ನವದೆಹಲಿ: ಪ್ರಸ್ತುತ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ) ಅಡಿಯಲ್ಲಿ ಬಂಧನದಲ್ಲಿರುವ ನ್ಯಾಷನಲ್ ಕಾನ್ಫರೆನ್ಸ್ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು 82 ನೇ ಹುಟ್ಟುಹಬ್ಬದಂದು ಶುಭಾಶಯ ಕೋರಿದ್ದಾರೆ ಎಂದು ಎನ್‌ಸಿ ಮೂಲಗಳು ಶನಿವಾರ ತಿಳಿಸಿವೆ.


COMMERCIAL BREAK
SCROLL TO CONTINUE READING

ಅಕ್ಟೋಬರ್ 21 ರಂದು 82 ನೇ ವರ್ಷಕ್ಕೆ ಕಾಲಿಟ್ಟ ಅಬ್ದುಲ್ಲಾ ಅವರಿಗೆ ಪ್ರಧಾನಿ ಶುಭಾಶಯ ಕೋರಿ ಪತ್ರವೊಂದು ಕಳಿಸಿದ್ದಾರೆಂದು ಮೂಲಗಳು ತಿಳಿಸಿವೆ. ಶ್ರೀನಗರದ ಸಂಸತ್ ಸದಸ್ಯ ಅಬ್ದುಲ್ಲಾ ಅವರು ಗುಪ್ಕರ್ ಪ್ರದೇಶದ ತಮ್ಮ ನಿವಾಸದಲ್ಲಿ ಈ ಪತ್ರವನ್ನು ಸ್ವೀಕರಿಸಿದ್ದು, ಸೆಪ್ಟೆಂಬರ್ 16 ರಂದು ಎನ್‌ಸಿ ಅಧ್ಯಕ್ಷರನ್ನು ಪಿಎಸ್‌ಎ ಅಡಿಯಲ್ಲಿ ದಾಖಲಿಸಿದ ನಂತರ ಅದನ್ನು ಉಪ-ಜೈಲನ್ನಾಗಿ ಪರಿವರ್ತಿಸಲಾಗಿದೆ.


ಅಬ್ದುಲ್ಲಾ ಅವರ ಜನ್ಮದಿನದಂದು ಪ್ರಧಾನಿ ಶುಭಾಶಯಗಳನ್ನು ಕಳುಹಿಸಿ ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸಿದರು ಎಂದು ಎನ್‌ಸಿ ಮೂಲಗಳು ತಿಳಿಸಿವೆ.ಅಬ್ದುಲ್ಲಾ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧಿಸಲಾಯಿತು, ಅವರ ತಂದೆ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಸಂಸ್ಥಾಪಕ ಶೇಖ್ ಮೊಹಮ್ಮದ್ ಅಬ್ದುಲ್ಲಾ ಅವರು ಮುಖ್ಯಮಂತ್ರಿಯಾಗಿದ್ದಾಗ 1978 ರಲ್ಲಿ ಈ ಕಾಯ್ದೆಯನ್ನು ಜಾರಿಗೆ ತಂದಿದ್ದರು.


ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ನಿರ್ಧಾರವನ್ನು ಕೇಂದ್ರವು ಘೋಷಿಸುವ ಕೆಲವೇ ಗಂಟೆಗಳ ಮೊದಲು ಆಗಸ್ಟ್ 4 ರ ರಾತ್ರಿ ಅವರನ್ನು ತಮ್ಮ ನಿವಾಸದಲ್ಲಿ ಗೃಹಬಂಧನಕ್ಕೆ ಒಳಪಡಿಸಲಾಯಿತು.