಭವನ್ನು ಆಯೋಜಿಸಿದೆ. ಶ್ರೀಮಂತರು ಮತ್ತು ಬಡವರ ನಡುವಣ ಆರ್ಥಿಕ ಹಾಗೂ ಸಾಮಾಜಿಕ ಅಂತರ ತಗ್ಗಿಸಲು ಭಾರತ ಮತ್ತು ಜಾಗತಿಕ ಆರ್ಥಿಕ ಅಭಿವೃದ್ಧಿಗೆ ನೀಡಿದ ಕೊಡುಗೆಗಳಿಗಾಗಿ ಮೋದಿ ಈ ಪುರಸ್ಕಾರಕ್ಕೆ ಪಾತ್ರವಾಗಿದ್ದಾರೆ. ಸಿಯೋಲ್ ಶಾಂತಿ ಪ್ರಶಸ್ತಿಗೆ ಆಯ್ಕೆಯಾದ 14ನೇ ಜಾಗತಿಕ ನಾಯಕ ಎಂಬ ಹಿರಿಮೆಯೂ ಮೋದಿ ಅವರಿಗೆ ಸಲ್ಲಿಕೆಯಾಗಿದೆ.