ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸತತ ಎರಡನೆಯ ಬಾರಿ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ವಿದೇಶಿ ಗಣ್ಯರು ಮತ್ತು ಮುಖ್ಯಮಂತ್ರಿಗಳು ಮತ್ತು ಗವರ್ನರ್ಗಳು ಸೇರಿದಂತೆ ಸುಮಾರು 8,000 ಅತಿಥಿಗಳು ಈ ಕ್ಷಣವನ್ನು ಕಣ್ಣು ತುಂಬಿಕೊಂಡರು.



COMMERCIAL BREAK
SCROLL TO CONTINUE READING

ಪ್ರಧಾನಿ ಮೋದಿ ಸತತ ಎರಡನೇ ಬಾರಿಗೆ ಪ್ರಮಾಣವನ್ನು ಸ್ವೀಕರಿಸುವ ಮೂಲಕ ಕಾಂಗ್ರೆಸೇತರ ಪ್ರಧಾನಿಯೊಬ್ಬರು ಸ್ಪಷ್ಟಬಹುಮತದೊಂದಿಗೆ ಸರ್ಕಾರವನ್ನು ಮುನ್ನಡೆಸಿದ ಮೊದಲ ವ್ಯಕ್ತಿ ಎನ್ನುವ ಖ್ಯಾತಿಗೆ ಮೋದಿ ಪಾತ್ರರಾದರು.ಇಂತಹ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿ ವಿದೇಶಿ ಗಣ್ಯರು, ಚಲನಚಿತ್ರ ನಟರು,ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಪಡೆದ ವ್ಯಕ್ತಿಗಳು ಪಾಲ್ಗೊಂಡಿದ್ದರು.ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹಾಜರಾಗುವ ಅತಿಥಿಗಳನ್ನು ಮೊದಲು 7 ಲೋಕ ಕಲ್ಯಾಣ್ ಮಾರ್ಗ್ ದಲ್ಲಿರುವ ಪ್ರಧಾನಿ ಮೋದಿ ನಿವಾಸದಲ್ಲಿ ಚಹಾಕೂಟವನ್ನು ಏರ್ಪಡಿಸಲಾಗಿತ್ತು.  ನಂತರ ಅವರಿಗೆ ಪ್ರಮಾಣ ವಚನ ಸ್ವೀಕರ ಕಾರ್ಯಕ್ರಮ ಮುಗಿದ ನಂತರ ರಾಷ್ಟ್ರಪತಿ ಭವನದಲ್ಲಿ ಎಲ್ಲ ಅತಿಥಿಗಳಿಗೆ ವಿಶೇಷ ಭೋಜನ ಆತಿಥ್ಯವನ್ನು ಏರ್ಪಡಿಸಲಾಗುತ್ತದೆ. 




ಇಂದು ಸಚಿವ ಸಂಪುಟ ಸದಸ್ಯರ ಆಯ್ಕೆಯನ್ನು ಖುದ್ದಾಗಿ ಪ್ರಧಾನಿ ಕರೆ ಮಾಡುವುದರ ಮೂಲಕ ಖಚಿತ ಪಡಿಸಿದ್ದು ವಿಶೇಷವಾಗಿತ್ತು. ಈ ಹಿನ್ನಲೆಯಲ್ಲಿ ಇಂದು ಬಹುತೇಕ  ಸಂಸತ್ ಸದಸ್ಯರು ಪ್ರಧಾನಿಯಿಂದ ಕರೆ ಬರುವುದನ್ನು ನಿರೀಕ್ಷಿಸುತ್ತಿದ್ದರು.ಇಂದು ಪ್ರಧಾನಿ ಮೋದಿ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ರಾಜನಾಥ್ ಸಿಂಗ್, ಅಮಿತ್ ಷಾ ,ನಿತಿನ್ ಗಡ್ಕರಿ, ಸದಾನಂದ್ ಗೌಡ, ನಿರ್ಮಲಾ ಸಿತಾರಾಮನ್, ರಾಮ್ ವಿಲಾಸ್ ಪಾಸ್ವಾನ್, ರವಿಶಂಕರ್ ಪ್ರಸಾದ್, ನರೇಂದ್ರ ಸಿಂಗ್ , ಹರ್ಸಿಮ್ರಾತ್ ಕೌರ್ ಬಾದಲ್, ಸ್ಮೃತಿ ಇರಾನಿ ಅವರು ಪ್ರಮಾಣ ವಚನ ಸ್ವೀಕರಿಸಿದ ಸಚಿವರಲ್ಲಿ ಪ್ರಮುಖರಾಗಿದ್ದಾರೆ.





ಇಂದಿನ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಸದಾನಂದ ಗೌಡ ಇಂಗ್ಲಿಷ್ ನಲ್ಲಿ ಪ್ರಮಾಣ ಸ್ವೀಕರಿಸಿದ ಸಚಿವರಲ್ಲಿ ಮೊದಲಿಗರು.ಇನ್ನೊಂದೆಡೆ ಮಾಜಿ ವಿದೇಶಾಂಗ ಕಾರ್ಯದರ್ಶಿ ಸುಬ್ರಮಣ್ಯ ಜೈಶಂಕರ್ ಅವರು ಪ್ರಮಾಣ ವಚನವನ್ನು ಸ್ವೀಕರಿಸಿದ ರಾಜಕೀಯೇತರ ವ್ಯಕ್ತಿಗಳಾಗಿದ್ದಾರೆ.ಕರ್ನಾಟಕದ ಪರವಾಗಿ ಕೇಂದ್ರ ಸಚಿವ ಸಂಪುಟದಲ್ಲಿ ಸದಾನಂದಗೌಡ, ಸುರೇಶ ಅಂಗಡಿ, ಪ್ರಹ್ಲಾದ ಜೋಷಿ ಹಾಗೂ ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ನಿರ್ಮಲಾ ಸಿತಾರಾಮನ್ ಸ್ಥಾನ ಪಡೆದಿದ್ದಾರೆ.